ಸಾರಾಂಶ
ಪ್ರತಿ ಪೋಷಕರು ಮಕ್ಕಳಿಗೆ ಗುಂಟೆ ಹಾಗೂ ಎಕರೆ ಲೆಕ್ಕದಲ್ಲಿ ಆಸ್ತಿ ಮಾಡುವ ಬದಲು ಶಿಕ್ಷಣವೆಂಬ ಜ್ಞಾನಸಂಪತ್ತು ಸಂಪಾದನೆ ಮಾಡಿಕೊಡಿ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ಸೂಲಿಬೆಲೆಯಲ್ಲಿ ಪ್ರತಿಭಾ ಕಾರಂಜಿ ಹಾಗೂ ಹೋಬಳಿ ಮಟ್ಟದ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ
ಕನ್ನಡಪ್ರಭ ವಾರ್ತೆ ಸೂಲಿಬೆಲೆಪ್ರತಿ ಪೋಷಕರು ಮಕ್ಕಳಿಗೆ ಗುಂಟೆ ಹಾಗೂ ಎಕರೆ ಲೆಕ್ಕದಲ್ಲಿ ಆಸ್ತಿ ಮಾಡುವ ಬದಲು ಶಿಕ್ಷಣವೆಂಬ ಜ್ಞಾನಸಂಪತ್ತು ಸಂಪಾದನೆ ಮಾಡಿಕೊಡಿ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಸೂಲಿಬೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸೂಲಿಬೆಲೆ, ಟಿ.ಅಗ್ರಹಾರ ಹಾಗೂ ಬೆಂಡಿಗಾನಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಹೋಬಳಿ ಮಟ್ಟದ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮೊರಾರ್ಜಿ ದೇಸಾಯಿ ವಸತಿ ನವೀಕರಣ ಕಾಮಗಾರಿಗೆ ೨ ಕೋಟಿ ರು. ಅನುದಾನ ದೊರೆತಿದೆ. ಪದವಿ ಕಾಲೇಜುನಲ್ಲಿ ೧೧ ಕೊಠಡಿಗಳ ನಿರ್ಮಾಣಕ್ಕೆ ೨.೫ ಕೋಟಿ ರು. ಅನುದಾನ ದೊರೆತಿದೆ. ಪದವಿಪೂರ್ವ ಕಾಲೇಜಿನಲ್ಲಿ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ, ರಂಗಮಂದಿರ ನಿರ್ಮಾಣ, ಜಿಮ್ ನಿರ್ಮಾಣ, ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಮಾಡಿಕೊಡಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಮಾತನಾಡಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಈ ಪ್ರತಿಭಾ ಕಾರಂಜಿ ಸಹಕಾರಿಯಾಗಿದ್ದು ತಾಲೂಕಿನ ೨೨ ಕ್ಲಸ್ಟರ್‌ಗಳಲ್ಲೂ ಕಾರ್ಯಕ್ರಮ ಯಶಸ್ವಿಯಾಗಿದ್ದು ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟಕ್ಕೆ ವಿದ್ಯಾರ್ಥಿಗಳು ಸಿದ್ಧರಾಗಬೇಕು ಎಂದು ತಿಳಿಸಿದರು.ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಉಪಾಧ್ಯಕ್ಷೆ ಷಾಜಿಯಾಖಾನಂ ಜಿಯಾವುಲ್ಲಾ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ದೊಡ್ಡಹರಳಗೆರೆ ಗ್ರಾಪಂ ಅಧ್ಯಕ್ಷೆ ನರಸಮ್ಮ, ಸದಸ್ಯೆ ಶಿವಕುಮಾರಿ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸಪ್ಪ, ಬಿ.ಆರ್‌ಪಿ ನಾಗರಾಜ್, ಸಿ.ಆರ್‌ಪಿ ಮಂಜುನಾಥ್, ನಿರ್ಮಲಾ, ಸಿಂಡಿಕೇಟ್ ಸದಸ್ಯ ಕೆ.ಆರ್.ದೇವರಾಜ್, ಮುತ್ಸಂದ್ರ ಆನಂದಪ್ಪ, ಶಿಕ್ಷಣ ತಜ್ಞ ದೇವಿದಾಸ್ ಶೇಠ್, ಶಿಕ್ಷಕರ ಸಂಘದ ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಶ್ರೀನಿವಾಸ್, ಕಲಾವತಿ ಪಿಳ್ಳಪ್ಪ, ಇಸಿಒ ರವಿಕುಮಾರ್, ಡಾ.ಡಿ.ಟಿ.ವೆಂಕಟೇಶ್, ಮೊರಾರ್ಜಿ ಪ್ರಾಚಾರ್ಯ ಬಸವರಾಜ್, ಉಷಾರಾಣಿ, ಇತರರು ಇದ್ದರು.