ತಬ್ಬಲಿಯಾದ ಕೊರಚರಿಗೆ ಮೀಸಲಿನ ನ್ಯಾಯ ನೀಡಿ: ಕೆ.ಎನ್.ಪ್ರಭು

| Published : Aug 24 2025, 02:00 AM IST

ಸಾರಾಂಶ

ಮಾದಿಗ ಸಮಾಜಕ್ಕಿಂತಲೂ ಹಿಂದುಳಿದ ಕೊರಚ ಸಮಾಜದ ತಬ್ಬಲಿಯಾಗಿದ್ದು, ಕೇವಲ 1 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯವಾಗಿದ್ದು, ಒಳಮೀಸಲಾತಿ ಪುನಹ ಪರಿಶೀಲಿಸಿ, ಕೊರಚರಿಗೆ ಸಾಮಾಜಿಕ ನ್ಯಾಯ ನೀಡಬೇಕು ಎಂದು ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕೆ.ಎನ್.ಪ್ರಭು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾದಿಗ ಸಮಾಜಕ್ಕಿಂತಲೂ ಹಿಂದುಳಿದ ಕೊರಚ ಸಮಾಜದ ತಬ್ಬಲಿಯಾಗಿದ್ದು, ಕೇವಲ 1 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯವಾಗಿದ್ದು, ಒಳಮೀಸಲಾತಿ ಪುನಹ ಪರಿಶೀಲಿಸಿ, ಕೊರಚರಿಗೆ ಸಾಮಾಜಿಕ ನ್ಯಾಯ ನೀಡಬೇಕು ಎಂದು ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕೆ.ಎನ್.ಪ್ರಭು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕೊರಚ ಜನಾಂಗವನ್ನು ಎಡಗೈ ಅಥವಾ ಬಲಗೈ ಸಮುದಾಯಕ್ಕೆ ಸೇರ್ಪಡೆಗೊಳಿಸಬೇಕು. ಇಲ್ಲವಾದರೆ 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಅಲೆಮಾರಿ ಪರಿಶಿಷ್ಟ ಜಾತಿಗಳ ಗುಂಪುಗಳನ್ನೆಲ್ಲಾ ಒಂದು ಗುಂಪು ಮಾಡಿ, ಶೇ.2 ಮೀಸಲಾತಿ ಕಲ್ಪಿಸಬೇಕು ಎಂದರು.

ಸರ್ವೋಚ್ಛ ನ್ಯಾಯಾಲಯದ ಆದೇಶವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಶೋಷಿತ ಸಮುದಾಯಗಳಿಗೆ ಮೀಸಲಾತಿ ನೀಡುವಂತೆ ಹೇಳಿದೆ. ಆದರೆ, ನ್ಯಾಯಾಲಯದ ಆದೇಶವನ್ನೇ ಗಾಳಿಗೆ ತೂರಿ, ತಮ್ಮ ಮತ ಬ್ಯಾಂಕ್‌ಗಾಗಿ ಮಾಡಿರುವ ಇಂತಹ ಒಳ ಮೀಸಲಾತಿಯನ್ನು ಪುನಾ ಪರಿಶೀಲಿಸುವ ಕೆಲಸವನ್ನು ಸರ್ಕಾರ ಮಾಡಿ, ಕೊರಚ ಸಮುದಾಯಕ್ಕೆ ಸೂಕ್ತ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.

