ಸಾರಾಂಶ
ಯಾವುದೇ ರಾಜಕೀಯ ಪಕ್ಷ ಆದರೂ ಸರಿ ಸ್ವಾರ್ಥ ರಾಜಕಾರಣ ಬಿಟ್ಟು ರೈತರ ಅಭ್ಯುದಯಕ್ಕೆ ಯೋಜನೆಗಳನ್ನು ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಯಾವುದೇ ರಾಜಕೀಯ ಪಕ್ಷ ಆದರೂ ಸರಿ ಸ್ವಾರ್ಥ ರಾಜಕಾರಣ ಬಿಟ್ಟು ರೈತರ ಅಭ್ಯುದಯಕ್ಕೆ ಯೋಜನೆಗಳನ್ನು ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.ತಾಲೂಕಿನ ಕೋಣೆಮಾದೇನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಏರ್ಪಡಿಸಿದ್ದ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ಪಾದನಾ ವೆಚ್ಚ ಹೆಚ್ಚಿಗೆ ಇರುವುದರಿಂದ ಹಾಲಿನ ದರವನ್ನು ಹೆಚ್ಚಿಗೆ ಮಾಡಬೇಕು. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಾಗಿದೆ ರಾಜಕೀಯ ಪಕ್ಷಗಳು ಬೇದಭಾವ ಮರೆತು ಎಲ್ಲಾ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ರೈತರಿಗೆ ಅವಶ್ಯಕತೆ ಇರುವ ನೀರು, ಗೊಬ್ಬರ, ಬಿತ್ತನೆ ಬೀಜಗಳಿಗೆ ವೈಜ್ಞಾನಿಕ ಬೆಲೆಗಳನ್ನು ಕೊಡಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕೆ.ಎನ್ ವೆಂಟೇಗೌಡ, ಕಾರ್ಯದರ್ಶಿ ಸಿ ಜಿ.ಲೋಕೇಶ್, ಪದಾಧಿಕಾರಿಗಳಾದ ಮಂಜುನಾಥ್, ಚನ್ನಬಸವಣ್ಣ, ಜಗದೀಶಯ್ಯ, ಗಂಗಣ್ಣ, ಪ್ರಕಾಶ್, ಬಸವರಾಜು, ಮಾಹದೇವಣ್ಣ, ಯತೀಶ್, ಕನ್ನಿಗಪ್ಪ, ರೈತ ಶಾಖೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮತ್ತಿತರರು ಇದ್ದರು.