ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಶಿವಲಿಂಗ ಸ್ವಾಮೀಜಿ

| Published : Jul 21 2025, 12:00 AM IST

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಶಿವಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ನಿಸರ್ಗದಲ್ಲಿ ಸಹಜವಾಗಿ ಉತ್ಪತ್ತಿಯಾಗುವುದು ಸಾಹಿತ್ಯ.

ಶಿರಸಿ: ಮಕ್ಕಳಿಗೆ ಶಿಕ್ಷಣದ ಜತೆ ಉತ್ತಮ ಸಂಸ್ಕಾರ ನೀಡುವುದರಿಂದ ಸಮಾಜದಲ್ಲಿ ಆಗುತ್ತಿರುವ ಅನಾಚಾರಗಳನ್ನು ತಪ್ಪಿಸಲು ಸಾಧ್ಯ ಎಂದು ಬಣ್ಣದಮಠದ ಶ್ರೀ ಶಿವಲಿಂಗ ಸ್ವಾಮೀಜಿ ನುಡಿದರು.

ಅವರು ಭಾನುವಾರ ನಗರದ ಸಿ.ಪಿ. ಬಝಾರ್ ನಲ್ಲಿರುವ ಬಣ್ಣದಮಠದ ವಚನ ಮಂದಿರಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಶಿರಸಿ ಶೈಕ್ಷಣಿಕ ಜಿಲ್ಲೆ, ಬಣ್ಣದ ಮಠ, ಲಯನ್ಸ್ ಕ್ಲಬ್ ಶಿರಸಿ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ೨೦೨೫ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಿಸರ್ಗದಲ್ಲಿ ಸಹಜವಾಗಿ ಉತ್ಪತ್ತಿಯಾಗುವುದು ಸಾಹಿತ್ಯ. ಭಾರತದಲ್ಲಿ ಕೈ ಮುಗಿಯುವುದು ಪದ್ಧತಿ ರೂಢಿಯಲ್ಲಿದ್ದರೆ, ವಿದೇಶಗಳಲ್ಲಿ ಕೈ ಕೊಡುವುದು ಇದೆ. ಭಾರತೀಯರು ಎಂದಿಗೂ ಕೈಕೊಡುವುದಿಲ್ಲ. ಕೈಮುಗಿದು ಎಲ್ಲರೂ ನಮ್ಮವರು ಎಂದು ಹತ್ತಿರದಿಂದ ಆತಿಥ್ಯ ನೀಡುತ್ತಾರೆ. ಕೃಷಿ ಉತ್ತಮ ಕಾರ್ಯವಾಗಿದ್ದು, ರೈತರು ಎಲ್ಲರಿಗೂ ಹಂಚು ತಿನ್ನುತ್ತಾನೆ. ಆದರೆ ರೈತರಿಗೆ ಕಷ್ಟ ಮುಗಿಯುವುದಿಲ್ಲ. ಕೇವಲ ೨೦ ಕೋಟಿ ರೈತರು, ದೇಶದ ೧೫೦ ಕೋಟಿ ಜನರಿಗೆ ಆಹಾರ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಕ್ಷರಸ್ಥರ ಮಕ್ಕಳು ವೃದ್ಧಾಶ್ರಮದಲ್ಲಿರುವುದರಿಂದ ಶ್ರೀಗಳು ವಿಷಾದ ವ್ಯಕ್ತಪಡಿಸಿದರು. ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿರಿ ಜಿ.ವಿ.ಭಟ್ಟ ಕೊಪ್ಪಲುತೋಟ ಮಾತನಾಡಿ, ಸಾಹಿತ್ಯವೆಂದರೆ ಅದು ಮನುಷ್ಯನ ಸೃಜನಶೀಲ ಅಭಿವ್ಯಕ್ತಿ. ಅದನ್ನು ಅಧ್ಯಯನದಿಂದ ಉಳಿಸಿ-ಬೆಳೆಸಿಕೊಳ್ಳಬಹುದು. ಸಾಹಿತಿ, ಕವಿ, ಚಿಂತನಕನಾಗುತ್ತೇನೆ ಎಂದು ಕನಸು ಕಂಡವನಲ್ಲ. ಸಂಗೀತ, ಸಾಹಿತ್ಯ, ಕಲೆ ಇವುಗಳಲ್ಲಿ ಚಿಕ್ಕಂದಿನಿಂದಲೂ ಆಸಕ್ತಿ ಇರುವುದರಿಂದ ಆ ಅಭಿರುಚಿ ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ ಎಂದರು.

