ಸಾರಾಂಶ
ತಂದೆ-ತಾಯಿಗಳು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸಾಕಷ್ಟು ಕಷ್ಟಪಡುತ್ತಿರುವದರಿಂದ ಮಕ್ಕಳ ಉತ್ತಮ ಶಿಕ್ಷಣ ಪಡೆದು ದೊಡ್ಡವರಾದ ಮೇಲೆ ತಂದೆ-ತಾಯಿಗಳನ್ನು ಜೋಪಾನ ಮಾಡಬೇಕು
ಗದಗ: ಮಗುವಿನ ಸಾಧನೆಯಲ್ಲಿ ಅತೀ ಹೆಚ್ಚು ಸಂತೋಷ ಪಡುವರು ತಂದೆ-ತಾಯಿ ಹಾಗೂ ಶಿಕ್ಷಕರಾಗಿದ್ದಾರೆ ಎಂದು ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು.
ನಗರದ ಗಂಗಾಪೂರ ಪೇಟೆಯಲ್ಲಿರುವ ದುರ್ಗಾದೇವಿ ಶಿಕ್ಷಣ ಸಮಿತಿಯ 19ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.ತಂದೆ-ತಾಯಿಗಳು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸಾಕಷ್ಟು ಕಷ್ಟಪಡುತ್ತಿರುವದರಿಂದ ಮಕ್ಕಳ ಉತ್ತಮ ಶಿಕ್ಷಣ ಪಡೆದು ದೊಡ್ಡವರಾದ ಮೇಲೆ ತಂದೆ-ತಾಯಿಗಳನ್ನು ಜೋಪಾನ ಮಾಡಬೇಕು ಎಂದರು. ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ದುರ್ಗಾದೇವಿ ಶಿಕ್ಷಣ ಸಮಿತಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕಿಯರ ಕೊಡುಗೆ ಅಪಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ನಟರಂಗ ಅಕಾಡೆಮಿಯ ಸಂಸ್ಥಾಪಕ ಸೋಮಶೇಖರಯ್ಯ ಚಿಕ್ಕಮಠ, ಶಿಕ್ಷಕ ಎಫ್.ಎ. ನಮಾಜಿ, ಆರ್.ಬಿ. ಲೋದಿ, ಸಮಾಜ ಸೇವಕ ಹೀರಾಲಾಲ್ ಸಿಂಗ್ರಿ, ಶಾಲೆಯ ನಿರ್ದೇಶಕ ಮೋಹನ ಇಮರಾಪೂರ, ಕವಿತಾ ಇಮರಾಪೂರ, ಹಿರಿಯರಾದ ನಿರ್ಮಲಾ ಪಾಟೀಲ, ಸಲಹಾ ಸಮಿತಿ ಸದಸ್ಯ ಮುತ್ತು ಜಡಿ, ಲೋಕೇಶ ಮಲ್ಲಿಗವಾಡ, ಸವಿತಾ ಇಮರಾಪೂರ, ಶೋಭಾ ಕುರಿಯವರ, ಲಕ್ಷ್ಮೀ ಕವಡಕಿ, ಕವಿತಾ ಜಡಿ, ಆಡಳಿತಾಧಿಕಾರಿ ಸಾವಿತ್ರಿ ಕವಡಕಿ, ಮುಖ್ಯೋಪಾದ್ಯಾಯನಿ ಎಚ್.ಎಂ.ನದಾಫ್, ಶಿಕ್ಷಕಿ ಮಂಜುಳಾ ಹಿಡ್ಕಿಮಠ, ಸುಧಾ ತಿರಕಣ್ಣವರ, ರೇಖಾ ಅಂಗಡಿ, ವಂದನಾ ಕಲ್ಮನಿ, ಮಂಜುಳಾ ದಾಸರ, ರೂಪಾ ಅಸೂಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.