ಬಿಡುವಿನ ಸಮಯ ಸಮಾಜ ಸಂಘಟನೆಗೆ ನೀಡಿ

| Published : Mar 19 2024, 12:47 AM IST

ಸಾರಾಂಶ

ಕೆರೂರ: ಹೆಣ್ಣು ಮಕ್ಕಳು ತಮ್ಮ ಬಿಡುವಿನ ಸಮಯವನ್ನು ಸಮಾಜ ಸಂಘಟನೆಯಲ್ಲಿ ತೊಡಗಿಸಬೇಕು ಎಂದು ವೀರ ಪುಲಕೇಶಿ ಕೋ. ಆಫ್ ಬ್ಯಾಂಕ್‌ ನಿರ್ದೇಶಕ ಗಂಗಾಧರ ಘಟ್ಟದ ಹೇಳಿದರು. ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ನೂತನ ಅಕ್ಕಮಹಾದೇವಿ ಮಹಿಳಾ ಬಣಜಿಗ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆ ಮನಸು ಮಾಡಿದರೆ ಏನನ್ನಾದರೂ ಸಾಧಿಸ ಬಲ್ಲಳು ಎಂದರು.

ಕನ್ನಡಪ್ರಭವಾರ್ತೆ ಕೆರೂರ

ಹೆಣ್ಣು ಮಕ್ಕಳು ತಮ್ಮ ಬಿಡುವಿನ ಸಮಯವನ್ನು ಸಮಾಜ ಸಂಘಟನೆಯಲ್ಲಿ ತೊಡಗಿಸಬೇಕು ಎಂದು ವೀರ ಪುಲಕೇಶಿ ಕೋ. ಆಫ್ ಬ್ಯಾಂಕ್‌ ನಿರ್ದೇಶಕ ಗಂಗಾಧರ ಘಟ್ಟದ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ನೂತನ ಅಕ್ಕಮಹಾದೇವಿ ಮಹಿಳಾ ಬಣಜಿಗ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆ ಮನಸು ಮಾಡಿದರೆ ಏನನ್ನಾದರೂ ಸಾಧಿಸ ಬಲ್ಲಳು. ಕುಟುಂಬ ನಿರ್ವಹಣೆಯಲ್ಲಿ ಸ್ತ್ರೀಯರಿಗೆ ಇರುವ ಶ್ರದ್ಧೆ, ತಾಳ್ಮೆ, ಆತ್ಮ ವಿಶ್ವಾಸ ಸಮಾಜದ ಮೇಲೆಯೂ ಇರಲಿ. ಸಮಾಜ ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಹೆಣ್ಣು ಮಕ್ಕಳಿಗೆ ಸರ್ಕಾರದ ಸೌಲಭ್ಯ ಪಡೆಯಲು ಸಂಘಟನೆ ಅವಶ್ಯ ಇದೆ ಎಂದರು.

ಬಣಜಿಗ ಸಂಘದ ಅಧ್ಯಕ್ಷ ಚನ್ನಮಲ್ಲಪ್ಪ ಘಟ್ಟದ, ಶಿಕ್ಷಕ ಬಿ.ಸಿ ಪ್ಯಾಟಿ ಮಾತನಾಡಿ, ಬಣಜಿಗ ಸಮಾಜ ಮೊದಲಿನಿಂದಲು ಬಸವಾದಿ ಶರಣರ ಆದರ್ಶಗಳನ್ನು ಅಳವಡಿಸಿಕೊಂಡು ಬಂದಿದೆ. ಸಮಾಜದ ಮಕ್ಕಳು ಪ್ರಮುಖವಾಗಿ ವಿಭೂತಿ, ಲಿಂಗಪೂಜೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ತಪ್ಪುದಾರಿ ತುಳಿಯುವ ಮಕ್ಕಳನ್ನು ಸರಿದಾರಿಗೆ ತರುವಲ್ಲಿ ತಾಯಂದಿರ ಪಾತ್ರವು ಮುಖ್ಯ ಎಂದು ಹೇಳಿದರು.

ಉರ್ದು ಹೆಣ್ಣು ಮಕ್ಕಳ ಶಾಲೆ ಗುರುಮಾತೆ ಅನಸೂಯಾ ಪಟ್ಟಣಶೆಟ್ಟಿ ಮಾತನಾಡಿ, ಕೂಡಿ ಬಾಳಿದರೆ ಸ್ವರ್ಗ ಸುಖ ದೊರೆಯುವುದು. ಹಿರಿಯರ ಈ ಮಾತಿನಂತೆ ನಾವೆಲ್ಲ ಒಟ್ಟಾಗಿ ಬಾಳಿದರೆ ನಮ್ಮ ಬಾಳು ಜೇನುಗೂಡಿನಂತಾಗುತ್ತದೆ. ನಾವೆಲ್ಲ ನಮ್ಮ ಬಿಡುವಿನ ಸಮಯವನ್ನು ಸಮಾಜ ಸಂಘಟನೆಗೆ ಮೀಸಲಿಡೋಣ ಎಂದರು.

ಸಭೆಯಲ್ಲಿ ವಿಜಯಲಕ್ಷ್ಮೀ ಘಟ್ಟದ, ರಂಗಪ್ಪ ಸ್ವಾರಿ, ದಾನಪ್ಪ ಕಿರಗಿ, ಬಿ.ಎಂ ಬಂತಿ, ರಾಚಪ್ಪ ಶೆಟ್ಟರ, ಡಾ.ರಾಚಪ್ಪ ಹುಂಡೇಕಾರ, ಪಪಂ ಮಾಜಿ ಸದಸ್ಯೆ ಸುವರ್ಣ ಘಟ್ಟದ, ಅನುಸೂಯ ಪ್ಯಾಟಿ, ಹೊಳಬಸವ್ವ ಹಕ್ಕಾಪಕ್ಕಿ, ವಸುಧಾ ಶೆಟ್ಟರ, ರತ್ನಕ್ಕ ದಂಡಿನ, ಮಹಾದೇವಿ ಕ್ವಾಟಿ, ಡಾ.ಎಸ್ ವಿ ಕತ್ತಿಶೆಟ್ಟರ, ಕಸ್ತೂರಿ ಕೊಟಗಿ, ಅನುಸೂಯ ಗುತ್ತಣ್ಣವರ, ಅಕ್ಕಮಹಾದೇವಿ ಶೆಟ್ಟರ,ಕಲ್ಪನಾ ಪಾಟೀಲ ಇದ್ದರು.

ಮಹಾನಂದಾ ಕಲ್ಯಾಣಶೆಟ್ಟಿ ನಿರೂಪಿಸಿದರು.ನಂದಾ ಹುಂಡೇಕಾರ ವಂದಿಸಿದರು.