ಅಂತ್ಯ ಸಂಸ್ಕಾರಕ್ಕೆ ರುದ್ರಭೂಮಿ ನೀಡಿ: ವಿಶ್ವಕರ್ಮ ಸಮುದಾಯ ಮನವಿ

| Published : Sep 04 2024, 01:49 AM IST

ಅಂತ್ಯ ಸಂಸ್ಕಾರಕ್ಕೆ ರುದ್ರಭೂಮಿ ನೀಡಿ: ವಿಶ್ವಕರ್ಮ ಸಮುದಾಯ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಕರ್ಮ ಸಮುದಾಯಕ್ಕೆ ರುದ್ರಭೂಮಿ ಇಲ್ಲದೇ ಅಂತ್ಯ ಸಂಸ್ಕಾರ ನೆರವೇರಿಸಲು ತೊಂದರೆ ಉಂಟಾಗಿದ್ದು, ಕೂಡಲೇ ಜಾಗ ಗುರುತಿಸಿಕೊಡಬೇಕೆಂದು ಶ್ರೀ ವಿಶ್ವಕರ್ಮ ಕುಶಲಕರ್ಮಿಗಳ ಸಂಘ ಜಿಲ್ಲಾಧಿಕಾರಿಗಳಿಗೆ ಚಾಮರಾನಗರದಲ್ಲಿ ಮನವಿ ಪತ್ರ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಚಂದಕವಾಡಿ ಹೋಬಳಿ ವಿಶ್ವಕರ್ಮ ಸಮುದಾಯಕ್ಕೆ ರುದ್ರಭೂಮಿ ಇಲ್ಲದೇ ಅಂತ್ಯ ಸಂಸ್ಕಾರ ನೆರವೇರಿಸಲು ತೊಂದರೆ ಉಂಟಾಗಿದ್ದು, ಕೂಡಲೇ ಜಾಗ ಗುರುತಿಸಿಕೊಡಬೇಕೆಂದು ಶ್ರೀ ವಿಶ್ವಕರ್ಮ ಕುಶಲಕರ್ಮಿಗಳ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.ಸಂಘದ ಅಧ್ಯಕ್ಷ ಮಂಜುನಾಥ್ ವಿಶ್ವಕರ್ಮ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಸೌಭಾಗ್ಯ, ಜಿಲ್ಲಾ ಅಧ್ಯಕ್ಷೆ ಭಾಗ್ಯ ಸೋಮಣ್ಣಚಾರ್, ಮುಖಂಡರಾದ ನಾಗೇಂದ್ರ ನೇತೃತ್ವದಲ್ಲಿ ೫೦ಕ್ಕೂ ಹೆಚ್ಚು ಮಂದಿ ಜಿಲ್ಲಾಧಿಕಾರಿ ಭೇಟಿ ಮಾಡಿ ರುದ್ರಭೂಮಿ ಇಲ್ಲದಿರುವ ಕುರಿತು ಆಗುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟರು.ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್, ೪೦ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಚಂದಕವಾಡಿ ಸಮೀಪದ ಸರಗೂರು ಗ್ರಾಮದಲ್ಲಿ ತಲ ತಲಾಂತರಗಳಿಂದ ಖಾಸಗಿಯವರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿಕೊಂಡು ಬರಲಾಗುತ್ತಿದ್ದು, ಇತ್ತೀಚೆಗೆ ಜಮೀನಿನ ಮಾಲೀಕರು ಅಂತ್ಯ ಸಂಸ್ಕಾರ ಮಾಡಲು ಅಡ್ಡಿ ಪಡಿಸುತ್ತಿದ್ದಾರೆ, ಇದರಿಂದ ಸಂಸ್ಕಾರ ಮಾಡಲು ತೊಂದರೆಯಾಗುತ್ತಿದೆ. ಸರ್ಕಾರದಿಂದ ರುದ್ರ ಭೂಮಿ ಕಲ್ಪಿಸುವಂತೆ ತಹಸೀಲ್ದಾರ್ ಹಾಗೂ ಗ್ರಾಪಂಗೆ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಆದ್ದರಿಂದ ಜಿಲ್ಲಾಧಿಕಾರಿ ಅಗತ್ಯ ಕ್ರಮ ಕೈಗೊಂಡು ನಮ್ಮ ಸಮಾಜಕ್ಕೆ ಭೂಮಿ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರಾದ ಶಶಿಕುಮಾರ್, ಬಸವಣ್ಣ, ರವಿಕುಮಾರ್, ರಂಗಸ್ವಾಮಿ, ಪವನ್, ಮಹದೇವಸ್ವಾಮಿ, ವಿನೋದ್ ಕುಮಾರ್, ರವಿ, ಸಿದ್ದರಾಜು, ದೊಡ್ಡ ಸಿದ್ದಚಾರ್, ಸಿದ್ದಲಿಂಗಾಚಾರ್, ತಮ್ಮಯ್ಯಚಾರ್, ಮಹೇಂದ್ರ, ಗಿರೀಶ್, ಲಕ್ಷ್ಮಣಾಚಾರ್, ನಾಗರಾಜಚಾರ್, ಪಳನಿಚಾರ್, ಮಹೇಶ್, ಲೋಕೇಶ್. ಸತೀಶ್, ನಂಜುಂಡಸ್ವಾಮಿ ಸೇರಿದಂತೆ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ತಮ್ಮಡಹಳ್ಳಿ ಭಾಗಗಳಿಂದ ಅನೇಕರು ಭಾಗವಹಿಸಿದ್ದರು.