ಸಾರಾಂಶ
ಕನ್ನಡ ನಮ್ಮೆಲರ ಹೆಮ್ಮೆ. ಹಾಗಾಗಿ ಆಂಗ್ಲ ಭಾಷೆಗೆ ನೀಡಿದ್ದಕ್ಕಿಂತಲೂ ಸಹಾ ಹೆಚ್ಚಿನ ಆದ್ಯತೆಯನ್ನು ಮಾೃತಭಾಷೆಗೆ ನೀಡಿ.
ಕೊಳ್ಳೇಗಾಲ: ವಿದ್ಯಾರ್ಥಿಗಳು ಕನ್ನಡ ಭಾಷೆಗೆ ಹೆಚ್ಚಿನ ಮನ್ನಣೆ ನೀಡುವ ಮೂಲಕ ಹೆಚ್ಚಿನ ಗೌರವ ನೀಡಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ಅವರು ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಯೋಜಿಸಲಾಗಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್.ಸಿ.ಸಿ ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್, ಎನ್.ಎಸ್.ಎಸ್ ಹಾಗೂ ಇತರ ಘಟಕಗಳ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಕನ್ನಡ ನಮ್ಮೆಲರ ಹೆಮ್ಮೆ. ಹಾಗಾಗಿ ಆಂಗ್ಲ ಭಾಷೆಗೆ ನೀಡಿದ್ದಕ್ಕಿಂತಲೂ ಸಹಾ ಹೆಚ್ಚಿನ ಆದ್ಯತೆಯನ್ನು ಮಾೃತಭಾಷೆಗೆ ನೀಡಿ. ವಿದ್ಯೆ ಕಲಿಸಿದ ಗುರು ಹಿರಿಯರಿಗೆ ವಿಧೇಯರಾಗಿ, ವಿದ್ಯೆ ಕಲಿಸಲು ಕಾಲೇಜಿಗೆ ಕಳುಹಿಸಿ ನಿಮ್ಮ ಏಲ್ಗೆ ಬಯಸುವ ಪೋಷಕರಿಗೆ ಕೃತಜ್ಞರಾಗಿ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡಿಬೇಕು. ಪೈಪೋಟಿ ಯುಗದಲ್ಲಿ ಉದ್ಯೋಗ ಪಡೆಯುವುದು ಸುಲಭದ ಮಾತಲ್ಲ. ಈಹಿನ್ನೆಲೆ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸುವ ಮೂಲಕ ಉನ್ನತ ಹುದ್ದೆ ಅಲಂಕರಿಸಿ ಸಾಧಕರಾಗಿ ಹೊರಹೊಮ್ಮಿ ಎಂದರು.
ಈ ವೇಳೆ ಪ್ರಾಂಶುಪಾಲರಾದ ಜಯಲಕ್ಷ್ಮೀ, ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷರು ಸುರೇಶ್, ನಗರಸಭೆ ಸದಸ್ಯೆ ಸುಮ ಸುಬ್ಬಣ್ಣ ಇನ್ನಿತರಿದ್ದರು.----
18ಕೆಜಿಎಲ್6ಕೊಳ್ಳೇಗಾಲದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಯೋಜಿಸಲಾಗಿದ್ದ ಸಾಂಸ್ಕೃತಿಕ ಕ್ರೀಡೆ, ಎನ್.ಸಿ.ಸಿ ಸ್ಕೌಟ್ಸ್ ಹಾಗೂ ವಿವಿಧ ಘಟಕಗಳ ಸಮಾರೋಪ ಸಮಾರಂಭಕ್ಕೆ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು.
----