ಸಾರಾಂಶ
ಹಳ್ಳಿಮೈಸೂರಿನ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಅತ್ರಿ ಏಜೆನ್ಸಿಸ್ ವತಿಯಿಂದ ನೋಟ್‌ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಸ್ತೂರಿ ಬಾ ಗಾಂಧಿ ಬಾಲಿಕ ವಿದ್ಯಾಲಯದಲ್ಲಿ ಹೆಣ್ಣುಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಕ ವೃಂದದವರಿಗೆ ಮತ್ತು ಪೋಷಕರಿಗೆ ಹೆಸರು ತರಬೇಕು ಎಂದು ತಿಳಿಸಿದರು. ನಂತರ 65 ಹೆಣ್ಣು ಮಕ್ಕಳಿಗೆ ಟೀ ಶರ್ಟ್ ಮತ್ತು 200 ಪುಟಗಳ 6 ನೋಟ್‌ಬುಕ್‌ಗಳನ್ನು ವಿತರಿಸಿ, ಈ ಅವಕಾಶ ಕಲ್ಪಿಸಿಕೊಟ್ಟ ಆಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
"ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ " ಎಂಬ ಗಾದೆ ಮಾತು ಮಹತ್ವದ ಸಂದೇಶ ನೀಡುತ್ತದೆ. ಆದ್ದರಿಂದ ಹೆಣ್ಣು ಮಕ್ಕಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಜತೆಗೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಅಗತ್ಯ ಶಿಕ್ಷಣದ ವ್ಯವಸ್ಥೆ ಕಲ್ಪಿಬೇಕಿದೆ ಎಂದು ಅತ್ರಿ ಏಜೆನ್ಸಿ ಮಾಲೀಕರಾದ ಬಿ.ಎನ್. ಪ್ರಭಾಕರ್ ಅತ್ರಿ ತಿಳಿಸಿದರು.ತಾಲೂಕಿನ ಹಳ್ಳಿಮೈಸೂರಿನ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಅತ್ರಿ ಏಜೆನ್ಸಿಸ್ ವತಿಯಿಂದ ನೋಟ್‌ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಸ್ತೂರಿ ಬಾ ಗಾಂಧಿ ಬಾಲಿಕ ವಿದ್ಯಾಲಯದಲ್ಲಿ ಹೆಣ್ಣುಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಕ ವೃಂದದವರಿಗೆ ಮತ್ತು ಪೋಷಕರಿಗೆ ಹೆಸರು ತರಬೇಕು ಎಂದು ತಿಳಿಸಿದರು. ನಂತರ 65 ಹೆಣ್ಣು ಮಕ್ಕಳಿಗೆ ಟೀ ಶರ್ಟ್ ಮತ್ತು 200 ಪುಟಗಳ 6 ನೋಟ್‌ಬುಕ್‌ಗಳನ್ನು ವಿತರಿಸಿ, ಈ ಅವಕಾಶ ಕಲ್ಪಿಸಿಕೊಟ್ಟ ಆಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸಿದರು.
ತಾಪಂ ಮಾಜಿ ಅಧ್ಯಕ್ಷ ಲಕ್ಕೂರು ಬಸವರಾಜ್, ಬಿಆರ್‌ಸಿ ಕಾಳೇಗೌಡ, ಸಿಆರ್‌ಪಿ ನಟೇಶ್, ಮುಖ್ಯ ಶಿಕ್ಷಕಿ ಲತಕುಮಾರಿ, ಕೆಜಿಬಿವಿ ಶಾಲೆಯ ವಾರ್ಡನ್ ಕೆ.ಎನ್.ಪ್ರೇಮ, ಸಿಆರ್‌ಪಿ ನಟೇಶ್, ಬಿಆರ್‌ಪಿ ಪ್ರಶಾಂತ್, ಇತರರು ಇದ್ದರು.