ಬೆಳೆ ನಷ್ಟ ಪರಿಹಾರ ಶೀಘ್ರ ನೀಡದಿದ್ದರೆ ಸರ್ಕಾರಗಳ ವಿರುದ್ಧ ಕಾನೂನು ಹೋರಾಟ

| Published : May 20 2024, 01:35 AM IST

ಬೆಳೆ ನಷ್ಟ ಪರಿಹಾರ ಶೀಘ್ರ ನೀಡದಿದ್ದರೆ ಸರ್ಕಾರಗಳ ವಿರುದ್ಧ ಕಾನೂನು ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಬಿಸಿಲಿನ ತಾಪಮಾನದಿಂದ ರೈತರ ಬೆಳೆ ಹಾಳಾಗಿದ್ದು, ಕೇಂದ್ರ, ರಾಜ್ಯ ಸರ್ಕಾರಗಳು ರೈತರಿಗೆ ಬೆಳೆ ನಷ್ಟ ಹಾಗೂ ಸಾಲದ ಮಾನವ ನಷ್ಟದ ಹಣವನ್ನು ನೀಡಬೇಕು. ಪರಿಹಾರ ವಿಳಂಬ ಮಾಡಿದರೆ ನ್ಯಾಯಾಲಯ ಮೊರೆ ಹೋಗುವುದಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯದರ್ಶಿ ಬಲ್ಲೂರು ರವಿಕುಮಾರ ಎಚ್ಚರಿಸಿದ್ದಾರೆ.

- ರೈತ ಸಂಘ- ಹಸಿರು ಸೇನೆ ಕಾರ್ಯದರ್ಶಿ ರವಿಕುಮಾರ ಎಚ್ಚರಿಕೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಬಿಸಿಲಿನ ತಾಪಮಾನದಿಂದ ರೈತರ ಬೆಳೆ ಹಾಳಾಗಿದ್ದು, ಕೇಂದ್ರ, ರಾಜ್ಯ ಸರ್ಕಾರಗಳು ರೈತರಿಗೆ ಬೆಳೆ ನಷ್ಟ ಹಾಗೂ ಸಾಲದ ಮಾನವ ನಷ್ಟದ ಹಣವನ್ನು ನೀಡಬೇಕು. ಪರಿಹಾರ ವಿಳಂಬ ಮಾಡಿದರೆ ನ್ಯಾಯಾಲಯ ಮೊರೆ ಹೋಗುವುದಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯದರ್ಶಿ ಬಲ್ಲೂರು ರವಿಕುಮಾರ ಎಚ್ಚರಿಸಿದರು.

ರಾಜ್ಯದಲ್ಲಿ ಬಿಸಿಲಿನ ತಾಪಮಾನದಿಂದಾಗಿ ರೈತರು ಬೆಳೆದ ಬೆಳೆಗಳು ಹಾಳಾಗಿವೆ. 2023- 2024ನೇ ಸಾಲಿನ ಭೀಕರ ಬರದಿಂದಾಗಿ ರೈತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಅಂತರ್ಜಲ ಸಂಪೂರ್ಣ ಕುಸಿದಿದೆ. ರೈತರು ಸಾಲ ಮಾಡಿ, ಬೆಳೆದ ಬೆಳೆ ಕೈಗೆ ಬಂದಿಲ್ಲ. ಇದರಿಂದ ಆರ್ಥಿಕವಾಗಿ, ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ನಾಶ, ಸಾಲದ ಮಾನವ ನಷ್ಟದ ಪರಿಹಾರವನ್ನು ಪ್ರಥಮಾದ್ಯತೆ ಮೇಲೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಅವರು ಸ್ಪಂದಿಸಬೇಕಿದೆ ಎಂದರು.

ರೈತರು ಹೋರಾಟದ ಮೂಲಕ ಹಕ್ಕುಗಳಿಗೆ ನ್ಯಾಯ ಪಡೆಯಲು ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದೆ. ಕೇಂದ್ರ, ರಾಜ್ಯ ಸರ್ಕಾರಗಳು ರೈತರಿಗೆ ಪರಿಹಾರ ನೀಡುವ ಹೊಣೆ ಹೊರಬೇಕು. ಈ ವಿಚಾರದಲ್ಲಿ ಅಸಡ್ಡೆ ಬೇಡ. ಪ್ರತಿ ಎಕರೆ ತೋಟದ ಬೆಳೆಗೆ ಕನಿಷ್ಠ ₹50 ಸಾವಿರ, ಮಳೆಯಾಶ್ರಿತ ಬೆಳೆಗಳಿಗೆ ಎಕರೆಗೆ ಕನಿಷ್ಠ ₹25 ಸಾವಿರವನ್ನು ಕೇಂದ್ರ, ರಾಜ್ಯ ಸರ್ಕಾರಗಳು ತಲಾ ಶೇ.50ರ ಅನುಪಾತದಲ್ಲಿ ಭರಿಸಬೇಕು. ಬೆಳೆ ನಷ್ಟ ಹಾಗೂ ಸಾಲದ ಮಾನವ ನಷ್ಟದ ಹಣವಾಗಿ ನೀಡುವ ಮೂಲಕ ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

- - -

ಕೋಟ್‌ ದೇಶದ ದೊಡ್ಡ ದೊಡ್ಡ ಉದ್ಯಮಿಗಳು, ಶ್ರೀಮಂತ ಉದ್ಯಮಿಗಳು ನಷ್ಟವಾದರೆ ಅಂತಹವರಿಗೆ ರೆಡ್ ಕಾರ್ಪೆಟ್ ಹಾಸಿ, ಅವರ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸುತ್ತವೆ. ಅದೇ ರೀತಿ ರೈತರ ವಿಚಾರದಲ್ಲೂ ಸ್ಪಂದನೆ ಇಟ್ಟುಕೊಳ್ಳಲಿ. ಕೇಂದ್ರ, ರಾಜ್ಯ ಸರ್ಕಾರಗಳು ಮೊದಲು ರೈತರಿಗೆ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಲಿ

- ಬಲ್ಲೂರು ರವಿಕುಮಾರ, ರೈತ ಮುಖಂಡ

- - - -19ಕೆಡಿವಿಜಿ5: ಬಲ್ಲೂರು ರವಿಕುಮಾರ