ಎದುರಾಳಿಗಳ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಿ: ಸೊರಕೆ

| Published : Oct 05 2025, 01:01 AM IST

ಎದುರಾಳಿಗಳ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಿ: ಸೊರಕೆ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಬೆಂದೂರ್‌ನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ‘ಜೈ ಬಾಪು- ಜೈ ಭೀಮ್- ಜೈ ಸಂವಿಧಾನ’ ಎಂಬ ಕಾರ್ಯಕರ್ತರ ಸಮಾವೇಶ ನಡೆಯಿತು.

ಮಂಗಳೂರಿನಲ್ಲಿ ‘ಜೈ ಬಾಪು- ಜೈ ಭೀಮ್- ಜೈ ಸಂವಿಧಾನ’ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶಕನ್ನಡಪ್ರಭ ವಾರ್ತೆ ಮಂಗಳೂರು

ಕಾಂಗ್ರೆಸ್ ಈ ದೇಶಕ್ಕೆ ನೀಡಿರುವ ಕೊಡುಗೆಗಳ ಕುರಿತು ಸರಿಯಾದ ಪ್ರಚಾರ ನೀಡುವ ಕೆಲಸ ಆಗಬೇಕಾಗಿದೆ. ಪಕ್ಷ ಸಂಘಟನೆಯ ಮುಖಾಂತರ ಪಕ್ಷದ ಸಿದ್ಧಾಂತ, ನಾಯಕತ್ವ, ಸಾಧನೆಗೆ ಪ್ರಚಾರ ನೀಡುವ ಜತೆಗೆ ಎದುರಾಳಿ ಪಕ್ಷಗಳ ಸಂವಿಧಾನ ವಿರೋಧಿ ಕೆಲಸ, ಅಪಪ್ರಚಾರಕ್ಕೆ ಸರಿಯಾದ ಉತ್ತರವನ್ನೂ ನೀಡಬೇಕಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಬೆಂದೂರ್‌ನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ಶನಿವಾರ ‘ಜೈ ಬಾಪು- ಜೈ ಭೀಮ್- ಜೈ ಸಂವಿಧಾನ’ ಎಂಬ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ರಮಾನಾಥ ರೈ, ರಾಜ್ಯ ಸಭೆ ಮಾಜಿ ಸದಸ್ಯರಾದ ಎಲ್. ಹನುಮಂತಯ್ಯ, ಬಿ.ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಪೂರ್, ಪದ್ಮರಾಜ್ ಆರ್. ಪೂಜಾರಿ, ಶಾಲೆಟ್ ಪಿಂಟೋ, ಇನಾಯತ್ ಆಲಿ, ಪ್ರಚಾರ ಸಮಿತಿಯ ಚೀಫ್ ಕೋರ್ಡಿನೇಟರ್‌ಗಳಾದ ಸುಧೀರ್ ಕುಮಾರ್ ಮರೊಳ್ಳಿ, ಆದರ್ಶ್ ಯಲ್ಲಪ್ಪ, ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಮುನೀರ್, ಶಶಿಕಿರಣ್ ರೈ, ಚಂದ್ರಹಾಸ ಶೆಟ್ಟಿ, ಜೋಕಿಂ ಡಿಸೋಜ, ಶಾಹುಲ್ ಹಮೀದ್, ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಅಬ್ಬಾಸ್ ಆಲಿ, ದಿನೇಶ್ ಮೂಳೂರು, ಭರತ್ ಮುಂಡೋಡಿ, ಚೇತನ್ ಬೆಂಗ್ರೆ, ಇಬ್ರಾಹಿಂ ನವಾಜ್, ಹರೀಶ್ಚಂದ್ರ, ತೇಜಸ್ವಿರಾಜ್, ಅಬ್ದುಲ್ ಮುನೀರ್, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಎಂ.‌ಎಸ್. ಮೊಹಮ್ಮದ್, ಎಂ. ಶಶಿಧರ ಹೆಗ್ಡೆ, ಅಪ್ಪಿ, ಸುರೇಶ್ ಬಲ್ಲಾಳ್, ಮಂಜುನಾಥ ಪೂಜಾರಿ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಡೆನಿಸ್ ಡಿಸಿಲ್ವಾ, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ ಎಂ ಶಾಹಿದ್ ತಕ್ಕಿಲ್, ವಿಶ್ವಾಸ್ ಕುಮಾರ್ ದಾಸ್, ಲಾವಣ್ಯ ಬಳ್ಳಾಲ್, ಸದಾಶಿವ ಉಳ್ಳಾಲ ಇದ್ದರು.

ಪ್ರಚಾರ ಸಮಿತಿ ಉಪಾಧ್ಯಕ್ಷ ಮಾಜಿ ಶಾಸಕ ಜೆ.ಆರ್. ಲೋಬೋ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು.