ಮಕ್ಕಳಿಗೆ ತತ್ವ ಆದರ್ಶ, ಉತ್ತಮ ಸಂಸ್ಕಾರ ನೀಡಿ: ರುದ್ರಪ್ಪಯ್ಯ ಪಟೇಲ್

| Published : Mar 23 2024, 01:02 AM IST

ಸಾರಾಂಶ

ಬಾಲ್ಯದಲ್ಲೇ ಗಂಡು-ಹೆಣ್ಣು ಎನ್ನದೆ, ಲಿಂಗಧಾರಣೆ ಆಗಬೇಕು. ಗುರುಗಳ ಆಶೀರ್ವಾದ, ತತ್ವ ಆದರ್ಶಗಳು ಹಾಗೂ ಉತ್ತಮ ಸಂಸ್ಕಾರವನ್ನು ಪಾಲಕರು ಚಿಕ್ಕ ವಯಸ್ಸಿನಲ್ಲೇ ರೂಢಿಸಬೇಕು. ವೀರಶೈವ ಜಂಗಮ ಸೇರಿ ಲಿಂಗಾಯತ ಒಳಪಂಗಡಗಳು ಸಂಘಟಿತರಾಗಿ, ಪರಸ್ಪರ ಗೌರವಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಆನವಟ್ಟಿ

ವೀರಶೈವ ಒಳಪಂಗಡಗಳು ಒಂದಾಗಬೇಕು ಎಂಬುದು ಹಾನಗಲ್ ಕುಮಾರ ಸ್ವಾಮಿಗಳ ಕನಸು ಆಗಿತ್ತು. ಜಂಗಮ ಸೇರಿ ಎಲ್ಲರಿಗೂ ಲಿಂಗದೀಕ್ಷೆ ನೀಡಿದವರು ರೇಣುಕಾಚಾರ್ಯರು. ಈ ಇಬ್ಬರು ಸ್ವಾಮೀಜಿಗಳು ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಿಕಾರಿಪುರದ ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಕೆ.ಜಿ ರುದ್ರಪ್ಪಯ್ಯ ಪಟೇಲ್ ಸ್ಮರಿಸಿದರು.

ಆನವಟ್ಟಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಜನಪರ ಟ್ರಸ್ಟ್ ಹಾಗೂ ವೀರಶೈವ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 1008 ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಬಾಲ್ಯದಲ್ಲೇ ಗಂಡು-ಹೆಣ್ಣು ಎನ್ನದೆ, ಲಿಂಗಧಾರಣೆ ಆಗಬೇಕು. ಗುರುಗಳ ಆಶೀರ್ವಾದ, ತತ್ವ ಆದರ್ಶಗಳು ಹಾಗೂ ಉತ್ತಮ ಸಂಸ್ಕಾರವನ್ನು ಪಾಲಕರು ಚಿಕ್ಕ ವಯಸ್ಸಿನಲ್ಲೇ ರೂಢಿಸಬೇಕು. ವೀರಶೈವ ಜಂಗಮ ಸೇರಿ ಲಿಂಗಾಯತ ಒಳಪಂಗಡಗಳು ಸಂಘಟಿತರಾಗಿ, ಪರಸ್ಪರ ಗೌರವಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಮಹೇಶ್ ಜೆ. ಮಠದ ಕೋಟಿಪುರ ಮಾತನಾಡಿ, ಸರ್ಕಾರದ ಸವಲತ್ತು ಪಡೆಯಲು ಜಂಗಮ ಸಮಾಜ ನಿರ್ಮಿಸಿಕೊಂಡಿಲ್ಲ. ಪೂರ್ವಿಕರ ಕಾಲದಿಂದಲ್ಲೂ ಜಂಗಮ ಜನಾಂಗಕ್ಕೆ ವಿಶೇಷ ಸ್ಥಾನವಿದೆ. ಸಮುದಾಯದ ಅಭಿವೃಧಿಗಾಗಿ ಜಂಗಮ ಕ್ಷೇಮಾಭಿವೃಧಿ ಸಂಘ ಮಾಡಿಕೊಂಡಿದ್ದೇವೆ ಎಂದರು.

ಪಟ್ಟಣದ ಪ್ರಮುಖ ಬೀದಿಗಳ ಮೂಲಕ ವೀರಶೈವ ಸಮುದಾಯ ಭವನದವರೆಗೂ, ವೀರಗಾಸಿ ಹಾಗೂ ವಿವಿಧ ವಾದ್ಯನೃತ್ಯಗಳೊಂದಿಗೆ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು.

ರಾಜ್ಯ ಮಟ್ಟದ ವಿವಿಧ ಪ್ರಶಸ್ತಿಗಳ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಪ್ರಿಯತೆಗಳಿಸಿರುವ ಸೊರಬ ತಾಲ್ಲೂಕಿನ ಶಕುನವಳ್ಳಿ ಗ್ರಾಮದ ಬಾಲಕಿ ಅನುಷಾ ಹಿರೇಮಠರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿ, ಜಡೆ ಮಠದ ಡಾ. ಮಹಾಂತ ಸ್ವಾಮೀಜಿ, ಜಡೆ ಹಿರೇಮಠದ ಘನಬಸವ ಅಮರೇಶ್ವರ ಸ್ವಾಮೀಜಿ, ಸಾನ್ನಿಧ್ಯ ವಹಿಸಿ, ಭಕ್ತರಿಗೆ ಅಶೀರ್ವಚನ ನೀಡಿದರು.

ಸಮಾರಂಭದಲ್ಲಿ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಜನಪರ ಟ್ರಸ್ಟ್ ಅಧ್ಯಕ್ಷ ವಿಜಯೇಂದ್ರ ಸ್ವಾಮಿ ಎಣ್ಣೆಕೊಪ್ಪ, ಮುಖಂಡರಾದ ಶಿಕಾರಿಪುರದ ಕೆ.ಬಿ ಪ್ರಭುಸ್ವಾಮಿ, ಭಾರಂಗಿ ಬಸಣ್ಣ, ಚೌಟಿ ಚಂದ್ರಶೆಖರ್ ಪಾಟೀಲ್, ಬಾಲಚಂದ್ರಯ್ಯ ತಲಗಡ್ಡೆ, ಶಿವಯೋಗಿ ಶಾಸ್ತ್ರೀ ನೇರಲಗಿ, ಕೆ.ಜಿ ಮೀನಾಕ್ಷಿ , ಚಂದ್ರಕಲಾ ಸತೀಶ್, ಶಿವಯೋಗಿ ಸೊರಬ, ಕೋಟ್ರಯ್ಯ ಸ್ವಾಮಿ, ಪ್ರಭುಕುಮಾರ್ ಇದ್ದರು.----------------