ಜನರ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ

| Published : Mar 26 2024, 01:19 AM IST

ಸಾರಾಂಶ

ಕಳೆದ ೨೦ ವರ್ಷಗಳಿಂದ ರಾಜಕೀಯವಾಗಿ ಅವಕಾಶ ಸಿಕ್ಕಿಲ್ಲ, ಬಿಜೆಪಿ ಲೋಕಸಭೆಗೆ ಅವಕಾಶ ಮಾಡಿಕೊಟ್ಟಿದ್ದು, ಮತದಾರರು ನನಗೊಂದು ಅವಕಾಶ ಕೊಡಿ ಎಂದು ಚಾಮರಾಜನಗರ ಮೀಸಲು ಲೋಕಸಭೆ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಎಸ್.ಬಾಲರಾಜ್‌ ವಿನಯ ಪೂರ್ವಕವಾಗಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕಳೆದ ೨೦ ವರ್ಷಗಳಿಂದ ರಾಜಕೀಯವಾಗಿ ಅವಕಾಶ ಸಿಕ್ಕಿಲ್ಲ, ಬಿಜೆಪಿ ಲೋಕಸಭೆಗೆ ಅವಕಾಶ ಮಾಡಿಕೊಟ್ಟಿದ್ದು, ಮತದಾರರು ನನಗೊಂದು ಅವಕಾಶ ಕೊಡಿ ಎಂದು ಚಾಮರಾಜನಗರ ಮೀಸಲು ಲೋಕಸಭೆ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಎಸ್.ಬಾಲರಾಜ್‌ ವಿನಯ ಪೂರ್ವಕವಾಗಿ ಮನವಿ ಮಾಡಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೊಳ್ಳೇಗಾಲ ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ನಾನು ಪಕ್ಷೇತರ ಶಾಸಕನಾಗಿ ಆಯ್ಕೆಯಾದ ಬಳಿಕ ಸದಾ ಜನರ ಜೊತೆ ಇದ್ದು ಕೆಲಸ ಮಾಡಿದ್ದೇನೆ ಎಂದರು.ನಂತರ ರಾಜಕೀಯ ಏರಿಳಿತದಲ್ಲಿ ನನಗೆ ಕಳೆದ ೨೦ ವರ್ಷಗಳಿಂದ ಯಾವುದೇ ಅಧಿಕಾರ ಇಲ್ಲದಿದ್ದರೂ ಕ್ಷೇತ್ರದ ಜನರೊಂದಿಗೆ ಬೆರೆತು ಕೆಲಸ ಮಾಡಿದ್ದೇನೆ.ಈಗ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ ಕ್ಷೇತ್ರದ ಮತದಾರರು ನನಗೊಂದು ಅವಕಾಶ ಮಾಡಿ ಕೊಡಿ ಎಂದರು. ಈ ಚುನಾವಣೆಯಲ್ಲಿ ನನಗೆ ಪ್ರಧಾನಿ ನರೇಂದ್ರ ಮೋದಿ ಒಂದು ಶಕ್ತಿಯಾದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹಾಶಕ್ತಿಯಾಗಿದ್ದು, ಬಿಜೆಪಿ ಕಾರ್ಯಕರ್ತರು ಪ್ರೀತಿಯ ಜೊತೆಗೆ ಜೆಡಿಎಸ್‌ನ ನಿರ್ಧಿಷ್ಠ ಮತಗಳು ಬರಲಿರುವ ಕಾರಣ ಗೆಲುವು ಬಿಜೆಪಿಗೆ ಆಗಲಿದ್ದು, ಪಕ್ಷದ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಪ್ರತಿ ಮತದಾರರ ಭೇಟಿ ಮಾಡಿ ಕೇಂದ್ರ ಸರ್ಕಾರದ ಸಾಧನೆಗಳ ಹೇಳಿ ಅರ್ಥ ಮಾಡಿಸಬೇಕು ಎಂದು ಕೋರಿದರು.ಪ್ರಸಾದರ ಬೆನ್ನಿಗಿದ್ದಾರೆ: ಕ್ಷೇತ್ರದ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಮೂರು ಬಾರಿ ಭೇಟಿಯಾಗಿದ್ದೇನೆ.ನಿಮ್ಮ ಪರವಾಗಿ ನಾನಿದ್ದೇನೆ ನೀನು ಹೋಗಿ ಪ್ರಚಾರ ಮಾಡು ಎಂದು ಹೇಳಿದ್ದಾರೆ ಅಲ್ಲದೆ ಅವರ ಬೆಂಬಲಿಗರು ಕೂಡ ಸಹಕರಿಸಲಿದ್ದಾರೆ ಎಂದರು. ಸಭೆಯಲ್ಲಿ ಮಾಜಿ ಸಚಿವ ಎನ್.ಮಹೇಶ್‌,ಬಿಜೆಪಿ ಪ್ರಭಾರಿ ಎನ್.ವಿ.ಪಣೀಶ್‌,ವಿಧಾನ ಪರಿಷತ್‌ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಸೇರಿದಂತೆ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಇದ್ದರು.ನಿನ್ನ ನೆನದ ಜೀವನ ಆಯಿತಲ್ಲ ಪಾವನ! : ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್‌ ನಿನ್ನ ನೆನದ ಜೀವನ ಆಯಿತಲ್ಲ ಪಾವನ ಎಂಬ ಹಾಡನ್ನು ಹಾಡುವ ಮೂಲಕ ಸಭಿಕರ ಮನ ಗೆದ್ದರು. ನಾನು ಈ ಹಾಡನ್ನು ಹಾಡಿದಾಗ ಕೋಟಿಗೂ ಹೆಚ್ಚು ಜನ ಪೇಸ್‌ಬುಕ್‌ನಲ್ಲಿ ನೋಡಿದ್ದಾರೆ ಎಂದು ಹೇಳಿದ ಬಳಿಕ ಹಾಡು ಹಾಡಿ ರಂಜಿಸಿದರು.

ಬಿಜೆಪಿ ಅಭ್ಯರ್ಥಿ ಬಾಲರಾಜ್‌ ಎಚ್‌ಎಸ್‌ಎಂ ಸಮಾಧಿಗೆ ಭೇಟಿ: ಚಾಮರಾಜನಗರ ಲೋಕಸಭೆ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಅವರು ಕಾಂಗ್ರೆಸ್‌ ಯುವ ನಾಯಕರೂ ಆದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರ ತಂದೆ ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವಪ್ರಸಾದ್‌ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು.