ಮತ್ತೊಂದು ಅವಧಿಗೆ ಅವಕಾಶ ನೀಡಿ: ಗಣಪತರಾವ್

| Published : Jul 19 2024, 01:05 AM IST

ಸಾರಾಂಶ

ಕಾಗವಾಡ: ಪಟ್ಟಣದ ಅಂಬಾಬಾಯಿ ಹಾಗೂ ವಿಠ್ಠಲ ಮಂದಿರದ ಸಭಾಭವನದಲ್ಲಿ ಜು.24ರಂದು ನಡೆಯಲಿರುವ ಶ್ರೀ ದತ್ತ ಶೇತ್ಕರಿ ಸಹಕಾರಿ ಸಕ್ಕರೆ ಕಾರ್ಖಾನೆಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆ ನಿಮಿತ್ತ ಅಧ್ಯಕ್ಷ ಗಣಪತರಾವ್ ಪಾಟೀಲ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಕಳೆದ ಅನೇಕ ವರ್ಷಗಳಿಂದ ರೈತ ಸದಸ್ಯರು ನಮ್ಮ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದರಿಂದ ಅವರ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಕೆಲಸ ಮಾಡುವ ಅವಕಾಶ ದೊರಕಿದ್ದು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ರೈತ ಸದಸ್ಯರ ಹಿತ ಕಾಪಾಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇವೆ. ಮುಂದೆಯೂ ರೈತ ಸದಸ್ಯರು ನಮಗೆ ಆಶೀರ್ವಾದ ಮಾಡಿ ತಮ್ಮ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಬೇಕೆಂದು ಶ್ರೀ ದತ್ತ ಶೇತ್ಕರಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗಣಪತರಾವ್ ಪಾಟೀಲ ಮನವಿ ಮಾಡಿದರು.

ಗುರುವಾರ ಪಟ್ಟಣದ ಅಂಬಾಬಾಯಿ ಹಾಗೂ ವಿಠ್ಠಲ ಮಂದಿರದ ಸಭಾಭವನದಲ್ಲಿ ಜು. 24ರಂದು ನಡೆಯಲಿರುವ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ಉದ್ದೇಶಿಸಿ, ಮಾತನಾಡಿದರು.

ಹಿರಿಯ ಸಮಾಜ ಸೇವಕ ಸುಭಾಸ ಕಠಾರೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಖಾನೆ ನಿರ್ದೇಶಕರಾದ ಅಮರ ಯಾದವ, ಇಂದ್ರಜೀತ ಪಾಟೀಲ, ಮಹಿಪತರಾವ ನಿಂಬಾಳ್ಕರ, ಜ್ಯೋತಿಕುಮಾರ ಪಾಟೀಲ, ಅರುಣ ದೇಸಾಯಿ, ಪ್ರೊ.ಬಿ.ಜೆ. ಪಾಟೀಲ, ಅಜೀತ ಚೌಗುಲೆ, ಸೌರಭ ಪಾಟೀಲ, ರಾಜಗೌಡ ಪಾಟೀಲ, ಕಾಕಾ ಪಾಟೀಲ, ರಮೇಶ ಚೌಗುಲಾ, ಪ್ರಕಾಶ ಪಾಟೀಲ, ಅರುಣ ಜೋಶಿ, ಶಶಿಕಾಂತ ಜೋಶಿ, ಚಿದಾನಂದ ಅವಟಿ, ಬಾಳಾಸಾಬ ಕಲ್ಲೋಳೆ ಸೇರಿದಂತೆ ರೈತ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.