ಈ ವೇಳೆ ಮುಕ್ತಕ ಕವಿ ಕೃಷ್ಣ ಪದಕಿ, ಚುಟುಕು ಕವಿ ಜಗದೀಶ ಭಂಡಾರಿ ಹಾಗೂ ಚುಟುಕು ಕವಯತ್ರಿ ಭಾರತಿ ನಲವಡೆ ಅವರಿಗೆ ಚುಟುಕು ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಚುಸಾಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ರಾಜ್ಯ ಸಲಹಾ ಸಮಿತಿ ಸದಸ್ಯ ಜಿ.ಎ.ಹೆಗಡೆ ಸೋಂದಾ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮಂಜುನಾಥ ಹೆಗಡೆ ಹೂಡ್ಲಲಮನೆ, ಪದಾಧಿಕಾರಿ ದೀಪಾಲಿ ಸಾಂಮತ, ಗುರುಸಿದ್ದರಾಜ ಮಹಿಳಾ ಮಂಡಳ ಅಧ್ಯಕ್ಷೆ ವೀರಮ್ಮ ಹಿರೇಮಠ, ಲಯನ್ಸ್ ಕ್ಲಬ್ ಅಧ್ಯಕ್ಷ ಗುರುರಾಜ ಹೊನ್ನಾವರ ಮತ್ತಿತರರು ಉಪಸ್ಥಿತರಿದ್ದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ಕಚುಸಾಪ ಅಧ್ಯಕ್ಷ ಮನೋಹರ ಮಲ್ಮನೆ ಸ್ವಾಗತಿಸಿದರು. ಉಪನ್ಯಾಸಕಿ ಭವ್ಯಾ ಹಳೆಯೂರ ನಿರೂಪಿಸಿದರು. ಶುಶ್ರಾವ್ಯ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಸ್ವಾಗತ ಗೀತೆ, ನಾಡಗೀತೆ ಹಾಗೂ ರೈತ ಗೀತೆ ಹಾಡಿದರು.

ನಿರ್ಣಯಗಳು:

೧) ಎಲ್ಲ ಭಾಷೆಯ, ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಶಿಶು ಸಾಹಿತ್ಯಗಳ ಕೊರತೆಯಾಗಿದೆ. ಶಿಶು ಸಾಹಿತ್ಯವನ್ನು ಬರೆಯುವ ಅಗತ್ಯ ಬಳ ಇದೆ.

೨) ಯಾವುದೇ ಸಮ್ಮೇಳನವನ್ನು ನಡೆಸುವಾಗ ಅದಕ್ಕೆ ಆರ್ಥಿಕ ನೆರವನ್ನು ಆಡಳಿತಾರೂಢ ಸರ್ಕಾರವೇ ಭರಿಸಿದರೆ ಒಳಿತು.

೩) ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಯೋಗ. ಉತ್ತಮ ವೈದ್ಯರು, ಅತ್ಯುತ್ತಮ ವ್ಯವಸ್ಥೆ ನೀಡಬೇಕು.

೪) ಶಿರಸಿಯಲ್ಲಿ ಸಾಹಿತ್ಯ ಭವನ ನಿರ್ಮಾಣವಾಗಬೇಕು.

೫)ನಗರದಲ್ಲಿ ವಾಹನ ನಿಲುಗಡೆಗೆ ಸುಸುಜ್ಜಿತವಾದ ವ್ಯವಸ್ಥೆ ಕೈಗೊಳ್ಳಬೇಕು.

೬) ನಗರದಲ್ಲಿ ನೈರ್ಮಲ್ಯದ ಕಡೆಗೆ ವಿಶೇಷ ಮುತುವರ್ಜಿ ವಹಿಸಬೇಕು.

೭) ಶಿಕ್ಷಣ ಪದ್ಧತಿಯಲ್ಲಿ ಕನ್ನಡದ ಎಲ್ಲ ಸಾಹಿತ್ಯ ಪ್ರಕಾರಗಳ ಬಳಕೆ.

೮) ಸುಸಜ್ಜಿತವಾದ ವ್ಯಾಯಾಮ ಶಾಲೆ ಮಂಜೂರಿ.

೯) ಸಾಹಿತ್ಯ ಸಾಧನೆ ಮಢಿದ ವಯೋವೃದ್ಧರಿಗೆ ಮಾಶಾಸನ ನೀಡಬೇಕು.