ಗ್ರಾಮೀಣ ಪ್ರದೇಶದ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ: ಶಾಸಕ ಮಧು ಜಿ.ಮಾದೇಗೌಡ

| Published : Aug 13 2024, 12:58 AM IST

ಗ್ರಾಮೀಣ ಪ್ರದೇಶದ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ: ಶಾಸಕ ಮಧು ಜಿ.ಮಾದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕ್‌ಗಳು ಪ್ರಾರಂಭಿಸಬೇಕಾದರೂ ರಿಜಾರ್ಸ್ ಬ್ಯಾಂಕ್‌ನ ನಿಯಾಮಾನುಸಾರ ಮಾಡಬೇಕು. ನಗರ ಪ್ರದೇಶದಿಂದ 5 ಕಿ.ಮೀ ದೂರದಲ್ಲಿ ಬ್ಯಾಂಕ್ ಆರಂಭಿಸಬೇಕೆಂಬ ಆದೇಶದಂತೆ ಈ ಭಾಗದಲ್ಲಿ ಶಾಖೆ ಪ್ರಾರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಗ್ರಾಮೀಣ ಪ್ರದೇಶದ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಅವರ ಜೀವನವನ್ನು ಸುಧಾರಿಸಲು ಬ್ಯಾಂಕ್‌ನ ಆಡಳಿತ ಮಂಡಳಿ ಶ್ರಮಿಸಬೇಕು ಎಂದು ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.

ಮಡೇನಹಳ್ಳಿ-ಬೊಪ್ಪಸಮುದ್ರ ಗೇಟ್ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಆಕ್ಸಿಸ್ ಬ್ಯಾಂಕ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಹಿಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಸಾಕಷ್ಟು ಅನುಕೂವಾಗಲಿದೆ ಎಂದರು.

ಬ್ಯಾಂಕ್ ವ್ಯವಸ್ಥಾಪಕರು ಹಳ್ಳಿಗಾಡಿನ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಣೆ ಸೇರಿದಂತೆ ರೈತರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.

ಈ ಭಾಗದಲ್ಲಿ ಆಕ್ಸಿಸ್ ಬ್ಯಾಂಕ್ ಶಾಖೆ ಉದ್ಘಾಟನೆಗೊಂಡಿದೆ. ಬ್ಯಾಂಕ್‌ನಿಂದ ಕೆಳ ಮತ್ತು ಮಧ್ಯಮ ವರ್ಗದವರಿಗೂ ಆರ್ಥಿಕ ಸೌಲಭ್ಯ ಸಿಗಬೇಕು. ಆಗ ಮಾತ್ರ ಈ ಬ್ಯಾಂಕ್ ಉದ್ಘಾಟನೆಗೊಂಡಿರುವುದು ಸಾರ್ಥಕತೆಗೊಳ್ಳುತ್ತದೆ ಎಂದು ಹೇಳಿದರು.

ಬೆಂಗಳೂರು ವಿಜಯ ನಗರದ ಕ್ಲಸ್ಟರ್ ಹೆಡ್ ವಿನ್ಸಂಟ್ ಬಾಪ್ಟಿಸ್ಟ್ ಮಿರಾಂಡಾ ಮಾತನಾಡಿ, ಬ್ಯಾಂಕ್‌ಗಳು ಪ್ರಾರಂಭಿಸಬೇಕಾದರೂ ರಿಜಾರ್ಸ್ ಬ್ಯಾಂಕ್‌ನ ನಿಯಾಮಾನುಸಾರ ಮಾಡಬೇಕು. ನಗರ ಪ್ರದೇಶದಿಂದ 5 ಕಿ.ಮೀ ದೂರದಲ್ಲಿ ಬ್ಯಾಂಕ್ ಆರಂಭಿಸಬೇಕೆಂಬ ಆದೇಶದಂತೆ ಈ ಭಾಗದಲ್ಲಿ ಶಾಖೆ ಪ್ರಾರಂಭಿಸಲಾಗಿದೆ ಎಂದರು.

ಈ ವೇಳೆ ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎಂನಂಜೇಗೌಡ, ಬೆಂಗಳೂರಿನ ವಿಜಯನಗರ ಕ್ಲಸ್ಟರ್‌ನ ಮಾರಾಟ ಮತ್ತು ಹೊಣೆಗಾರಿಕೆ ವಿಭಾಗ ಮುಖ್ಯಸ್ಥ ಎನ್.ನವಿಯುದ್ದಿನ್, ಮಾರಾಟ ವ್ಯವಸ್ಥಾಪಕ.ಎಂ.ದಿಲೀಪ್, ಎಂ.ಎಸ್.ವೇದಾವತಿ, ಬ್ಯಾಂಕ್‌ನ ವ್ಯವಸ್ಥಾಪಕ ಎ.ಬಾಬು, ತಾ.ಪಂ ಮಾಜಿ ಸದಸ್ಯ ಬಿ.ಗಿರೀಶ್, ಆರ್.ಸಿದ್ದಪ್ಪ, ಮಡೇನಹಳ್ಳಿ ರುದ್ರಮುನಿ, ಮಲ್ಲಿಕಾ, ಸೇರಿದಂತೆ ಹಲವರಿದ್ದರು.