ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ

| Published : Jan 04 2024, 01:45 AM IST

ಸಾರಾಂಶ

ಈ ಭಾಗದ ಬಹುತೇಕ ಶಾಲೆಗಳಲ್ಲಿ ಕಟ್ಟಡ, ಕಾಂಪೌಂಡ್‌ ಸರಿಯಾಗಿದ್ದು, ಕೆಲ ಶಾಲೆಗಳಲ್ಲಿ ಮಾತ್ರ ಕೊಠಡಿಗಳ ಕಟ್ಟಡ ಪ್ರಾರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಈ ಭಾಗದ ಬಹುತೇಕ ಶಾಲೆಗಳಲ್ಲಿ ಕಟ್ಟಡ, ಕಾಂಪೌಂಡ್‌ ಸರಿಯಾಗಿದ್ದು, ಕೆಲ ಶಾಲೆಗಳಲ್ಲಿ ಮಾತ್ರ ಕೊಠಡಿಗಳ ಕಟ್ಟಡ ಪ್ರಾರಂಭಿಸಲಾಗಿದೆ. ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ ಹೇಳಿದರು.

ರಬಕವಿ-ಬನಹಟ್ಟಿ ತಾಲೂಕಿನ ಹನಗಂಡಿ ಗ್ರಾಮದಲ್ಲಿ ಜರುಗಿದ ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ ಅವರು ಸಭೆಯಲ್ಲಿ ಮಾತನಾಡಿ, ಶಾಲೆಗಳಿಗೆ ಅವಶ್ಯವಿರುವ ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಗ್ರಾಪಂದವರು ಮಾಡಿಕೊಡುತ್ತಾರೆ. ಬಳಿಕ ಅವೆಲ್ಲವುಗಳ ಉಸ್ತುವಾರಿಯನ್ನು ಮಾತ್ರ ಶಾಲಾ ಆಡಳಿತ ನಿಗಾವಹಿಸಬೇಕಾಗುತ್ತದೆ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಉತ್ತಮವಾಗಿಸಲು ಶಿಕ್ಷಕರು ಉತ್ತಮ ಬೋಧನೆಗೆ ಮುಂದಾಗಬೇಕು. ಮಕ್ಕಳ ಭವಿಷ್ಯ ಶಿಕ್ಷಕರ ಪರಿಶ್ರಮದಿಂದಲೆ ಉನ್ನತ ಮಟ್ಟಕ್ಕೇರುವ ಸತ್ಯವನ್ನು ಯಾರೂ ಮರೆಯಬಾರದು ಎಂದರು.

ಸಮಾಜ ಕಲ್ಯಾಣ, ಹೆಸ್ಕಾಂ, ಪೊಲೀಸ್, ಅರಣ್ಯ, ಕೆಎಸ್‌ಆರ್‌ಟಿಸಿ, ಕಾರ್ಮಿಕ, ರೇಷ್ಮೆ, ಅಂಚೆ, ಇಲಾಖೆ ಅಧಿಕಾರಿಗಳು ತಮಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿವರಿಸಿ, ಅಡೆತಡೆಗಳನ್ನು ಸರಿ ಪಡಿಸುವುದಾಗಿ ಸಾರ್ವಜನಿಕರಿಗೆ ಹೇಳಿದರು.ಗ್ರಾಪಂ ಅಧ್ಯಕ್ಷೆ ಮಹಾದೇವಿ ಬಿ.ಪಾಟೀಲ, ಸದಸ್ಯರಾದ ಶೇಖರ ಗುಬಚೆ, ಧರೇಶ ಹುದ್ದಾರ, ಕರೆಪ್ಪ ದಳವಾಯಿ, ಕಮಾಲಸಾಬ ರಾಮದುರ್ಗ, ರಾಬಿಯಾ ಅಲಾಸ್, ಮಹಾದೇವಿ ಗುಬಚೆ, ಸಿದ್ದಪ್ಪ ಸೋರಗಾಂವಿ, ಶಿಕ್ಷಣ ಸಂಯೋಜಕರಾದ ಎಸ್.ಬಿ. ಬುರ್ಲಿ, ಬಿ.ಎಂ. ಹಳೆಮನಿ, ಪಿಡಿಒ ಪಿಪಿ ರಾವಳ, ಕಾರ್ಯದರ್ಶಿ ಮಲ್ಲಿಕ್‌ಸಾಬ ನದಾಫ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ, ಅನೇಕ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.