ಕೋಲಾರದಲ್ಲಿ ಎಸ್ಸಿ ಬಲಗೈ ಸಮುದಾಯ ಹೆಚ್ಚಾಗಿದ್ದು, ಬಲಗೈ ಸಮುದಾಯ ಮೊದಲಿನಿಂದ ಎಡಗೈ ಸಮುದಾಯದ ಕೆ.ಎಚ್.ಮುನಿಯಪ್ಪರನ್ನು ಬೆಂಬಲಿಸಿಕೊಂಡು ಬರಲಾಗಿದೆ. ಆದರೆ ತಮಗೆ ಎರಡನೇ ಅವಧಿಯಲ್ಲಿ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದ್ದು, ಕೊಟ್ಟ ಮಾತು ಉಳಿಸಿಕೊಳ್ಳುವ ಆಶಾಭಾವನೆ ಇದೆ ಎನ್ನುತ್ತಾರೆ ಶಾಸಕ ನಾರಾಯಣಸ್ವಾಮಿ.

ಕನ್ನಡಪ್ರಭ ವಾರ್ತೆ ಕೋಲಾರಬಂಗಾರಪೇಟೆಯ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಪ್ರಾರ್ಥಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಕೋಲಾರಮ್ಮ ದೇವಾಲಯಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ೧೦೧ ಈಡುಗಾಯಿ ಒಡೆದು, ಪಟಾಕಿ ಸಿಡಿಸಿ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಗೆ ಮಂತ್ರಿ ಸ್ಥಾನ ಕರುಣಿಸುವಂತೆ ಕೋರಿ ಶಕ್ತಿ ದೇವತೆ ಕೋಲಾರಮ್ಮಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ. ರಾಜ್ಯ ಸರ್ಕಾರದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಸಿಗದ ಕಾರಣ ಯಾವುದೇ ಸೌಲಭ್ಯಗಳು ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಕೋಲಾರ ಜಿಲ್ಲೆಗೆ ಸಚಿವ ಸ್ಥಾನ ದೊರೆಯಬೇಕು ಎಂದರು.ಎಸ್ಸಿ ಸಮುದಾಯಕ್ಕೆ ನೀಡಲಿ

ಕೋಲಾರದಲ್ಲಿ ಎಸ್ಸಿ ಬಲಗೈ ಸಮುದಾಯ ಹೆಚ್ಚಾಗಿದ್ದು, ಬಲಗೈ ಸಮುದಾಯ ಮೊದಲಿನಿಂದ ಎಡಗೈ ಸಮುದಾಯದ ಕೆ.ಎಚ್.ಮುನಿಯಪ್ಪರನ್ನು ಬೆಂಬಲಿಸಿಕೊಂಡು ಬರಲಾಗಿದೆ. ಆದರೆ ತಮಗೆ ಎರಡನೇ ಅವಧಿಯಲ್ಲಿ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದ್ದು, ಕೊಟ್ಟ ಮಾತು ಉಳಿಸಿಕೊಳ್ಳುವ ಆಶಾಭಾವನೆ ಇದೆ ಎಂದರು.

ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಮಂತ್ರಿ ಸ್ಥಾನ ಕೇಳೋದು ಹಕ್ಕು ಇದೆ, ಆದರೆ ನನಗೆ ಮಂತ್ರಿ ಸ್ಥಾನ ಕೊಡಬಾರದು ಅಂತ ಯಾವ ಶಾಸಕರು ಸಹ ವಿರೋಧಿಸಿಲ್ಲ. ಜಿಲ್ಲೆಯ ನಾಲ್ಕು ಜನ ಶಾಸಕರಲ್ಲಿ ಯಾರಿಗೆ ನೀಡಿದರೂ ಸಮಾಧಾನ ನನಗಿದೆ, ಆದರೆ ನನಗೆ ಕೊಡಿ ಅನ್ನೋದು ನನ್ನ ಅಹವಾಲು ಆಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಹೈಕಮಾಂಡ್ ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ

