ಸಾರಾಂಶ
ರಾಜ್ಯದಲ್ಲಿ ಸುಮಾರು 25 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜವು ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಹಿಂದುಳಿದಿದೆ. ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದ ನದಾಫ್, ಪಿಂಜಾರ್ ಉಪಜಾತಿಯ ಪ್ರವರ್ಗ 1 ಮೀಸಲಾತಿ ಹೊಂದಿದೆ.
ಹುಬ್ಬಳ್ಳಿ:
ರಾಜ್ಯ ಸರ್ಕಾರವು ಪಿಂಜಾರ್-ನದಾಫ್ ಅಭಿವೃದ್ಧಿ ನಿಗಮ ಸ್ಥಾಪಿಸಿದರೂ ಅನುದಾನ ನೀಡಿಲ್ಲ. ಕೂಡಲೇ ಸರ್ಕಾರ ಅನುದಾನ ನೀಡುವಂತೆ ಆಗ್ರಹಿಸಿ ಸೋಮವಾರ ರಾಜ್ಯ ಪಿಂಜಾರ್, ನದಾಫ್ ಸಂಘದ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ರಾಜ್ಯದಲ್ಲಿ ಸುಮಾರು 25 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜವು ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಹಿಂದುಳಿದಿದೆ. ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದ ನದಾಫ್, ಪಿಂಜಾರ್ ಉಪಜಾತಿಯ ಪ್ರವರ್ಗ 1 ಮೀಸಲಾತಿ ಹೊಂದಿದೆ ಎಂದರು.ಹಲವು ವರ್ಷಗಳ ಹೋರಾಟದ ಫಲವಾಗಿ 2023ರಲ್ಲಿ ಪ್ರತ್ಯೇಕವಾಗಿ ಪಿಂಜಾರ್, ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಆದೇಶ ಮಾಡಿದೆ. ಆದರೆ, ಇದುವರೆಗೂ ಅನುದಾನ ನೀಡಿಲ್ಲ. ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಶಾಸಕರು, ಸಚಿವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸರ್ಕಾರ ಬೇಡಿಕೆ ಈಡೇರಿಸಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಮಹಾನಗರ ಪಾಲಿಕೆ ಸದಸ್ಯ ಜರತಅಲಿ ದೊಡ್ಡಮನಿ, ರಫೀಕಅಹ್ಮದ್ ದೊಡ್ಡಮನಿ, ರಾಜ್ಯ ಉಪಾಧ್ಯಕ್ಷ ಎಂ.ಎಚ್. ಬೆಂಡಿಗೇರಿ ತಾಲೂಕು ಅಧ್ಯಕ್ಷ ಖುದಾನ್ ಸಾಬ ಗೊಗ್ಗಲ್, ಇಸ್ಮಾಯಿಲಸಾಬ್ ನದಾಫ್, ಉಪಾಧ್ಯಕ್ಷ ಎಂ.ಎ. ನದಾಫ್, ದಿವಾನಸಾಬ್ ನದಾಫ್, ಮೌಲಾಸಾಬ್ ನದಾಫ, ಬಾಷಾಸಾಬ ಶಿಬಾರಗಟ್ಟಿ, ಹಜರತಅಲಿ ನದಾಫ, ಅಬ್ದುಲನಭಿ ನದಾಫ, ರಿಯಾಜ್ ನದಾಫ, ನಜೀರಅಹ್ಮದ ನದಾಫ, ಹಸನಸಾಬ ನದಾಫ, ಬಾಬು ಪಿಂಜಾರ್ ಸೇರಿದಂತೆ ಹಲವರಿದ್ದರು.