ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿಕುಂಚನೂರು ವಲಯಮಟ್ಟದ ಪ್ರೌಢಶಾಲೆಗಳ 17ರ ವಯೋಮಾನದೊಳಗಿನ ಕ್ರೀಡಾಕೂಟದಲ್ಲಿ ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದೆ. ಥ್ರೋಬಾಲ್ ಕ್ರೀಡೆಯಲ್ಲಿ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಕುಂಚನೂರು ವಲಯಮಟ್ಟದ ಪ್ರೌಢಶಾಲೆಗಳ 17ರ ವಯೋಮಾನದೊಳಗಿನ ಕ್ರೀಡಾಕೂಟದಲ್ಲಿ ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದೆ. ಥ್ರೋಬಾಲ್ ಕ್ರೀಡೆಯಲ್ಲಿ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.ವಿದ್ಯಾರ್ಥಿಗಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ, ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ, ದೈಹಿಕ ಶಿಕ್ಷಣ ಶಿಕ್ಷಕ ಬಾಹುಬಲಿ ಮುತ್ತೂರ, ತಂಡದ ವ್ಯವಸ್ಥಾಪಕ ಸಂಗಮೇಶ ಉಟಗಿ, ಶಿಕ್ಷಕರಾದ ಸಂಜೀವ ಝಾಂಬೂರೆ, ಚಂದ್ರಕಾಂತ ಪೊಲೀಸ್, ಶಾರದಾ ಮಠ, ಸವಿತಾ ಬೆನಕಟ್ಟಿ, ಆಶಿಫಾಭಾನು ಮೊಮಿನ, ಶಕುಂತಲಾ ಬಿರಾದಾರ ಸಹಿತ ವಿವಿಧ ಸಂಘ-ಸಂಸ್ಥೆಗಳು, ಗ್ರಾಮಸ್ಥರು ಅಭಿನಂದಿಸಿದ್ದಾರೆ.