ಮೇದಾರ ಸಮುದಾಯದ ಅಭಿವೃದ್ಧಿಗೆ ಅನುದಾನವಿಡಿ: ನ್ಯಾ. ಚವಲ್ಕರ್

| Published : Jul 31 2024, 01:05 AM IST

ಮೇದಾರ ಸಮುದಾಯದ ಅಭಿವೃದ್ಧಿಗೆ ಅನುದಾನವಿಡಿ: ನ್ಯಾ. ಚವಲ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಪಂಗಡದಲ್ಲಿ ಅಲೆಮಾರಿ ಸಮುದಾಯದಲ್ಲಿ ಮೇದಾರ ಸಮುದಾಯವು ಒಂದಾಗಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮುದಾಯ ಅಭಿವೃದ್ಧಿಗೆ ಸರ್ಕಾರವು ಅತಿಹೆಚ್ಚಿನ ಅನುದಾನವನ್ನು ಮೀಸಲಿಡಬೇಕು ಎಂದು ನ್ಯಾ. ನಾಗರಾಜ್ ಚವಲ್ಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಪರಿಶಿಷ್ಟ ಪಂಗಡದಲ್ಲಿ ಅಲೆಮಾರಿ ಸಮುದಾಯದಲ್ಲಿ ಮೇದಾರ ಸಮುದಾಯವು ಒಂದಾಗಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮುದಾಯ ಅಭಿವೃದ್ಧಿಗೆ ಸರ್ಕಾರವು ಅತಿಹೆಚ್ಚಿನ ಅನುದಾನವನ್ನು ಮೀಸಲಿಡಬೇಕು ಎಂದು ನ್ಯಾ. ನಾಗರಾಜ್ ಚವಲ್ಕರ್ ಹೇಳಿದರು.

ನಗರದಲ್ಲಿ ಇತ್ತೀಚೆಗೆ ನಡೆದ ಕೇತೇಶ್ವರ ಮೇದಾರ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ಮೇದಾರ ಸಮುದಾಯ ಪ್ರಗತಿ ಹೊಂದಲು ಶಿಕ್ಷಣ ಬಹಳ ಮುಖ್ಯವಾಗಿದೆ. ಸಮುದಾಯದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದರು.

* ಪದಾಧಿಕಾರಿಗಳ ಆಯ್ಕೆ:

ಗೌರವಾಧ್ಯಕ್ಷರಾಗಿ ನರಸಪ್ಪ ಎಂ. ಚಾಮನಾಳ , ಅಧ್ಯಕ್ಷರಾಗಿ ರಾಘವೇಂದ್ರ ಎಂ. ಪೊಲೀಸ್, ಉಪಾಧ್ಯಕ್ಷರಾಗಿ ಶಿವಪ್ಪ ಚವಲ್ಕರ್, ಇನ್ನುಳಿದಂತೆ ಶ್ರೀನಿವಾಸ ಚಿನ್ನೂರು (ಪ್ರಧಾನ ಕಾರ್ಯದರ್ಶಿ), ವೆಂಕಟೇಶ ಕಳ್ಳಿಮನಿ (ಸಹ ಕಾರ್ಯದರ್ಶಿ), ನಾಗಪ್ಪ ಎನ್. ಚವಲ್ಕರ್ (ಖಜಾಂಚಿ), ಸಂತೋಷ ಎಸ್. ಬಡಿಗೇರ್ (ಸಹ ಖಜಾಂಚಿ), ರಮೇಶ ಕಟ್ಟಿಮನಿ, ಪರಶುರಾಮ ಎಸ್. ಪಾಟೀಲ್, ಪ್ರಕಾಶ ಎಲ್. ಪ್ಯಾರಸೇಲರ್, ಪರಶುರಾಮ ಹಳಿಜೋಳ, ಭೀಮಣ್ಣ ಗುತ್ತೇದಾರ (ಸಂಘಟನಾ ಕಾರ್ಯದರ್ಶಿ), ಬಸವರಾಜ ಕೊಡೇಕಲ್, ಪರಶುರಾಮ ಪೊಲೀಸ್ (ಹಿರಿಯ ಸಲಹೆಗಾರರು). ಆಗಿ ಆಯ್ಕೆಯಾಗಿದ್ದಾರೆ.