ವಿದ್ಯಾರ್ಥಿಗಳು ವಿದೇಶಿ ಕ್ರೀಡೆಗಳನ್ನು ಬದಿಗಿಟ್ಟು ಸ್ವದೇಶಿ ಕ್ರೀಡೆಗಳನ್ನು ಬೆಳೆಸುವ ಕಾರ್ಯ ಮಾಡುವುದರ ಜೊತೆಗೆ ತಮ್ಮ ಆರೋಗ್ಯಕರ ಜೀವನಕ್ಕಾಗಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ ಎನ್.ಆರ್.ತಿವಾರಿ ಹೇಳಿದರು.
ಕನ್ನಡಪ್ರಭ ವಾರ್ತೆ ಆಲಮೇಲ
ವಿದ್ಯಾರ್ಥಿಗಳು ವಿದೇಶಿ ಕ್ರೀಡೆಗಳನ್ನು ಬದಿಗಿಟ್ಟು ಸ್ವದೇಶಿ ಕ್ರೀಡೆಗಳನ್ನು ಬೆಳೆಸುವ ಕಾರ್ಯ ಮಾಡುವುದರ ಜೊತೆಗೆ ತಮ್ಮ ಆರೋಗ್ಯಕರ ಜೀವನಕ್ಕಾಗಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ ಎನ್.ಆರ್.ತಿವಾರಿ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಕಲ್ಪವೃಕ್ಷ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಹಯೋಗದಲ್ಲಿ ನಡೆದ 2025-26ನೇ ಸಾಲಿನ ಜಿಲ್ಲಾಮಟ್ಟದ ಥ್ರೋ ಬಾಲ ಪಂದ್ಯಾವಳಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ದುಶ್ಚಟಕ್ಕೆ ಅಂಟಿಕೊಂಡು ಸುಂದರವಾದ ಬದುಕನ್ನು ಸ್ಮಶಾನದತ್ತ ಸಾಗಿಸುತಿದ್ದಾರೆ. ಮನುಷ್ಯನ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ, ಹುಟ್ಟು ಸಾವಿನ ಮಧ್ಯದಲ್ಲಿ ನಾವು ಮಾಡಿದಂತ ಸಾಧನೆಗಳೇ ಶಾಶ್ವತ, ಕ್ರೀಡಾ ಪಟುವಿಗೆ ಸರ್ಕಾರ ಶೇ.2 ರಷ್ಟು ಮೀಸಲಾತಿ ನೀಡಿದೆ. ಉತ್ತಮ ಆಹಾರ ಸೇವಿಸಿ ಪ್ರತಿನಿತ್ಯ ವ್ಯಾಯಾಮ, ಯೋಗಾಸನ, ಮಾಡುವ ಮೂಲಕ ದೇಹ ಸದೃಢ ಮಾಡಿಕೊಂಡು ಸ್ಪರ್ಧೆಗಳಲ್ಲಿ ಬಾಗವಹಿಸಿ ಅಂತಾರಾಷ್ಟ್ರಿಯ ಆಟಗಾರರಾಗಿ ಹೊರಹುಮ್ಮಿ ಸುಂದರವಾದ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ದೈಹಿಕ ಶಿಕ್ಷಣ ಅಧಿಕಾರಿ ರಮೇಶ್ ಬಿರಾದಾರ ಮಾತನಾಡಿ, ತಾಲೂಕಿನಿಂದ 2 ತಂಡಗಳಂತೆ 28 ತಂಡಗಳು ಭಾಗಹಹಿಸಿವೆ. ಪಂದ್ಯಾವಳಿಯಲ್ಲಿ ನಿರ್ಣಾಯಕರ ನಿರ್ಣಯ ಅಂತಿಮವಾಗಿರುತ್ತದೆ. ಸೋತೆನೆಂದು ಕುಗ್ಗಬಾರದು ಸೋಲೇ ಗೆಲುವಿನ ಸೋಪಾನವಾಗಿರುತ್ತದೆ. ಹೀಗಾಗಿ ಆಟಗಾರರು ಸೋಲು ಗೆಲುವು ಎರಡನ್ನು ಸಮನಾಗಿ ಸ್ವೀಕರಿಸಬೇಕು. ಗೆಲುವು