ನದಾಫ /ಪಿಂಜಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿ

| Published : Jul 25 2024, 01:21 AM IST

ಸಾರಾಂಶ

ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ತಕ್ಷಣವೇ ನಿಗಮಕ್ಕೆ ಹಣ ಒದಗಿಸುವ ಮೂಲಕ ಅನುಕೂಲ ಕಲ್ಪಿಸಿ ಕೊಡಬೇಕು

ರೋಣ: ಹಿಂದಿನ ಸರ್ಕಾರ ಸ್ಥಾಪಿಸಿದ ನದಾಫ್‌, ಪಿಂಜಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ನದಾಫ್‌ /ಪಿಂಜಾರ ಸಂಘ ರೋಣ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಕರ್ನಾಟಕ ರಾಜ್ಯ ನದಾಫ್‌ /ಪಿಂಜಾರ ಸಂಘ ರೋಣ ತಾಲೂಕಾಧ್ಯಕ್ಷ ಅಬ್ದುಲಸಾಬ ಹೊಸಮನಿ ಮಾತನಾಡಿ, ಹಿಂದಿನ ರಾಜ್ಯ ಸರ್ಕಾರವು ನದಾಫ್‌ , ಪಿಂಜಾರ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿದ್ದು, ಅಂದಿನಿಂದ ಇಂದಿನವರೆಗೂ ನಿಗಮಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ನದಾಫ/ಪಿಂಜಾರ ಸಮುದಾಯವು ರಾಜ್ಯಾದ್ಯಂತ ಸುಮಾರು 25 ಲಕ್ಷ ಜನಸಂಖ್ಯೆ ಹೊಂದಿದ್ದು, ಸರ್ಕಾರದ ವಿವಿಧ ಸೌಲತ್ತು ಪಡೆಯುವಲ್ಲಿ ವಿಫಲವಾಗಿದ್ದು, ಸಾಮಾಜಿಕ,ಆರ್ಥಿಕವಾಗಿ ನದಾಫ್‌,ಪಿಂಜಾರ ಸಮಾಜವು ತೀರಾ ಹಿಂದುಳಿದಿದೆ. ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ತಕ್ಷಣವೇ ನಿಗಮಕ್ಕೆ ಹಣ ಒದಗಿಸುವ ಮೂಲಕ ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್‌ ಜೆ.ಟಿ. ಕೊಪ್ಪದ ಮಾತನಾಡಿ, ಮನವಿ ಪ್ರತಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುವುದು ಎಂದರು.

ಈ ವೇಳೆ ಸಂಘದ ರೋಣ ತಾಲೂಕಾಧ್ಯಕ್ಷ ಖಾಸಿಂಸಾಬ್‌ ಪಿಂಜಾರ, ಮುಖಂಡ ಶಫೀಕ್‌ ಮೂಗನೂರ, ರೆಹಮಾನಸಾಬ್‌ ತಳಕಲ್ಲ, ರೆಹಮಾನಸಾಬ್‌ ನದಾಫ್‌, ಇಮಾಮಹುಸೇನ ಹೊಸಳ್ಳಿ, ಬಿ.ಪಿ.ಅತ್ತಿಗೇರಿ, ಹುಸೇನಸಾಬ್‌ ಹೊಸಮನಿ, ಇಮಾಮಸಾಬ್‌ ನದಾಫ್‌, ಎಂ.ಆರ್. ಹೊಸಳ್ಳಿ, ಇಸ್ಮೈಲ್ ನದಾಫ, ಹುಸೇನಬಾಷಾ ನದಾಫ, ಬಾಬು ಸಾಬ್ ನದಾಫ, ರಫೀಕ್‌ ತಳ್ಳಿಹಾಳ, ತೇಜೇಸಾಬ್ ನದಾಫ, ಅಶ್ರಫ್ ಅಲಿ ನದಾಫ, ಮುಬಾರಕ ತಳಕಲ್ಲ, ರಾಜೇಸಾಬ್‌ ಪಿಂಜಾರ, ದಾವಲಸಾಬ್‌ ಬಾಸಲಾಪುರ, ಕಾಶಿಮಸಾಬ್‌ ಹೊಸಳ್ಳಿ ಮುಂತಾದವರಿದ್ದರು.