ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಭಾರತ ದೇಶ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ರೈತ ಬಾಂಧವರು ರಾಸಾಯನಿಕ ರಸಗೊಬ್ಬರ ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆಯು ಕಡಿಮೆಯಾಗುತ್ತಿದ್ದು, ಸಾವಯವ ಕೃಷಿಯತ್ತ ಹೆಚ್ಚಿನ ಒತ್ತು ನೀಡಬೇಕು ಎಂದು ಬಳ್ಳಾರಿ-ಹೊಸಪೇಟೆ ಹಾಲಕೇರೆಯ ಅನ್ನದಾನೇಶ್ವರ ಸಂಸ್ಥಾನ ಮಠದ ಜಗದ್ಗರು ಮುಪ್ಪಿನ ಬಸವಲಿಂಗ ಸ್ವಾಮೀಜಿ ನುಡಿದರು.ಸಮೀಪದ ಸೊಗಲದ ಪಂಚವಟಿ ಮಹಾಂತ ಶಿವಯೋಗೀಶ್ವರ ಕಲ್ಯಾಣ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಶತಮಾನದ ಶಿವಯೋಗಿ ಮಹಾನ ತಪಸ್ವಿ ಮಹಾಂತ ಶಿವಯೋಗಿಗಳವರ ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಮಹಾಂತ ಶಿವದ್ಯಾನ ಮಂದಿರದ ನೂತನ ಕಟ್ಟಡ ಉದ್ಘಾಟನೆ ಹಾಗೂ ವಿಶೇಷ ಸಮಾರಂಭದ ಪಾವನ ಸಾನ್ನಿಧ್ಯ ವಹಿಸಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯ ತನ್ನ ನಿತ್ಯ ಜೀವನದಲ್ಲಿ ಸಂತೋಷ ಕಾಣಬೇಕಾದರೇ ಇದ್ದದ್ದರಲ್ಲಿಯೇ ಸಂತೃಪ್ತಿ ಕಾಣಬೇಕು. ಮಹಾಂತ ಅಜ್ಜನಂತವರು ನಡೆದಾಡಿದ ಈ ಪಾವನ ಭೂಮಿಯಲ್ಲಿ ಪ್ರತಿಯೊಂದು ಮಣ್ಣಿನ ಅಗಾಧ ಶಕ್ತಿ ಇದೆ. ಇದು ಸಮೃದ್ಧ ನಾಡಾಗಿಸಲು ಶ್ರಮಿಸಬೇಕು ಎಂದರು.
ಮೈಸೂರು ದುರದುಂಡೇಶ್ವರ ಮಠದ ಬೇಬಿಗ್ರಾಮ ಚಂದ್ರವನ ಆಶ್ರಮದ ತ್ರೀನೇತ್ರ ಮಹಾಂತ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ಮನುಷ್ಯ ತನ್ನ ಸಂಕಷ್ಟದಿಂದ ಪಾರಾಗಲು ನಿತ್ಯ ಕಾಯಕದೊಂದಿಗೆ ಭಗವಂತನ ಸ್ಮರಣೆ ಮಾಡಿದಾಗ ಮಾತ್ರ ಜಂಜಾಟಗಳಿಂದ ಪಾರಾಗಿ ಸುಖಮಯ ಜೀವನ ನಡೆಸಲು ಸಾಧ್ಯವಾಗಲಿದೆ. ಈ ಪಂಚವಟಿವು ಸರ್ಕಾರದ ದೈವಿ ವನದ ಯೋಜನೆಯಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಪ್ರವಾಸಿ ತಾಣವನ್ನಾಗಿಸಲು ಸಚಿವರು ಗಮನ ಹರಿಸಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಸಮಾಜದ ಉದ್ದಾರಕ್ಕಾಗಿ ಸರ್ಕಾರದ ಕಾರ್ಯದಲ್ಲಿ ಸಮಾನಾಂತರವಾಗಿ ನಾಡಿನ ಮಠಾಧೀಶರು, ಮಠಗಳು ನಿಸ್ವಾರ್ಥತೆಯಿಂದ ನಿರಂತರವಾಗಿ ಶ್ರಮಿಸುತ್ತಿದ್ದು, ಅವರ ಪರಿಶ್ರಮಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ಪ್ರತಿಯೊಬ್ಬ ಮನುಷ್ಯ ತನ್ನ ಬದುಕಿನಲ್ಲಿ ಯಶಸ್ಸು ಕಾಣಬೇಕಾದರೆ ಭಕ್ತಿ, ಶ್ರದ್ಧೆ ನಡೆದುಕೊಂಡಾಗ ಮಾತ್ರ ಗುರುವಿನ ಕೃಪೆ ದೊರೆಯಲು ಸಾಧ್ಯವಾಗಲಿದೆ ಎಂದರು.
