ಸಾರಾಂಶ
ದಸರಾ ಮೆರಣಿಗೆಯಲ್ಲಿ ಇಲಾಖಾವಾರು ತಪ್ಪದೆ ಸ್ತಬ್ಧ ಚಿತ್ರಗಳನ್ನ ತಯಾರಿಸಿ, ಮೆರಣಿಗೆಯಲ್ಲಿ ಪಾಲ್ಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ದಸರಾ ವೇದಿಕೆ ಬಳಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸ್ಟಾಲ್‌ಗಳ ನಿರ್ಮಾಣಮಾಡಿ, ಅದರಲ್ಲಿ ಸ್ತ್ರೀ ಶಕ್ತಿ ಸಂಘ, ಹೊರ ಜಿಲ್ಲೆ ಯವರಿಗೆ ಹಾಗೂ ಇಲಾಖೆಗಳಿಗೆ ಎಷ್ಟು ಸ್ಟಾಲ್‌ಗಳನ್ನು ನೀಡಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ದಸರಾದಲ್ಲಿ ರೈತ ಹಾಗೂ ಮಹಿಳಾ ದಸರಾ ಆಚರಣೆ ಹೆಚ್ಚು ಒತ್ತು ನೀಡುವಂತೆ ಸೆಸ್ಕ್ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಶ್ರೀರಂಗಪಟ್ಟಣ ದಸರಾ ಅಂಗವಾಗಿ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದಸರಾ ಆಚರಣೆಯಲ್ಲಿ ಮಹಿಳಾ ದಸರಾ ಹಾಗೂ ರೈತ ದಸರಾ ಆಚರಣೆಗೆ ಹೆಚ್ಚು ಒತ್ತು ನೀಡಿ ರೈತರಿಗೆ ಹೆಚ್ಚು ಉತ್ತೇಜನ ನೀಡುವ ಸಲುವಾಗಿ ಅಚ್ಚುಕಟ್ಟಾಗಿ ಹಾಲು ಕರೆಯುವ ಸ್ಪರ್ಧೆ ಹಾಗೂ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಬೇಕು ಎಂದರು.
ದಸರಾ ಮೆರಣಿಗೆಯಲ್ಲಿ ಇಲಾಖಾವಾರು ತಪ್ಪದೆ ಸ್ತಬ್ಧ ಚಿತ್ರಗಳನ್ನ ತಯಾರಿಸಿ, ಮೆರಣಿಗೆಯಲ್ಲಿ ಪಾಲ್ಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ದಸರಾ ವೇದಿಕೆ ಬಳಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸ್ಟಾಲ್‌ಗಳ ನಿರ್ಮಾಣಮಾಡಿ, ಅದರಲ್ಲಿ ಸ್ತ್ರೀ ಶಕ್ತಿ ಸಂಘ, ಹೊರ ಜಿಲ್ಲೆ ಯವರಿಗೆ ಹಾಗೂ ಇಲಾಖೆಗಳಿಗೆ ಎಷ್ಟು ಸ್ಟಾಲ್‌ಗಳನ್ನು ನೀಡಬೇಕು ಎಂಬುದರ ಬಗ್ಗೆ ಚರ್ಚಿಸಿದರು.ತೋಟಗಾರಿಕಗೆ ಇಲಾಖೆಯಿಂದ ದಸರಾ ಬನ್ನಿ ಮಂಟಪ ಹಾಗೂ ವೇದಿಕೆಯನ್ನ ಹೂಗಳಿಂದ ಅಲಂಕಾರ, ಸೆಸ್ಕ್ ಇಲಾಖೆಯಿಂದ ವಿದ್ಯುತ್ ದೀಪ ಅಲಂಕಾರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿಭಾಹಿಸುವಂತೆ, ಅಂಬಾರಿ ಹೊರಲು ಆಗಮಿಸುವ ಆನೆಗಳ ಸಂಪೂರ್ಣ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಹಾಗೂ ಪಟ್ಟಣವನ್ನು ಸಂಪೂರ್ಣ ಸ್ವಚ್ಛವಾಗಿಡುವಂತೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಯೋಜನಾ ನಿರ್ದೇಶಕ ಮಹೇಶ್ವರಪ್ಪ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಕಂದಾಯ ನಿರೀಕ್ಷಕ ರೇವಣ್ಣ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.