ಸಾರಾಂಶ
Give 10 crore compensation to Parasuram family: Prathviraj
ಯಾದಗಿರಿ: ಪಿಎಸ್‌ಐ ಪರಶುರಾಮ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಹಾಗೂ ಕುಟುಂಬಕ್ಕೆ 10 ಕೊಟಿ ಪರಿಹಾರ ಧನ ನೀಡಬೇಕು ಎಂದು ದಲಿತ ಉದ್ಯಮಿದಾರ ಸಂಘದ ಪ್ರಧಾನ ಕಾರ್ಯದರ್ಶಿ, ಬೀದರಿನ ಎಸ್. ಪ್ರಥ್ವಿರಾಜ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು, ಗೃಹಸಚಿವರಿಗೆ ಪತ್ರ ಬರೆದಿರುವ ಅವರು, ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಅನ್ಯಾಯವಾಗದಂತೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.