ಸಾರಾಂಶ
ಮೈಸೂರು: ಹೆಣ್ಣು ಮಕ್ಕಳು ಪುರುಷರಂತೆ ದೃಢತ್ವ, ಸ್ಥೈರ್ಯ ಬೆಳೆಸಿಕೊಳ್ಳಬೇಕು. ಹಾಗೆಯೇ ಪುರುಷರು ಹೆಂಗರಳು ಹೊಂದಬೇಕು ಎಂದು ಹಿರಿಯ ಸಮಾಜ ಸೇವಕ ಕೆ. ರಘುರಾಂ ತಿಳಿಸಿದರು. ನಗರದ ಸಖಿ ಫೌಂಡೇಷನ್ ಮತ್ತು ಸೂರ್ಯ ಚಾರಿಟೇಬಲ್ ಟ್ರಸ್ಟ್ ದ್ವಿತೀಯ ವಾರ್ಷಿಕೋತ್ಸವದಲ್ಲಿ ಗಾಯತ್ರಿ ಸುಂದರೇಶ್ ಸಂಪಾದಕತ್ವದ ದಶಸಖಿ ದಶಮುಖಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹೊಸ ಹೊಸ ಆಲೋಚನೆಗಳು, ವಿಚಾರಶಕ್ತಿಗಳನ್ನು ಕಥಾ ರೂಪದಲ್ಲಿ ಹೊರ ತರುವ ಶಕ್ತಿ ಮಹಿಳಾ ಕಥೆಗಾರ್ತಿಯರಿಗಿದೆ. ಬದುಕಿನ ನೈಜ ಚಿತ್ರಣಗಳನ್ನು ಅಕ್ಷರ ರೂಪದಲ್ಲಿ ಬಿಂಬಿಸುವ ಎಲ್ಲಾ ಕಥೆಗಾರ್ತಿಯರೂ ವಿಶೇಷವೇ ಎಂದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಜಗದೀಶ್ , ಸಿ.ಎನ್. ಮುಕ್ತಾ, ವಸುಮತಿ ಉಡುಪ, ಉಷಾ ನರಸಿಂಹನ್, ಸವಿತಾ ಪ್ರಭಾಕರ್, ಸವಿತಾ ವೆಂಕಟೇಶ್, ಬಿ.ಆರ್. ನಾಗರತ್ನಾ, ಪದ್ಮಾ ಆನಂದ್, ಹೇಮಮಾಲಾ, ಗಾಯತ್ರಿ ಸುಂದರೇಶ್ ಬರೆದಿರುವ ದಶ ಮುಖಿ ಕೃತಿ ಕುರಿತು ಬಿ.ಆರ್. ನಾಗರತ್ನಾ ಮಾತನಾಡಿದರು. ಇದೇ ವೇಳೆ ಪಟಕ್ಕೊಂದು ಪದ್ಯ ಎಂಬ ಕಾವ್ಯ ಸಿಂಚನದಲ್ಲಿ ಕೆ.ಟಿ. ಶ್ರೀಮತಿ, ರೇಖಾ ಪುಟ್ಟರಾಜು, ಹೇಮಲತಾ, ಜಯಮಾಲಾ, ಕಾತ್ಯಾಯನಿ, ಬಿ.ಕೆ. ಮೀನಾಕ್ಷಿ, ರೂಪಶ್ರೀ ಹೇಮಂತ್ ಕುಮಾರ್, ಆಶಾ ವೆಂಕಟೇಶ್, ಗಾಯತ್ರಿ ಸುಂದರೇಶ್, ಬಿ.ಆರ್. ನಾಗರತ್ನ, ಸರಳಕುಮಾರಿ, ಪ್ರಕಾಶ್ ಕವನ ವಾಚಿಸಿದರು. ಟ್ರಸ್ಟ್ ಅಧ್ಯಕ್ಷ ಎಚ್.ಆರ್. ಸುಂದರೇಶ್ ಇದ್ದರು.