ಕೊರಚ ಸಮಾಜವು ಯಾವುದೇ ಜಾತಿಗೂ ಸಮನಾಂತರವಾಗಿಲ್ಲ. ಹಾಗಾಗಿ ಇದುವರೆಗೂ ಕೊರಚ ಸಮಾಜದ ಬಗ್ಗೆ ಯಾವುದೇ ಕುಲಶಾಸ್ತ್ರ ಅಧ್ಯಯನವಾಗಿಲ್ಲ. ಆದರೂ, ಸಹ ಸಮನಾದ ಜಾತಿಗಳೆಂದು ನಮ್ಮನ್ನು ಬೇರೆ ಬೇರೆ ಜಾತಿಗಳೊಂದಿಗೆ ಕೂಡಿಸುವುದು ನಮ್ಮ ಕೊರಚ ಸಮಾಜಕ್ಕೆ ಮಾಡುತ್ತಿರುವ ಅತೀ ದೊಡ್ಡ ದ್ರೋಹವಾಗಿದೆ. ಅತೀ ಕಡಿಮೆ ಸಂಖ್ಯೆಯ ನಮ್ಮ ಸಮಾಜಕ್ಕೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಅವರು ಹೇಳಿದರು.

ಎಡಗೈ ಸಂಬಂಧಿಸಿದ ಜಾತಿಗಳಿಗೆ ಶೇ.6 ಹಾಗೂ ಬಲಗೈ ಸಂಬಂಧಿ ಜಾತಿಗಳಿಗೆ ಶೇ.6 ಒಳಮೀಸಲಾತಿ ನಿಗಪಡಿಸಿ, ಸ್ಪೃರ್ಶ ಜಾತಿಗಳೆಂದು ಶೇ.5 ಮಾಡಿ, ಸಚಿವ ಸಂ

ಪುಟದಲ್ಲಿ ತೀರ್ಮಾನಿಸಲಾಗಿದೆಯೆನ್ನುವುದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾದ ನಡೆಯಾಗಿದೆ. ಸರ್ಕಾರ ತಕ್ಷಣ‍ವೇ ಒಳಮೀಸಲಾತಿ ಪುನಃ ಪರಿಶೀಲಿಸಬೇಕು. ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಡಿಸಿ, ನ್ಯಾಯ ಒದಗಿಸಬೇಕು ಎಂದು ಅವರು ತಾಕೀತು ಮಾಡಿದರು.

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಬಗ್ಗೆ ಸರ್ವೋಚ್ಛ ನ್ಯಾಯಾಲಯ 1.8.2024ರಂದು ಪಂಜಾಬ್ ರಾಜ್ಯ ಮತ್ತು ಇತರರು ವರ್ಸಸ್‌ ದೇವೀಂದರ್ ಸಿಂಗ್ ಪ್ರಕರಣದಲ್ಲಿ ಎಂಬುದಾಗಿ ತೀರ್ಪು ನೀಡಿದೆ. ಅಂದರೆ, ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣ ಮಾಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಸಾಂವಿಧಾನಿಕದತ್ತವಾಗಿದೆ ಎಂಬುದಾಗಿ ಸ್ಪಷ್ಟವಾಗಿ ಹೇಳಿದೆ. ಸಂವಿಧಾನದ ಅನುಚ್ಛೇದ 14, 15 ಮತ್ತು 16ರಲ್ಲಿ ತಿಳಿಯ ಪಡಿಸಿದ ಸಮಾನತೆಯ ತತ್ವಕ್ಕೆ ಯಾವುದೇ ಚ್ಯುತಿ ಬರದಂತೆ ಅದರ ಮೂಲ ಆಶಯವನ್ನು ಸದೃಢಗೊಳಿಸಲು ಒಳ ಮೀಸಲಾತಿ ಕಲ್ಪಿಸಬಹುದೆಂದು ಅಭಿಪ್ರಾಯಪಟ್ಟಿದೆ. ಅದರಂತೆ ಒಳ ಮೀಸಲಾತಿ ನೀಡಲಿ ಎಂದು ಮನವಿ ಮಾಡಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಕೊಟ್ರೇಶ, ಮುಖಂಡರು, ವಕೀಲರಾದ ಎಸ್.ಕುಮಾರ, ನಾಗರಾಜ, ಮಾರಪ್ಪ, ಎಂ.ನಾಗರಾಜ, ಚಿಕ್ಕಪ್ಪ ಮಾಚಿಹಳ್ಳಿ, ರಾಜಪ್ಪ, ಹನುಮಂತಪ್ಪ ಇತರರು ಇದ್ದರು.