ಸಾರಾಂಶ
- ಚುನಾವಣಾ ಪ್ರಚಾರ ಸಭೆ । ಪತ್ರಕರ್ತರ ಭವನ, ಬಸ್ ಪಾಸ್, ನಿವೇಶನ, ಆರೋಗ್ಯ ವಿಮೆ ಭರವಸೆ - - -
ಕನ್ನಡಪ್ರಭ ವಾರ್ತೆ ಜಗಳೂರುಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ನ.9ರಂದು ನಡೆಯಲಿದೆ. ಮತ್ತೊಮ್ಮೆ ತಂಡದ ಜೊತೆಗೆ ನಮ್ಮನ್ನು ಆಯ್ಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿ ಹಾಗೂ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್ ಮನವಿ ಮಾಡಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗಿದೆ. ಪತ್ರಕರ್ತರ ಭವನಕ್ಕೆ ನಿವೇಶನವನ್ನು ಪಡೆದುಕೊಂಡಿದ್ದು, ನಿರ್ಮಾಣ ಮಾಡಲು ಮತ್ತೊಂದು ಅವಧಿಗೆ ನಮ್ಮನ್ನು ಆಯ್ಕೆ ಮಾಡಬೇಕು. ಇದಾದಲ್ಲಿ ಸುಂದರವಾದ ಭವನ ನಿರ್ಮಿಸಿ ಬೇಡಿಕೆಗಳನ್ನು ಈಡೇರಿಸುವ ಮೂಲಕ ಪತ್ರಕರ್ತರಿಗೆ ಬಸ್ ಪಾಸ್, ನಿವೇಶನ, ಆರೋಗ್ಯ ವಿಮೆ ಕಲ್ಪಿಸಿ ಕೊಡಲಾಗುವುದೆಂದು ಭರವಸೆ ನೀಡಿದರು.ರಾಜ್ಯ ಸಮಿತಿ ಸದಸ್ಯ ಚಂದ್ರಣ್ಣ ಮಾತನಾಡಿ, ಜಿಲ್ಲಾ ಉಸ್ತವಾರಿ ಸಚಿವರು ಈಗಾಗಲೇ ಪತ್ರಕರ್ತರ ಭವನಕ್ಕೆ ನಿವೇಶನ ಒದಗಿಸಿ ಕೊಟ್ಟಿದ್ದು ಶೀಘ್ರದಲ್ಲಿಯೇ ಭವನ ಹಾಗೂ ಮಳಿಗೆ ಸಂಕೀರ್ಣ ನಿರ್ಮಿಸಲು ಮುಂದಾಗಿದೆ. ಪತ್ರಕರ್ತರಿಗೆ ಪೆನ್ಷನ್ ಬಸ್ ಪಾಸ್ ತೆಗೆದುಕೊಳ್ಳಲು ಆಯಾ ಆಯ ಪತ್ರಿಕೆಯಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿದ್ದೀರಾ ಎನ್ನುವ ಬಗ್ಗೆ ಪತ್ರಿಕೆ ವತಿಯಿಂದ ಸೇವಾ ದೃಢೀಕರಣ ಪತ್ರ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್. ಚಿದಾನಂದಪ್ಪ ಮಾತನಾಡಿ ನಿವೇಶನ ಮತ್ತು ಬಸ್ ಪಾಸ್ ಕಲ್ಪಿಸಿಕೊಡಬೇಕು. ಕೆಲ ಪತ್ರಕರ್ತರು ಮತ್ತು ಅವರ ಪತ್ನಿಯರು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯ ವೆಚ್ಚವನ್ನು ಭರಿಸಲಾಗದೇ ಸಂಕಷ್ಟದಲ್ಲಿದ್ದಾರೆ. ಅಂಥ ಪತ್ರಕರ್ತರಿಗೆ ಸಂಘದ ಕಡೆಯಿಂದ ಆರೋಗ್ಯ ವಿಮೆ ಭರಿಸಿ, ಅನುಕೂಲ ಕಲಿಸಿಕೊಡಬೇಕಿದೆ ಎಂದರು.