ಸಾರಾಂಶ
ಕನ್ನಡಪ್ರಭ ವಾರ್ತೆ ಬೆಟ್ಟದಪುರಅಡವಿಟ್ಟು ಚಿನ್ನವನ್ನು ನೀಡುವಂತೆ ಗ್ರಾಮದಲ್ಲಿ ರೈತ ಸಂಘದ ಸದಸ್ಯರು ಕೆನರಾ ಬ್ಯಾಂಕಿನ ಮುಂದೆ ಪ್ರತಿಭಟಿಸಿದರು.ಗ್ರಾಮದ ಕೆನರಾ ಬ್ಯಾಂಕ್ ನಲ್ಲಿ ಸಮೀಪದ ಒಡೆಯರ ಹೊಸಳ್ಳಿ ಗ್ರಾಮದ ರೈತ ದಶರಥ ಎಂಬವರು 20 ಗ್ರಾಂ ಚಿನ್ನವನ್ನು ಬೆಟ್ಟದಪುರದ ಕೆನರಾ ಬ್ಯಾಂಕ್ ನಲ್ಲಿ ಅಡವಿಟ್ಟಿದ್ದರು. ಬ್ಯಾಂಕಿನವರು ನೋಟೀಸ್ ನೀಡಿ ನಿಮ್ಮ ಚಿನ್ನವನ್ನು ಬಿಡಿಸಿಕೊಳ್ಳಿ, ಇಲ್ಲವೆಂದರೆ ಹರಾಜು ಮಾಡುವುದಾಗಿ. ನೋಟಿಸ್ ನೀಡಿದರು.ಅದರಂತೆ ಬುಧವಾರ ಚಿನ್ನ ಬಿಡಿಸಲು ಬಂದ ರೈತನಿಗೆ ಕೆನರಾ ಬ್ಯಾಂಕಿನ ಸಿಬ್ಬಂದಿ ನೀವು ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದು, ಅಲ್ಲಿ ಸುಸ್ತಿಯಾಗಿದ್ದೀರಿ, ಆದ್ದರಿಂದ ನಿಮ್ಮ ಚಿನ್ನವನ್ನು ಬಿಡಿಸಿಕೊಳ್ಳಲು ಆಗುವುದಿಲ್ಲ ಎಂದು ತಿಳಿಸಿದರು. ಇದರಿಂದ ರೈತ ಸಂಘದ ಕಾರ್ಯಕರ್ತರು, ರೈತ ತನ್ನ ಜಮೀನನ್ನು ಅಡವಿಟ್ಟು ಸಾಲ ತೆಗೆದುಕೊಂಡಿದ್ದಾನೆ, ಅದನ್ನು ಕಾನೂನು ಪ್ರಕಾರ ಹರಾಜು ಮಾಡಿ ನಾವು ಬೆಟ್ಟದಪುರದ ಕೆನರಾ ಬ್ಯಾಂಕ್ ನಲ್ಲಿ ಇಟ್ಟಿರುವ ಚಿನ್ನವನ್ನು ನಮಗೆ ನೀಡುವಂತೆ ರೈತ ಸಂಘದ ಕಾರ್ಯಕರ್ತರು ಮನವಿ ಮಾಡಿದರು. ಇದಕ್ಕೆ ವ್ಯವಸ್ಥಾಪಕರು ಒಪ್ಪದೆ ಇದ್ದಾಗ ರೈತ ಸಂಘದವರು ಪ್ರತಿಭಟನೆ ಮಾಡಿ ಚಿನ್ನ ಕೊಡುವಂತೆ ಆಗ್ರಹಿಸಿದರು.
ರೈತ ಸಂಘದ ಅಧ್ಯಕ್ಷ ಸ್ವಾಮಿಗೌಡ, ಆನಂದ್, ಮಾಜಿ ಅಧ್ಯಕ್ಷ ಪ್ರಕಾಶ್ ರಾಜೆ ಅರಸ್, ಬಿ.ಜೆ. ದೇವರಾಜ್, ಗುರುರಾಜ, ದಶರಥ, ಶಿವರಾಜ್, ಮಲ್ಲೇಶ್, ಹರೀಶ್ ರಾಜೆ ಅರಸ್, ಲೋಕೇಶ್,ಳ್ಳಿ ಗ್ರಾಮದ ರೈತ ಸ್ವಾಮಿ ಇದ್ದರು.