ಬಾಲಕಿಯರ ರಾಷ್ಟ್ರೀಯ ಹಾಕಿ: ಜಾರ್ಖಂಡ್ ವಿನ್ನರ್ಸ್

| Published : Jan 09 2024, 02:00 AM IST

ಸಾರಾಂಶ

17 ವರ್ಷ ವಯೋಮಿತಿಯ ಶಾಲಾ ಬಾಲಕಿಯರ 67ನೇ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ತಂಡ ಸುಮಾರು 7-1 ಗೋಲಿನ ಅಂತರದಿಂದ ಚಂಡೀಗಢ ತಂಡವನ್ನು ಸೋಲಿಸಿ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

17 ವರ್ಷ ವಯೋಮಿತಿಯ ಶಾಲಾ ಬಾಲಕಿಯರ 67ನೇ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಜಾರ್ಖಂಡ್ ತಂಡ ವಿನ್ನರ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಚಂಡೀಗಢ ತಂಡ ರನ್ನರ್ಸ್ ಗೆ ತೃಪ್ತಿಪಟ್ಟುಕೊಂಡಿತು.

ಸೋಮವಾರ ಮಧ್ಯಾಹ್ನ ಪೊನ್ನಂಪೇಟೆಯ ಹಾಕಿ ಟರ್ಫ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ತಂಡ ಸುಮಾರು 7-1 ಗೋಲಿನ ಅಂತರದಿಂದ ಚಂಡೀಗಢ ತಂಡವನ್ನು ಸೋಲಿಸಿ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿತು.ಮೂರನೇ ಹಾಗೂ ನಾಲ್ಕನೇ ಬಹುಮಾನಕ್ಕೆ ನಡೆದ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವು 1-0 ಗೋಲಿನಿಂದ ಮಣಿಪುರ ತಂಡವನ್ನು ಸೋಲಿಸಿತು. ಜ.3ರಂದು ಕೂಡಿಗೆಯಲ್ಲಿ 17 ವರ್ಷದ ಬಾಲಕಿಯರ ರಾಷ್ಟ್ರ ಮಟ್ಟದ 67 ನೇ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಲಾಗಿತ್ತು. ಪಂದ್ಯಾವಳಿಯಲ್ಲಿ 27 ತಂಡಗಳು ಪಾಲ್ಗೊಂಡಿತ್ತು. ಮಡಿಕೇರಿಯ ಸಾಯಿ ಹಾಕಿ ಮೈದಾನ, ಕೂಡಿಗೆ, ಪೊನ್ನಂಪೇಟೆ ಹಾಗೂ ಸೋಮವಾರಪೇಟೆ ಟರ್ಫ್ ಮೈದಾನದಲ್ಲಿ ಪಂದ್ಯಾವಳಿ ನಡೆದಿತ್ತು. ಫೈನಲ್ ಪಂದ್ಯಾವಳಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿರಾಜಪೇಟೆ ಶಾಸಕ ಕೆ.ಎಸ್. ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಮತ್ತಿತರರು ಪಾಲ್ಗೊಂಡಿದ್ದರು.