ಗ್ಯಾರಂಟಿ ಯೋಜನೆ ವಿರೋಧಿಸುವ ಬಿಜೆಪಿ-ಜೆಡಿಎಸ್‌ಗೆ ತಕ್ಕ ಉತ್ತರ ನೀಡಿ: ಪಿ.ಎಂ.ನರೇಂದ್ರಸ್ವಾಮಿ

| Published : Apr 20 2024, 01:00 AM IST

ಗ್ಯಾರಂಟಿ ಯೋಜನೆ ವಿರೋಧಿಸುವ ಬಿಜೆಪಿ-ಜೆಡಿಎಸ್‌ಗೆ ತಕ್ಕ ಉತ್ತರ ನೀಡಿ: ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರದಲ್ಲಿ ಐದು ವರ್ಷಗಳ ಬಳಿಕ ಅಭಿವೃದ್ಧಿ ನಾಗಲೋಟ ಆರಂಭವಾಗಿದೆ. ಬರಗಾಲದಲ್ಲಿ ನೆರವಾಗಿರುವ ಗ್ಯಾರಂಟಿ ಯೋಜನೆ ವಿರೋಧಿಸುವ ಬಿಜೆಪಿ ಮತ್ತು ಜೆಡಿಎಸ್‌ಗೆ ಮತದಾರರು ತಕ್ಕ ಉತ್ತರ ನೀಡಬೇಕು. ಸರಳ ಮತ್ತು ಪ್ರಾಮಾಣಿಕ ವ್ಯಕ್ತಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಿ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಬರಗಾಲದಲ್ಲಿ ಜನರಿಗೆ ನೆರವಾಗಿರುವ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಬಿಜೆಪಿ ಮತ್ತು ಜೆಡಿಎಸ್‌ಗೆ ಮತದಾರರು ತಕ್ಕ ಉತ್ತರ ನೀಡಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಜೊತೆಗೂಡಿ ಮತಯಾಚಿಸಿ ಮಾತನಾಡಿ, ಶ್ರೀಮಂತರ ಸಾಲಮನ್ನಾ ಮಾಡುವ ಮೋದಿ ಅವರು ರೈತರ ಸಾಲದ ಮಾತಾಡುವುದಿಲ್ಲ. ಆದರೆ, ನಾವು ಅಧಿಕಾರಕ್ಕೆ ಬಂದ ಕೂಡಲೇ ಸಾಲಮನ್ನಾದ ಜೊತೆಗೆ ಉದ್ಯೋಗದ ಭದ್ರತೆ ನೀಡಿ ಜನರ ಬದುಕನ್ನು ಹಸನು ಮಾಡುವ ಕೆಲಸ ಮಾಡುತ್ತೇವೆ ಎಂದರು.

ಕ್ಷೇತ್ರದಲ್ಲಿ ಐದು ವರ್ಷಗಳ ಬಳಿಕ ಅಭಿವೃದ್ಧಿ ನಾಗಲೋಟ ಆರಂಭವಾಗಿದೆ. ಬರಗಾಲದಲ್ಲಿ ನೆರವಾಗಿರುವ ಗ್ಯಾರಂಟಿ ಯೋಜನೆ ವಿರೋಧಿಸುವ ಬಿಜೆಪಿ ಮತ್ತು ಜೆಡಿಎಸ್‌ಗೆ ಮತದಾರರು ತಕ್ಕ ಉತ್ತರ ನೀಡಬೇಕು. ಸರಳ ಮತ್ತು ಪ್ರಾಮಾಣಿಕ ವ್ಯಕ್ತಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಿ ಎಂದರು.

