ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳನ್ನು ರಾಷ್ಟ್ರದ ಸತ್ಪ್ರಜೆಗಳನ್ನಾಗಿ ಮಾಡಿ ಎಂದು ತಾಲೂಕು ಶಿಕ್ಷಣಾಧಿಕಾರಿ ಸೋಮಶೇಖರ್ ಅವರು ಶಿಕ್ಷಕರಿಗೆ ಮತ್ತು ಪೋಷಕರಿಗೆ ಕರೆ ನೀಡಿದರು.ಪಟ್ಟಣದ ವಿಶ್ವ ವಿಜಯ ವಿದ್ಯಾಶಾಲೆಯ ಆಶ್ರಯದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಸುಪ್ತ ಪ್ರತಿಭೆಗಳು ಅಡಗಿರುತ್ತವೆ. ಕೇವಲ ಓದಿನಿಂದಲೇ ಮಕ್ಕಳ ಜ್ಞಾನವನ್ನು ಅಳೆಯಬಾರದು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ಮಕ್ಕಳು ತಾವು ಕಂಡುಕೊಂಡ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡುವರು ಎಂದು ಹೇಳಿದರು.
ಸಬ್ ಇನ್ಸ್‌ಪೆಕ್ಟರ್ ಸಂಗಮೇಶ್ ಮೇಟಿ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ಗಾದೆಯಂತೆ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಉತ್ತಮ ವಾತಾವರಣದಲ್ಲಿ ವಿದ್ಯಾರ್ಜನೆ ಕೊಡಿಸುವುದು. ದೇಶಾಭಿಮಾನ ಮೂಡಿಸುವುದು, ಮಕ್ಕಳ ಆಸಕ್ತಿಗೆ ಪ್ರೋತ್ಸಾಹ ನೀಡುವುದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಗೌಡ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸಿ, ಉತ್ತಮ ಅಂಕ ಪಡೆಯಲು ದುಂಬಾಲು ಬೀಳುತ್ತಾರೆ. ನಂತರ ಹೆಚ್ಚು ಹೆಚ್ಚು ಸಂಪಾದನೆ ಬರುವ ಕೆಲಸಕ್ಕೆ ಸೇರಿಸಿದರೆ ತಮ್ಮ ಜೀವನ ಸಾರ್ಥಕ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಆದರೆ ತಮ್ಮ ಮಕ್ಕಳು ಸಮಾಜಕ್ಕೆ ಘಾತಕನಾಗದೇ ಸಾಮಾಜಿಕವಾಗಿ ನೂರಾರು ಮಂದಿಗೆ ಮಾದರಿಯಾಗಿ ಬೆಳೆಯಲಿ ಎಂಬ ಅಂಶವನ್ನೂ ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಈಜು ತರಬೇತುದಾರ ದಂಡಿನಶಿವರ ತಿಮ್ಮೇಗೌಡ, ಯಕ್ಷಗಾನ ಕಲಾವಿದ ದಂಡಿನಶಿವರದ ಡಿ.ಟಿ. ವೆಂಕಟೇಶ್, ಡಿ.ಜಿ. ಬೋರೇಗೌಡ, ಪ್ರಗತಿಪರ ರೈತ ದೇವೀಹಳ್ಳಿ ಬಸವರಾಜು, ಕ್ರೀಡಾಪಟುಗಳಾದ ರೋಹನ್ ಎಸ್ ಗೌಡ, ದರ್ಶನ್ ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.ವಿಶ್ವ ವಿಜಯ ವಿದ್ಯಾ ಸಂಸ್ಥೆಯ ಸಂಸ್ಥಾಪಕಿ ವಿಜಯ ವಿಶ್ವೇಶ್ವರಯ್ಯ, ಬಿಆರ್‌ಸಿ ವೀಣಾ, ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ಗುರುಪ್ರಸಾದ್, ಸಿಆರ್‌ಪಿ ಲೋಕೇಶ್, ಸಂಸ್ಥೆಯ ಆಡಳಿತ ಮಂಡಲಿಯ ನಿರ್ದೇಶಕ ಶೋಭಾ ಸುಬ್ರಹ್ಮಣ್ಯ, ಲೀಲಾವತಿ, ಮಂಜುಳಾ ಧನಪಾಲ್, ಶೈಲಾ ಲಿಂಗರಾಜ್ ಭಾಗವಹಿಸಿದ್ದರು.
ಶಿಕ್ಷಕಿಯರಾದ ಚೇತನಾಕುಮಾರಿ, ಮಮತಾ, ಲತಾ, ಯಶೋಧಾ, ಆನಂದ್, ಆಶಾ, ಚೈತ್ರಾ, ಪ್ರೇಮಾ, ಲತಾ, ಸವಿತಾ, ದೈಹಿಕ ಶಿಕ್ಷಕಿ ಹೇಮಲತಾ ಲೀಲಾ, ಗೌರಿ, ಚಂದನಾ, ಚೇತನ್, ರಾಮಣ್ಣ, ಶಂಷಿಯಾ, ವಾಣಿ, ಅರುಣಾ, ಅಬಾಕಸ್ ಶಿಕ್ಷಕರಾದ ಪ್ರೇಮ್ ಮತ್ತು ಕುಸುಮಾ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿನಿಯರಾದ ಗನಿಕಾ ಕೆ ದೊಡ್ಡಮನಿ ಮತ್ತು ಚಂದನಾ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಾಲಾ ವರದಿಯನ್ನು ಮಮತಾ ಸಭೆಯಲ್ಲಿ ಮಂಡಿಸಿದರು. ಗೌರಿ ಸ್ವಾಗತಿಸಿದರು. ಚಾರವಿ, ದೀಪ್ತಿ ವಂದಿಸಿದರು.
;Resize=(128,128))
;Resize=(128,128))
;Resize=(128,128))