ಸಭೆಯಲ್ಲಿ ಸಲಹೆ, ಸೂಚನೆ ನೀಡಿ

| Published : Sep 21 2024, 01:54 AM IST

ಸಾರಾಂಶ

ಹಾಲು ಉತ್ಪಾದಕರ ಸಹಕಾರ ಸಂಘಗಳು ನಡೆಸುವ ಸಾಮಾನ್ಯ ಸಭೆಯಲ್ಲಿ ಪ್ರತಿ ಸದಸ್ಯರು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದರ ಜತೆಗೆ ಸಂಘಗಳ ಅಭಿವೃದ್ಧಿಗೆ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಬದನೂರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವೆಂಕಟೇಶ ಅಂಕಲಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಹಾಲು ಉತ್ಪಾದಕರ ಸಹಕಾರ ಸಂಘಗಳು ನಡೆಸುವ ಸಾಮಾನ್ಯ ಸಭೆಯಲ್ಲಿ ಪ್ರತಿ ಸದಸ್ಯರು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದರ ಜತೆಗೆ ಸಂಘಗಳ ಅಭಿವೃದ್ಧಿಗೆ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಬದನೂರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವೆಂಕಟೇಶ ಅಂಕಲಗಿ ತಿಳಿಸಿದರು.

ಸಮೀಪದ ಬದನೂರ ಗ್ರಾಮದ ಮಾರುತೇಶ್ವರ ಮಂಗಲ ಕಾರ್ಯಾಲಯದಲ್ಲಿ ಜರುಗಿದ ೨೦೨೩-೨೪ನೇ ಸಾಲಿನ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯಕ್ಷ ವೀರನಗೌಡ ಕರಿಗೌಡರ ಉದ್ಘಾಟಕರಾಗಿ ಮಾತನಾಡಿ, ಎಲ್ಲಾ ಸದಸ್ಯರು ಸಂಘವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಹಕಾರ ನೀಡಬೇಕು ಎಂದರು.

ಮುಖ್ಯ ಕಾರ್ಯನಿರ್ವಾಹಕ ಪುಂಡಲೀಕ ಹಡಪದ ಮಾತನಾಡಿ, ಸಂಘದ ಒಟ್ಟು ೨೧೦ ಸದಸ್ಯರು ಇದ್ದು, ೫೦೦ ರಿಂದ ೫೫೦ ಲೀಟರ್‌ ಹಾಲು ಉತ್ಪಾದನೆಯಾಗಲಿದೆ. ೨೦೨೩-೨೪ನೇ ಸಾಲಿನಲ್ಲಿ ₹೪,೪೨,೪೧೭ ಗಳು ನಿವ್ವಳ ಲಾಭ ಗಳಿಸಿದೆ ಎಂದು ವಿವರಿಸಿದರು.

ಅತಿಥಿಗಳಾಗಿ ಕೆಎಂಎಫ್ ನಿರ್ದೇಶಕ ವಿವೇಕಾನಂದ ಪಾಟೀಲ, ಲಕ್ಷ್ಮಣ ಮಾಲಗಿ, ಗ್ರಾಪಂ ಉಪಾಧ್ಯಕ್ಷ ವಿಠ್ಠಲ ಜೀರಗಾಳ, ಗುರುಪಾದಯ್ಯ ಹಿರೇಮಠ, ಬಾಗಲಕೋಟೆ ಹಾಲು ಒಕ್ಕೂಟದ ಅಧಿಕಾರಿ ಡಾ.ಎಸ್.ವ್ಹಿ.ಜಾಡರ, ಸಂಜು ಮೆಟಗುಡ್ಡ, ಪಿ.ಆರ್.ಜಾಧವ, ಲಕ್ಷ್ಮೀಬಾಯಿ ಶೆಟ್ಟೆಪ್ಪನವರ, ಹಣಮಂತಗೌಡ ಪಾಟೀಲ, ಶಿವಲಿಂಗಯ್ಯ ಮಠದ, ಹಣಮಂತ ಗೋರ್ಜಿನಾಳ, ಮಹಾಂತೇಶ ಜೀರಗಾಳ, ಲಕ್ಷ್ಮಣ ಶೆಟ್ಟೆಪ್ಪನವರ, ಲಕ್ಷ್ಮವ್ವ ಸತ್ತರಗಿ, ಯಮನಪ್ಪ ಜೀರಗಾಳ, ರತ್ನವ್ವ ಜೋಗಿ, ಕಮಲವ್ವ ತಳವಾರ, ಮಹಾದೇವ ಮಾಂಗ ಪ್ರಕಾಶ ಪತ್ತಾರ ಮುಖ್ಯ ಕಾರ್ಯನಿರ್ವಾಹಕ ಪುಂಡಲೀಕ ಹಡಪದ, ಸಹಾಯಕ ಶಂಕ್ರೆಪ್ಪ ಹುದ್ದಾರ ಹಾಲು ಉತ್ಪಾಕದರ ಸಂಘದ ಸರ್ವ ಸದಸ್ಯರು ಗ್ರಾಮಸ್ಥರು ಇದ್ದರು.