ಬಿಜಿಪುರ ಭಾಗದಲ್ಲಿ 2018ರಲ್ಲಿ ನನ್ನ ಬಗ್ಗೆ ಹುರುಳಿ ಚೆಲ್ಲಿಸಲು ಹೇಳಿದ್ದಾನೆ ಎಂದು ಅಪಪ್ರಚಾರ ಮಾಡಿದ್ದರು. ನಾನು ಅವತ್ತು ಶಪಥ ಮಾಡಿದ್ದೇ ಈ ಸುಳ್ಳು ಹಬ್ಬಿಸಿರುವವರಿಗೆ ಸಾಧನೆ ಮೂಲಕ ಉತ್ತರ ಕೊಡಬೇಕು ಅಂತ ಡಿಪ್ ಕಟ್, ನಾಲೆ ಆಧುನೀಕರಣ, ಇದಕ್ಕೆ ಹೆಚ್ಚುವರಿ ನೀರು ಕೊಡುವುದಕ್ಕೆ ಏತ ನೀರಾವರಿ ಪ್ರಾರಂಭಿಸಲಾಗಿದೆ. ಬೆಳಕವಾಡಿ, ಹೊಸಹಳ್ಳಿ ಗ್ರಾಮ ಪಂಚಾಯ್ತಿಗಳ ನಿರ್ವಹಣೆಯಲ್ಲಿ ಜನರಿಗೆ ಕಾವೇರಿ ಕುಡಿವ ನೀರನ್ನು ಒದಗಿಸಲಾಗುತ್ತಿದೆ ಎಂದರು.

2019ರಲ್ಲಿ ನಾವೆಲ್ಲರೂ ಸಂಸದೆ ಸುಮಲತಾ ಅವರನ್ನು ಬೆಂಬಲಿಸಿದ್ದವು. ಅದನ್ನೇ ನಿನ್ನೆ ದರ್ಶನ್ ನಿಮ್ಮ ಋಣ ನಮ್ಮ ಮೇಲಿದೆ ಎಂದು ಹೇಳಿದ್ದು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಎಲ್ಲರೂ ಜಿಲ್ಲೆಯ ಸ್ವಾಭಿಮಾನ ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದರು. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿ, ಶಾಸಕರ ಜೊತೆಗೂಡಿ ತಾಲೂಕಿನ ಅಭಿವೃದ್ಧಿಗೆ ದುಡಿಯುವ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಮಾಜಿ ಅಧ್ಯಕ್ಷ ಕೆ.ಜೆ.ದೇವರಾಜು, ಜಿಪಂ ಮಾಜಿ ಸದಸ್ಯರಾದ ಸುಜಾತಾ ಕೆ.ಎಂ.ಪುಟ್ಟು, ಆರ್‌.ಎನ್.ವಿಶ್ವಾಸ್, ಟಿಎಪಿಸಿಎಂಎಸ್ ನಿರ್ದೇಶಕರಾದ ಎಚ್.ಬಿ.ಬಸವೇಶ್, ಟಿ.ಸಿ‌.ಚೌಡಯ್ಯ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಬಿ.ಪುಟ್ಟಬಸವಯ್ಯ, ಎಪಿಎಂಸಿ ಮಾಜಿ ಸದಸ್ಯ ದಿಲೀಪ್ ಕುಮಾರ್(ವಿಶ್ವ), ಗ್ರಾಪಂ ಉಪಾಧ್ಯಕ್ಷ ಡಿ.ಬಿ.ಬಸವರಾಜು, ಮಾಜಿ ಅಧ್ಯಕ್ಷ ಕೆ.ಸಿ.ಚೌಡೇಗೌಡ ಇದ್ದರು.

ಇದೇ ವೇಳೆ ತಾಲೂಕಿನ ಬೋಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಬೆಳಕವಾಡಿ, ಕಗ್ಗಲೀಪುರ, ವಾಸುವಳ್ಳಿ, ಬಿಜಿಪುರ, ಸರಗೂರು, ಪೂರಿಗಾಲಿ, ಕಿರುಗಾವಲು ಹೋಬಳಿಯ ರಾಗಿಬೊಮ್ಮನಹಳ್ಳಿ, ಶೆಟ್ಟಹಳ್ಳಿ, ಚನ್ನಪಿಳ್ಳೇಕೊಪ್ಪಲು, ಸುಜ್ಜಲೂರು, ಕಲ್ಕುಣಿ, ಬೆಂಡರವಾಡಿ, ಕಿರುಗಾವಲು, ಹಿಟ್ಟನಹಳ್ಳಿಕೊಪ್ಪಲು, ಬಂಡೂರು, ದುಗ್ಗನಹಳ್ಳಿ ಹಾಗೂ ತಳಗವಾದಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.