ಔರಾದ್‌ ಕ್ಷೇತ್ರದಲ್ಲಿ ಖೂಬಾಗೆ 1 ಲಕ್ಷ ಮತಗಳ ಲೀಡ್‌ ಕೊಡಿ

| Published : Apr 26 2024, 12:45 AM IST / Updated: Apr 26 2024, 12:46 AM IST

ಔರಾದ್‌ ಕ್ಷೇತ್ರದಲ್ಲಿ ಖೂಬಾಗೆ 1 ಲಕ್ಷ ಮತಗಳ ಲೀಡ್‌ ಕೊಡಿ
Share this Article
  • FB
  • TW
  • Linkdin
  • Email

ಸಾರಾಂಶ

ಔರಾದ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾಗೆ ಕನಿಷ್ಟ ಒಂದು ಲಕ್ಷ ಮತಗಳ ಲೀಡ್‌ ಕೊಡಬೇಕೆಂದು ಜೆಡಿಎಸ್‌ ನಾಯಕ ಸೂರ್ಯಕಾಂತ ನಾಗಮಾರಪಳ್ಳಿ ಮನವಿ ಮಾಡಿದರು

ಔರಾದ್‌: ಔರಾದ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾಗೆ ಕನಿಷ್ಟ ಒಂದು ಲಕ್ಷ ಮತಗಳ ಲೀಡ್‌ ಕೊಡಬೇಕೆಂದು ಜೆಡಿಎಸ್‌ ನಾಯಕ ಸೂರ್ಯಕಾಂತ ನಾಗಮಾರಪಳ್ಳಿ ಮನವಿ ಮಾಡಿದರು.

ಅವರು ಪಟ್ಟಣದಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಖೂಬಾರನ್ನು ಗೆಲ್ಲಿಸಿ, ಮಾಜಿಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದರು.

ದಿ.ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು ಸಹಕಾರ ಕ್ಷೇತ್ರದಲ್ಲಿ ದೇಶದ ಗಮನ ಸೆಳೆಯುವಂತಹ ಕೆಲಸ ಮಾಡಿದ್ದಾರೆ. ಈ ಮಹತ್ತರ ಸಾಧನೆಯ ಹಿಂದೆ ಔರಾದ್‌ ಮಹಾಜನತೆಯ ಕೊಡುಗೆಯೂ ಇದೆ ಎಂದು ಸ್ಮರಿಸಿದರು.

ಔರಾದ್‌ ಮತದಾರರು ಐದು ಬಾರಿ ಗೆಲ್ಲಿಸಿದ್ದರಿಂದಲೇ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ನಾಗಮಾರಪಳ್ಳಿ ಪರಿವಾರವು ಔರಾದ್‌ ಜನರ ಸಹಾಯ, ಸಹಕಾರವನ್ನು ಸದಾ ಸ್ಮರಿಸುತ್ತದೆ ಎಂದು ನಾಗಮಾರಪಳ್ಳಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಪಕ್ಷದ ಅಭ್ಯರ್ಥಿ ಭಗವಂತ ಖೂಬಾ, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ್‌, ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್‌, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ರಮೇಶ ಪಾಟೀಲ್‌ ಮತ್ತಿತರ ಮುಖಂಡರು, ಎರಡೂ ಪಕ್ಷಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.