ಕಲಿಕೆ ಪುಸ್ತಕದಿಂದ ಕಲಿಯುವಂತದ್ದು ಅಲ್ಲ. ಅದು ಅನುಭವದಿಂದ ಕಲಿಯುವಂತದ್ದು, ಈ ಕಲಿಕಾ ಹಬ್ಬದಲ್ಲಿ ಕಸದಿಂದ ರಸ ಮಾಡುವ ಶಕ್ತಿ ಹೊಂದಿದೆ.

ಕುಕನೂರ: ಪಾಲಕರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಮಾಡಬೇಕು ಎಂದು ಮಂಗಳೂರು ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಧ್ಯಾಪಕಿ ಶ್ರೀಗೌರಿ ಹೇಳಿದರು.

ಮಂಗಳೂರಿನ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕ್ಲಸ್ಟರ್ ಮಟ್ಟದ ಎಫ್ಎಲ್ ಎನ್ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಮತ್ತು ಕಲಿಕೆ ಸಂತೋಷದಾಯಕ ಅನುಭವವನ್ನಾಗಿ ಮಾಡಲು ಎಫ್ಎಲ್ಎನ್ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ ಮಕ್ಕಳನ್ನು ಚಟುವಟಿಕೆಗಳ ಮೂಲಕ ಗುರುತಿಸಬಹುದು ಎಂದರು.

ಕಲಿಕೆ ಪುಸ್ತಕದಿಂದ ಕಲಿಯುವಂತದ್ದು ಅಲ್ಲ. ಅದು ಅನುಭವದಿಂದ ಕಲಿಯುವಂತದ್ದು, ಈ ಕಲಿಕಾ ಹಬ್ಬದಲ್ಲಿ ಕಸದಿಂದ ರಸ ಮಾಡುವ ಶಕ್ತಿ ಹೊಂದಿದೆ. ಒಂದು ಹೊತ್ತಿನ ಊಟ ಕಡಿಮೆಯಾದರೂ ಸರಿ ಶಿಕ್ಷಣ ನೀಡಿ ಎನ್ನುವ ಅಂಬೇಡ್ಕರ್ ಮಾತನ್ನು ಪಾಲಿಸಬೇಕು. ಶಿಕ್ಷಣ ಎನ್ನುವುದು ಹುಲಿ ಹಾಲು ಇದ್ದಂತೆ ಅದನ್ನು ಕುಡಿದವನು ಘರ್ಜಿಸಲೇಬೇಕು. ಉತ್ತಮ ಶಿಕ್ಷಣ ಪಡೆದುಕೊಂಡವರು ಸಮಾಜದಲ್ಲಿ ತಲೆ ಎತ್ತಿ ನಡೆಯಲು ಸಾಧ್ಯ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ ಹಳ್ಳಿ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಮನೆ ಪರಿಸರ, ಶಾಲಾ ಪರಿಸರ, ಸಹಪಾಠಿಗಳ ಪರಿಸರ ಉತ್ತಮವಾಗಿ ಇದ್ದಾಗ ಮಾತ್ರ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ.

ಸಿಆರ್ ಪಿ ರವಿ ಮಳಗಿ ಮಾತನಾಡಿ, ಎಫ್ಎಲ್ಎನ್ ಕಲಿಕಾ ಹಬ್ಬ ಒಂದರಿಂದ ಐದನೇ ತರಗತಿಯವರೆಗೆ ನಡೆಯುವ ಪಠ್ಯೇತರ ಚಟುವಟಿಕೆಯಾಗಿದೆ, ಮಕ್ಕಳಿಗೆ ಕನ್ನಡದ ವಿಷಯದಲ್ಲಿ ಗಣಿತ ವಿಷಯದಲ್ಲಿ ಸಂಭ್ರಮದೊಂದಿಗೆ ಚಟುವಟಿಕೆಗಳೊಂದಿಗೆ ಮಕ್ಕಳನ್ನು ಗುರುತಿಸಿ ಮಕ್ಕಳಿಗೆ ನಡೆಸುವ ಒಂದು ಚಟುವಟಿಕೆಯಾಗಿದೆ ಎಂದರು.

ನೌಕರ ಸಂಘದ ಖಜಾಂಚಿ ಬಸವರಾಜ ಬೆಲ್ಲದ್,ಗ್ರಾಪಂ ಉಪಾಧ್ಯಕ್ಷೆ ಅನ್ನಪೂರ್ಣ ಮ್ಯಾಗಳೇಶಿ, ಎಸ್ಡಿಎಮ್ಸಿ ಅಧ್ಯಕ್ಷ ಬಾಲರಾಜ ಅಂಬಳಿ, ಮುಖ್ಯೋಪಾಧ್ಯಯ ಶಂಕ್ರಪ್ಪ, ಸುರೇಶ ಮಡಿವಾಳರ, ಶಿವಪ್ಪ ಉಪ್ಪಾರ, ಮಹಾವೀರ ಕಲ್ಬಾವಿ, ಯಮನೂರಪ್ಪ ಭಜೆಂತ್ರಿ, ಮಾರುತಿ ಹಾದಿಮನಿ, ಯೋಗಪ್ಪ ಪೂಜಾರ, ಶಕುಂತಲಾ ಪಾಟೀಲ್, ಪನ್ನಗಾ ದೇಶಪಾಂಡೆ, ಪರಶುರಾಮ ತಳವಾರ, ಚಂದ್ರಶೇಖರ ಹತ್ತಿಕಟಗಿ, ಮಂಗಳೇಶ ಎಲಿಗಾರ, ಹನುಮಂತಪ್ಪ ಉಪ್ಪಾರ, ಯಂಕಣ್ಣ ಕದ್ರಳ್ಳಿ, ಬಸವರಾಜ ಪೂಜಾರ, ಫಕೀರಪ್ಪ ಮೂಲಿಮನಿ ಇತರರಿದ್ದರು.

ಮಲ್ಲಿಕಾರ್ಜುನ ದ್ಯಾಂಪೂರ ಕಾರ್ಯಕ್ರಮ ನಿರ್ವಹಿಸಿದರು, ಶಿಕ್ಷಕ ನಾಗಪ್ಪ ಶೆಕ್ಕಿ ಸ್ವಾಗತಿಸಿದರು.