ವರ್ಷಗಳಿಂದ ಮನೆಯಲ್ಲಿ ವಾಸಿಸುವ ಪತ್ರಕರ್ತರಿಗೆ ನಿವೇಶನ ಕಲ್ಪಿಸಲು ಜಾರಿಗೆ ಒತ್ತಡ ಹೇರಲಾಗಿದೆ. ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನನ್ನ ಕೈಲಾದಷ್ಟು ಆರ್ಥಿಕ ಸಹಾಯ ಮಾಡಿದ್ದೇನೆ. ಖಾಸಗಿ ಬಸ್‌ಗಳಲ್ಲಿ ಜಿಲ್ಲಾದ್ಯಂತ ಸಂಚರಿಸಲು ತಾಲೂಕಿನ ಎಲ್ಲ ಪತ್ರಕರ್ತರಿಗೆ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಿದ್ದೇನೆ. ಜಿಲ್ಲಾ, ರಾಜ್ಯ ಸಮಿತಿಯವರು ಸಹ ಸ್ಪಂದಿಸಬೇಕು. ಅನಾಮಧೇಯರಿಂದ ಪತ್ರಕರ್ತರ ಮೇಲೆ ಹಲ್ಲೆಯಾಗಿದೆ. ಪತ್ರಕರ್ತರಿಗೆ ರಕ್ಷಣೆ ಸಿಗುವಂತೆ ಸಂಘದಿಂದ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದರು.
ಹಿರಿಯ ಪತ್ರಕರ್ತರಾದ ಡಿ.ಶ್ರೀನಿವಾಸ್, ಅಣಬೂರು ಮಠದ ಕೊಟ್ರೇಶ್ ಸೇರಿದಂತೆ ಇತರರು ಮಾತನಾಡಿದರು. ಜಿಲ್ಲಾ ಸಂಘದ ಜಿಲ್ಲಾ ಹಿರಿಯ ಪತ್ರಕರ್ತರಾದ ಜೈಮುನಿ, ಬದ್ರಿನಾಥ್, ಓಡೆಯರ್, ಬಿ.ಪಿ.ಸುಭಾನ್, ಡಿ.ಶ್ರೀನಿವಾಸ್, ಎಂ.ಸಿ.ಬಸವರಾಜು, ವೀರೇಶ್, ಕೃಷ್ಣಪರಾವ್, ತಿಪ್ಪೇಸ್ವಾಮಿ, ರುದ್ರೇಶ್, ಕೋಟೆಶ್, ವೇದಮೂರ್ತಿ, ತಾಲೂಕು ಪತ್ರಕರ್ತರಾದ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಐ. ಹೊಳೆ, ಖಜಾಂಚಿ ಜಗದೀಶ್, ಉಪಾಧ್ಯಕ್ಷ ಸಯಿದ್ ವಾಸಿಂ, ಕಾರ್ಯದರ್ಶಿ ಜೆ.ಒ. ರವಿಕುಮಾರ್, ಸೋಮನಗೌಡ, ಎಚ್.ಬಾಬು, ಶಿವಲಿಂಗಪ್ಪ, ಎಚ್.ಆರ್.ಬಸವರಾಜು, ಬಿ.ಒ. ಮಾರುತಿ, ಎ.ಎಂ. ಮಂಜಯ್ಯ, ಮಹಾಂತೇಶ್ ಬ್ರಹ್ಮ, ಜೆ.ಒ.ಮಂಜಣ್ಣ, ಸುದ್ದಿಕಿರಣ ಮಂಜು, ರಾಜಪ್ಪ, ಸಿದ್ದಮ್ಮನಹಳ್ಳಿ ಬಸವರಾಜು, ಸಂದೀಪ್, ಜೀವನ್, ಡಿ.ಎಂ.ಚೇತನ್ಕುಮಾರ್ , ರಕೀಬ್ ಇತರರು ಇದ್ದರು.- - -
-21ಜೆ.ಜಿ.ಎಲ್.1:ಸಭೆಯಲ್ಲಿ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್ ಮಾತನಾಡಿದರು.