ಮಕ್ಕಳಿಗೆ ಒಳ್ಳೆಯ ಬೋಧನೆ, ಸಂಸ್ಕಾರ ನೀಡಿ: ಶಾಸಕ ಧುರ್ಯೋದನ

| Published : Feb 14 2025, 12:46 AM IST

ಮಕ್ಕಳಿಗೆ ಒಳ್ಳೆಯ ಬೋಧನೆ, ಸಂಸ್ಕಾರ ನೀಡಿ: ಶಾಸಕ ಧುರ್ಯೋದನ
Share this Article
  • FB
  • TW
  • Linkdin
  • Email

ಸಾರಾಂಶ

ಗುಣಮಟ್ಟದ ಕಟ್ಟಡ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.ಪಟ್ಟಣದ ಮೀರಾಪುರಹಟ್ಟಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ (ಆರ್‌ಎಂಎಸ್‌ಎ) ಸುಮಾರು ₹1.60 ಕೋಟಿಗಳಲ್ಲಿ ನಿರ್ಮಿಸಿದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಟ್ಟಡ ಕಾಮಗಾರಿ ಗುಣಮಟ್ಟದ್ದಾಗಿದೆ. ಅದೇ ರೀತಿ ಮಕ್ಕಳಿಗೆ ಗುಣಮಟ್ಟದ ಬೋಧನೆ, ಸಂಸ್ಕಾರ ಸಿಗಲಿ. ನನ್ನ ಅನುದಾನದಲ್ಲಿ ಶಾಲೆಗೆ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕಾಂಪೌಂಡ್ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಕಬ್ಬೂರ

ಗುಣಮಟ್ಟದ ಕಟ್ಟಡ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಪಟ್ಟಣದ ಮೀರಾಪುರಹಟ್ಟಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ (ಆರ್‌ಎಂಎಸ್‌ಎ) ಸುಮಾರು ₹1.60 ಕೋಟಿಗಳಲ್ಲಿ ನಿರ್ಮಿಸಿದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಟ್ಟಡ ಕಾಮಗಾರಿ ಗುಣಮಟ್ಟದ್ದಾಗಿದೆ. ಅದೇ ರೀತಿ ಮಕ್ಕಳಿಗೆ ಗುಣಮಟ್ಟದ ಬೋಧನೆ, ಸಂಸ್ಕಾರ ಸಿಗಲಿ. ನನ್ನ ಅನುದಾನದಲ್ಲಿ ಶಾಲೆಗೆ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕಾಂಪೌಂಡ್ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ಸಂಕೇಶ್ವರ ಹಿರಾಶುಗರ್‌ ಕಾರ್ಖಾನೆಯ ನಿರ್ದೇಶಕ ಸುರೇಶ ಬೆಲ್ಲದ ಮಾತನಾಡಿದರು. ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಪಾಟೀಲ, ಚಿಕ್ಕೋಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್‌.ಕೆ.ಎಂಟೆತ್ತಿನವರ, ಸಹಾಯಕ ಇಂಜಿನಿಯರ್ ಐ.ಎ.ಕಾಕೋಳ, ಗುತ್ತಿಗೆದಾರ ಸತೀಶ ಜಾಗನೂರೆ, ಮುಖಂಡರಾದ ಶಿವಪ್ಪ ಖೋತ, ಲಕ್ಷ್ಮಣ ಖೋತ, ಅಶೋಕ ರೊಟ್ಟಿ, ಭೀಮಗೌಡ ಖೋತ, ರಮೇಶ ಹುಡೇದ, ಬಿಸಿಯೂಟ ಯೋಜನಾಧಿಕಾರಿ ಮಹಾದೇವ ಜನಗೌಡರ, ಬಿ.ಆರ್‌.ಪಿ ಇಕ್ಕಲಮರದ, ಮೀರಾಪುರಹಟ್ಟಿಯ ಸಿ.ಆರ್‌.ಪಿ ಕಾಡಪ್ಪ ಮಾಳ್ಯಾಗೋಳ ಇದ್ದರು.

ಶಿಕ್ಷಕರಾದ ಪ್ರದೀಪ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ಆರ್‌.ಕೆ.ಮಿಕಲಿ, ಹಿರೇಮಠ, ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಶಿಕ್ಷಕ ಸಂದೇಶ ವಂದಿಸಿದರು.ಈಗಾಗಲೇ ನಾವು ಶಾಲೆಗೆ 2 ಉಚಿತವಾಗಿ ಇಂಟರ್ಯಾಕ್ಟಿವ್‌ ಬೋರ್ಡ್‌ಗಳನ್ನು ನೀಡಿದ್ದೇವೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.90 ಮಾಡಿದರೇ ಇನ್ನೂ 1 ಉಚಿತವಾಗಿ ಇಂಟರ್ಯಾಕ್ಟಿವ್‌ ಬೋರ್ಡ್‌ನ್ನು ನೀಡುತ್ತೇವೆ.

-ಸುರೇಶ ಬೆಲ್ಲದ, ಸಂಕೇಶ್ವರ ಹಿರಾಶುಗರ್‌ ಕಾರ್ಖಾನೆಯ ನಿರ್ದೇಶಕರು.