ಮುಖ್ಯವಲ್ಲ ಆಟದಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡೆ ಒಂದು ಯುದ್ದ ಇದ್ದಂತೆ ಆದರೆ ಅದನ್ನು ಕೊಲ್ಲಬಾರದು ಗೆಲ್ಲಬೇಕು. ಇಟ್ಟ ಗುರಿ ಮೆಟ್ಟಿ ನಿಂತು ಗೆಲ್ಲುವವರೆಗೂ ಛಲಬಿಡದೆ ಗುರಿಯತ್ತ ಸಾಗಬೇಕು ಎಂದರು. ಕ್ರೀಡಾಕೂಟದ ಉಸ್ತುವಾರಿ ಸಂಸ್ಥೆ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಮಾತನಾಡಿದರು.ಪಂದ್ಯಾವಳಿ ವಿಜೇತರು:
೧೪ ವರ್ಷದ ಬಾಲಕರಲ್ಲಿ ಮುದ್ದೇಬಿಹಾಳ ತಾಲೂಕಿಗೆ ಪ್ರಥಮ ಸ್ಥಾನ. ೧೪ ವರ್ಷದ ಬಾಲಕಿಯರಲ್ಲಿ ಇಂಡಿ ತಾಲೂಕಿಗೆ ಪ್ರಥಮ ಸ್ಥಾನ. ೧೭ ವರ್ಷದ ಬಾಲಕರು ಹಾಗೂ ಬಾಲಕಿಯರಲ್ಲಿ ವಿಜಯಪುರ ಗ್ರಾಮೀಣ ಪ್ರಥಮ ಸ್ಥಾನ ಪಡೆದು ವಿಜಯಶಾಲಿಗಳಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾದರು. ವಿದ್ಯಾರ್ಥಿಗಳಿಗೆ ಕ್ಷೇತ್ರಶಿಕ್ಷಣಾದಿಕಾರಿ ಎಂ.ಬಿ. ಯಡ್ರಾಮಿ ಬಹುಮಾನ ವಿತರಿಸಿದರು.ಶಿವಬಸವ ಶಿವಾಚಾರ್ಯರು ಕೆರೂಟಗಿ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಧುರೀಣ ಮಹಿಬೂಬಸಾಬ ಕಣ್ಣಿ, ಸಂಸ್ಥೆ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಆಡಳಿತಾಧಿಕಾರಿ ಎಸ್.ಎಚ್. ಧೂಳಬಾ, ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ರವಿಕಾಂತ ನಡುವಿನಕೇರಿ, ದೈಹಿಕ ಶಿಕ್ಷಣ ಅಧಿಕಾರಿ ರಮೇಶ ಬಿರಾದಾರ, ಪ್ರಾರ್ಚಾರಾದ ಡಾ. ಎ.ಬಿ.ಸಿಂದಗಿ, ಎಸ್.ಬಿ.ಬಿರಾದಾರ, ಮುಖ್ಯಶಿಕ್ಷಕರಾದ ಆರ್.ಐ.ಚೌಧರಿ, ಎಸ್.ಎಂ.ಲಂಗೋಟಿ, ಬಿ.ಎಸ್. ತಮ್ಮಗೋಳ, ಬಿ.ಎಸ್.ಚನ್ನೂರ, ಆರ್.ಐ. ಚೌದರಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಣ್ಣ ಹಚ್ಚಡದ, ತಾಲೂಕು ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ. ಬಿರಾದಾರ, ಪ್ರೌಢಶಾಲೆ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ. ಕೆಂಬಾವಿ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.