ಸಿಎಂ ಬದಲಾವಣೆ ನಮ್ಮ ಕೈಯಲಿಲ್ಲ. ಸಚಿವ ಸಂಪುಟ ವಿಸ್ತರಣೆ ಖಂಡಿತ ಆಗುತ್ತೆ, ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಆಗಲಿದೆ, ೧೨ ರಿಂದ ೧೩ ಜನರಿಗೆ ಕೊಕ್‌ ನೀಡುತ್ತಾರೆ ಅನ್ನೋ ಸುದ್ದಿ ಇದೆ, ಮೊದಲನೇ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭರವಸೆ ನೀಡಿದ್ದರು. ಒತ್ತಡ ಮಾಡಿದರೆ ಮಗ ಪ್ರಿಯಾಂಕ್ ಖರ್ಗೆಗೆ ತಪ್ಪಿಸಿ ನೀಡಬೇಕಾಗುತ್ತೆ ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಆಗಾಗಿ ನನಗೆ ಎರಡನೇ ಅವಧಿಯಲ್ಲಿ ಮಂತ್ರಿ ಸ್ಥಾನ ಸಿಗುವ ಭರವಸೆ ಇದೆ ಎಂದರು.

ದಲಿತ ಮುಖ್ಯಮಂತ್ರಿ ಆಗಲಿ

ರಾಜಕೀಯ ಶಾಶ್ವತ ಅಲ್ಲ ಅಂತ ಸಿಎಂ ಹೇಳಿದ್ದು ಸಹಜ ಮಾತು. ರಾಜಕೀಯ ಅನ್ನೋದು ಯಾರಿಗೂ ಶಾಶ್ವತ ಅಲ್ಲ. ಪಕ್ಷ ಯಾರಪ್ಪನ ಆಸ್ತಿ ಅಲ್ಲ, ಸಾರ್ವಜನಿಕರ ಆಸ್ತಿ, ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ, ನಿವೃತ್ತಿ ಆಗಲ್ಲ, ದಲಿತ ಸಿಎಂ ಆಗಬೇಕು ಅನ್ನೋದು ನಮಗೂ ಆಸೆ ಇದೆ, ೮ ವರ್ಷಗಳ ಕಾಲ ಹಿಂದೆ ಪರಮೇಶ್ವರ್ ಅಧ್ಯಕ್ಷರಾಗಿದ್ದರು. ೨೦೨೩ ರಲ್ಲಿ ಪಕ್ಷ ಅಧಿಕಾರಕ್ಕೆ ತರೋದಕ್ಕೆ ಅವರು ಪ್ರಯತ್ನಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ೫೫ ವರ್ಷಗಳ ಕಾಲ ಸುದೀರ್ಘ ರಾಜಕಾರಣ ಮಾಡಿದ್ದಾರೆ. ಪರಮೇಶ್ವರ್,ಕೆ.ಎಚ್ ಮುನಿಯಪ್ಪ, ಮಹದೇವಪ್ಪ ಇವರೆಲ್ಲಾ ಸಿಎಂ ಸ್ಥಾನಕ್ಕೆ ಅರ್ಹರಿದ್ದಾರೆ. ದಲಿತ ಸಿಎಂ ಮಾಡಿದ್ರೆ ನಮ್ಮದೇನು ಅಭ್ಯಂತರ ಇಲ್ಲ, ಮಾಡಲಿ ಅಂತ ಒತ್ತಾಯ ಮಾಡ್ತೇವೆ. ನಿರಂತರ ಪ್ರಯತ್ನ ಮಾಡಿದ್ರೆ ಸಿಗಬಹುದು ಎಂದರು.

ಈ ವೇಳೆ ಕಾಂಗ್ರೆಸ್ ಹಿರಿಯ ಮುಖಂಡ ಕೆ. ಚಂದ್ರಾರೆಡ್ಡಿ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೀತಿ ಹೊಸೂರು ಮುರಳಿ ಗೌಡ, ಮುಖಂಡರಾದ ಕೋಟೆ ನಾರಾಯಣಸ್ವಾಮಿ, ಸುರೇಶ್, ಲಾಲ್ ಬಹದ್ದೂರುಶಾಸ್ತ್ರಿ, ಗಂಗಮ್ಮ ಪಾಳ್ಯ ರಾಮಯ್ಯ, ಅ.ನಾ.ಹರೀಶ್, ಪ್ರಸಾದ್‌ಬಾಬು, ಜಯದೇವ್, ಎಲ್.ಎ.ಮಂಜುನಾಥ್ ಇದ್ದರು.