ಸರ್ವೇ.ನಂ. ೧ ಮತ್ತು ಸರ್ವೇ ೪ರ ಭೂಮಿಯನ್ನು ಇತ್ತೀಚೆಗೆ ಕಂದಾಯ ಮತ್ತು ಸರ್ವೇ ಇಲಾಖೆ ಸರ್ವೇ ಮಾಡಿದ್ದು ಇದು ಗ್ರಾಮಠಾಣಾ ಹಾಗೂ ಖಳಾವಾಡಿ ಎಂದು ತಿಳಿದು ಬಂದಿದೆ. ಇಲ್ಲಿ ಹಲವು ವರ್ಷಗಳಿಂದ ರೈತರು ಭತ್ತದ ಮೇವಿನ ಬಣವೆ ಹಾಕಿ ಜಾನುವಾರು ಕಟ್ಟುತ್ತಿದ್ದಾರೆ.

ಕಾರಟಗಿ:

ಪಟ್ಟಣದ ಸರ್ವೇ ನಂ. ೧ರಲ್ಲಿ ರೈತರಿಗೆ ಭತ್ತದ ಮೇವಿನ ಬಣವೆ ಮತ್ತು ಜಾನುವಾರು ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ರೈತ ಬಣದ ನೇತೃತ್ವದಲ್ಲಿ ಪಟ್ಟಣದ ವಾರ್ಡ್‌ ೧, ೨, ೩, ೪ರ ರೈತರು ತಹಸೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ಅಧ್ಯಕ್ಷ ನಾರಾಯಣ ಈಡಿಗೇರ ಮಾತನಾಡಿ, ಸರ್ವೇ.ನಂ. ೧ ಮತ್ತು ಸರ್ವೇ ೪ರ ಭೂಮಿಯನ್ನು ಇತ್ತೀಚೆಗೆ ಕಂದಾಯ ಮತ್ತು ಸರ್ವೇ ಇಲಾಖೆ ಸರ್ವೇ ಮಾಡಿದ್ದು ಇದು ಗ್ರಾಮಠಾಣಾ ಹಾಗೂ ಖಳಾವಾಡಿ ಎಂದು ತಿಳಿದು ಬಂದಿದೆ. ಇಲ್ಲಿ ಹಲವು ವರ್ಷಗಳಿಂದ ರೈತರು ಭತ್ತದ ಮೇವಿನ ಬಣವೆ ಹಾಕಿ ಜಾನುವಾರು ಕಟ್ಟುತ್ತಿದ್ದಾರೆ. ಈ ಸ್ಥಳದಿಂದ ತೆರವುಗೊಳಿಸಿದರೆ ಬೇರೆಡೆ ನಮಗೆ ಸ್ಥಳಾವಕಾಶವಿಲ್ಲ. ಆದರಿಂದ ಈ ಸರ್ವೇ ನಂಬರ್‌ಗಳಲ್ಲಿ ಮೇವಿನ ಬಣವೆ, ಜಾನುವಾರು ಕಟ್ಟಲು ಅವಕಾಶ ನೀಡಬೇಕು. ಇದರಿಂದ 40ಕ್ಕೂ ಅಧಿಕ ರೈತರಿಗೆ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.

ನಂತರ ತಹಸೀಲ್ದಾರ್‌ಗೆ ಬರೆದ ಮನವಿಯನ್ನು ಗ್ರೇಡ್‌-೨ ತಹಸೀಲ್ದಾರ್‌ ಷಣ್ಮುಖಪ್ಪ ಅವಿಗೆ ಸಲ್ಲಿಸಲಾಯಿತು. ಈ ವೇಳೆ ಆಶೋಕ ಈಡಿಗೇರ, ಭೀಮಣ್ಣ ದಾಸರ, ಬಾಳಪ್ಪ ಪರಕಿ, ರವಿಕುಮಾರ ನಾಯಕ, ಶರಣಪ್ಪ ಕುರುಬರ, ಭೀಮಣ್ಣ ಡಂಕನಕಲ್, ದೇವದಾಸ ದಾಸರ, ನಾಗರಾಜ, ದ್ಯಾವಮ್ಮ ಡಂಕನಕಲ್, ಭೀಮಮ್ಮ ದಾಸರ, ಶಾಂತಮ್ಮ ದಾಸರ, ದೇವರಾಜ ಕುರಿ, ದೇವೇಂದ್ರಪ್ಪ ಕುರುಬರ, ಕೃಷ್ಣ ಭಜಂತ್ರಿ, ದುರುಗಪ್ಪ ನಾಯಕ, ಹುಸೇನ್ ಸಾಬ್, ಶರಣಪ್ಪ ಮುಳ್ಳೂರ, ಬಾಷಾಸಾಬ್ ಬಂಡಿ, ರಾಘವೇಂದ್ರ ಬಡಿಗೇರ, ಪಾಂಡು ದಾಸರ, ಶಿವಾನಂದ ನಾಡಿಗೇರ, ಅಯ್ಯಪ್ಪ ಚಲವಾದಿ, ಪರಸಪ್ಪ ಹೊಳಿಕಡೆ, ಮುದಿಯಪ್ಪ ಚಲವಾದಿ, ಬಂಡೆಪ್ಪ ಸಜ್ಜಿಹೊಲ, ದ್ಯಾವಪ್ಪ ಸೇರಿದಂತೆ ಮತ್ತಿತರರು ಇದ್ದರು.