ಮುರಗೋಡ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.ಹೊಸೂರಿನ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಕಲಬುರ್ಗಿಯ ಹಿರೇಮಠದ ಸೂಗೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ಅರಳಿಕಟ್ಟಿಯ ತೋಂಟದಾರ್ಯ ಮಠದ ಶಿವಮೂರ್ತಿ ಸ್ವಾಮೀಜಿ, ಕಡಕೋಳದ ನಾಗಭೂಷನ ಸ್ವಾಮೀಜಿ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ಶಾಸಕ ಮಹಾಂತೇಶ ಕೌಜಲಗಿ ಮುಂತಾದವರು ಇದ್ದರು.
ಎಸ್.ಟಿ.ಪಟ್ಟಣಶೆಟ್ಟಿ, ಶಿವನಗೌಡ ಪಾಟೀಲ, ಮಲ್ಲನಗೌಡ ಗೌಡತಿ, ಉದಯ ದೇಸಾಯಿ, ರಾಜು ಆನಿಗೋಳ, ಬಸವರಾಜ ಹಿರೇಮಠ, ಶಂಕರಗೌಡ ಪಾಟೀಲ, ಶಿವಲಿಂಗಪ್ಪ ಅಂಗಡಿ, ಚಲನಚಿತ್ರ ನಿರ್ಮಾಪಕ ಉಮೇಶ ಹಿರೇಮಠ, ಮಡಿವಾಳಪ್ಪ ಪೂಜೇರಿ, ಮಹಾಂತೇಶ ಪೂಜೇರಿ, ಮಹಾಂತೇಶ ಹಿರೇಮಠ, ಶ್ರೀಶೈಲ ಕಲ್ಲಪ್ಪಗೋಳ, ರಾಜೇಶ್ವರಿ ಹಿರೇಮಠ, ಪಾರ್ವತಿ ಹುಲೆಪ್ಪನವರಮಠ, ಜಯಶ್ರೀ ಮಲ್ಲಯ್ಯನವರಮಠ, ಮಹಾಂತೇಶ ಕಾರಗಿ, ಶಿವಲೀಲಾ ಯರಗಟ್ಟಿಮಠ, ನಿರ್ಮಲಾ ಗೌಡತಿ, ಶಿಲ್ಪಾ ಕಾಲಗಾರ, ಪ್ರಶಾಂತ ರಗಟಿ, ಶಿವಾನಂದ ಕಾಜಗಾರ, ಮಲ್ಲಪ್ಪ ಕುರಬೇಟ, ಪ್ರಶಾಂತ ರಗಟಿ, ಪ್ರವೀಣ ಕಾಜಗಾರ ಮತ್ತು ಮಹಾಂತೇಶ್ವರ ಶಿಕ್ಷಣ ಸಮೀತಿಯ ಟ್ರಸ್ಟ್‌ನ ಸದಸ್ಯರು, ಸಿಬ್ಬಂದಿ ವರ್ಗ, ಸಾವಿರಾರು ಗ್ರಾಮಸ್ಥರು ಇದ್ದರು.ಬಿ.ಎನ್.ಬ್ಯಾಳಿ ಸ್ವಾಗತಿಸಿದರು. ತಾರೀಹಾಳ ಶ್ರೀಗಳು ನಿರೂಪಿಸಿದರು. ಸಂತೋಷ ಹಿರೇಮಠ ವಂದಿಸಿದರು. ಇದಕ್ಕೂ ಮುಂಚೆ ಶ್ರೀಗಳ ಸಾನ್ನಿಧ್ಯದಲ್ಲಿ ಮಹಾಂತ ಶ್ರೀಗಳ ಮೂರ್ತಿಗೆ ವಿಶೇಷ ಪೂಜೆ, ಪ್ರಾರ್ಥನೆ, ಸಹಸ್ರ ಮಂತ್ರ ಪಠಣ, ಹೋಮ ಹವನ, ಸಂಸ್ಕ್ರತ ವೈದಿಕ ಪಾಠಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಶಾಸ್ತ್ರೋಕ್ತ ವಿಧಿ ವಿಧಾನಗಳು ಸುಮಂಗಲಿಯರಿಂದ ಕುಂಭಮೇಳ ಜರುಗಿತು.