ಯುವಶಕ್ತಿ ಸದೃಢಗೊಳ್ಳಬೇಕು. ಅಂದಾಗ ಮಾತ್ರ ಸದೃಢ ಸಮಾಜ ನಿರ್ಮಾಣಗೊಳ್ಳುವುದು. ಯುವಶಕ್ತಿ ಕಾಲಹರಣದಲ್ಲಿ ವ್ಯರ್ಥವಾಗಬಾರದು.

ಗದಗ: ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡುವ ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿಸುವ ಹೊಣೆಗಾರಿಕೆ ಪಾಲಕರ ಮೇಲಿದೆ ಎಂದು ಅಮ್ಮಿನಬಾವಿಯ ಸಂಸ್ಥಾನ ಪಂಚಗ್ರಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.ಇಲ್ಲಿಯ ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯಿಂದ ನಡೆದ 55ನೇ ಜೀವನ ದರ್ಶನ ಮಾಲಿಕೆ, ಸ್ವಾಮಿ ವಿವೇಕಾನಂದರ 163ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಯುವಶಕ್ತಿ ಸದೃಢಗೊಳ್ಳಬೇಕು. ಅಂದಾಗ ಮಾತ್ರ ಸದೃಢ ಸಮಾಜ ನಿರ್ಮಾಣಗೊಳ್ಳುವುದು. ಯುವಶಕ್ತಿ ಕಾಲಹರಣದಲ್ಲಿ ವ್ಯರ್ಥವಾಗಬಾರದು. ಮೊಬೈಲ್, ಟಿವಿ ಹಾವಳಿಯಿಂದಾಗಿ ನಮ್ಮ ಮಕ್ಕಳನ್ನು ಅದರಲ್ಲೂ ಯುವಜನಾಂಗವನ್ನು ಪಾರು ಮಾಡಬೇಕಿದೆ. ಓದುವ ವಯಸ್ಸಿನಲ್ಲಿ ಮಕ್ಕಳು ಇಂತಹ ಹವ್ಯಾಸಕ್ಕೆ ಬಲಿಯಾದರೆ ಮುಂದೆಂದೂ ಅವರ ಜೀವನ ಸನ್ಮಾರ್ಗದೆಡೆಗೆ ಸಾಗಲು ಸಾಧ್ಯವಿಲ್ಲ. ಪಾಲಕ, ಪೋಷಕರು ಎಚ್ಚೆತ್ತುಕೊಳ್ಳುವುದು ಅವಶ್ಯ ಎಂದರು.ಮುಳಗುಂದ ಸರ್ಕಾರಿ ಪ್ರಥಮದರ್ಜೆ ಪದವಿ ಮಹಾವಿದ್ಯಾಲಯದ ಪ್ರಾ. ಡಾ. ರಮೇಶ ಕಲ್ಲನಗೌಡರ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎ.ಟಿ. ನರೇಗಲ್ಲ ಮಾತನಾಡಿದರು. ಸಂಗೀತ ಸೇವೆಗೈದ ಕಲಾವಿದರಾದ ರತ್ನಾ ಮಂಟೂರಮಠ, ಬಸವರಾಜ ದೊಡ್ಡಮನಿ, ಶಿವಶಂಕರ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಜಿ.ಜಿ. ಕುಲಕರ್ಣಿ, ಆರ್.ಆರ್. ಕಾಶಪ್ಪನವರ, ಮೋಹನ ಹೂಲಿ, ಆರ್. ವಿಶ್ವನಾಥಗೌಡ, ರವೀಂದ್ರಗೌಡ ಕಲ್ಲನಗೌಡರ, ಎಸ್.ಎಸ್. ಪಾಳೇಗಾರ, ಆರ್.ಬಿ. ಅಂದಪ್ಪನವರ, ವಿ.ಆರ್. ಗೊಬ್ಬರಗುಂಪಿ, ಸಾಗರ ಬಿಂಗಿ, ರೇಣುಕಾ ಕರಿಗೌಡರ, ಸಂಗೀತಾ ಕುರಿ, ಎಸ್.ಎಸ್. ಪಾಟೀಲ, ಎಂ.ಬಿ. ಚನ್ನಪ್ಪಗೌಡ್ರ, ಕೆ.ಐ. ಕುರಗೋಡ, ಸಿ.ಕೆ. ಮಾಳಶೆಟ್ಟಿ, ವಿ.ವೈ. ಮಕ್ಕಣ್ಣವರ, ವೀರಣ್ಣ ಕೊಟಗಿ, ಸುದರ್ಶನ ಹಾನಗಲ್ಲ, ಎಂ.ಕೆ. ತುಪ್ಪದ, ವಿ.ಆರ್. ಗೊಬ್ಬರಗುಂಪಿ, ಬಿ.ಎಚ್. ಗರಡಿಮನಿ, ಎಂ.ಎನ್. ಕಾಮನಹಳ್ಳಿ, ಐ.ಬಿ. ಮೈದರಗಿ, ಡೋಣಿ, ಮಹಾಂತೇಶ ಲಕ್ಕುಂಡಿ, ಎಸ್.ಐ. ಯಾಳಗಿ, ಕೆ.ಬಿ. ಕೊಣ್ಣೂರ, ವಿ.ಎಂ. ಕನಕೇರಿ, ಎಂ.ಕೆ. ತುಪ್ಪದ, ವಿ.ಬಿ. ತಿರ್ಲಾಪೂರ ಸೇರಿದಂತೆ ಮುಂತಾದವರು ಇದ್ದರು. ಕಸ್ತೂರಿ ಕಮ್ಮಾರ ಪ್ರಾರ್ಥಿಸಿದರು. ಕಾರ್ಯದರ್ಶಿ ಕೆ.ಪಿ. ಗುಳಗೌಡ್ರ ಸ್ವಾಗತಿಸಿದರು. ವಿ.ಕೆ. ಗುರುಮಠ ನಿರೂಪಿಸಿದರು. ಸಂಗೀತಾ ಕುರಿ ವಂದಿಸಿದರು.