ವೈಯಕ್ತಿಕ ಸಾಲವನ್ನು ಅರ್ಹರಿಗೆ ನೀಡಿ

| Published : Jul 19 2024, 01:03 AM IST

ಸಾರಾಂಶ

ಸಹಕಾರಿ ತಳಹದಿಯ ಮೇಲೆ ಹುಟ್ಟಿರುವ ಸಹಕಾರಿ ಸಂಘಗಳು ಬೆಳೆಯಬೇಕಾದರೇ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯವರಿಗೆ ತರಬೇತಿ ಅವಶ್ಯವಿದೆ ಎಂದು ಬಾಗಲಕೋಟೆ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ/ಸಹಕಾರಿಗಳ ಸಹಕಾರ ಒಕ್ಕೂಟದ ಅಧ್ಯಕ್ಷ ಮುಚಖಂಡಯ್ಯ ಹಂಗರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಸಹಕಾರಿ ತಳಹದಿಯ ಮೇಲೆ ಹುಟ್ಟಿರುವ ಸಹಕಾರಿ ಸಂಘಗಳು ಬೆಳೆಯಬೇಕಾದರೇ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯವರಿಗೆ ತರಬೇತಿ ಅವಶ್ಯವಿದೆ ಎಂದು ಬಾಗಲಕೋಟೆ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ/ಸಹಕಾರಿಗಳ ಸಹಕಾರ ಒಕ್ಕೂಟದ ಅಧ್ಯಕ್ಷ ಮುಚಖಂಡಯ್ಯ ಹಂಗರಗಿ ಹೇಳಿದರು.

ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಸೊಸೈಟಿಯ ಸಭಾಭವನದಲ್ಲಿ ಮೂಡಲಗಿ ನಗರ ಸಹಕಾರ ಸಂಘಗಳ ಒಕ್ಕೂಟ ಮತ್ತು ಬಾಗಲಕೋಟೆ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ/ಸಹಕಾರಿಗಳ ಸಹಕಾರ ಒಕ್ಕೂಟದ ಆಶ್ರಯದಲ್ಲಿ ನಡೆದ ಮೂಡಲಗಿ ತಾಲೂಕಿನ ಎಲ್ಲ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಮತ್ತು ಮಾರಾಟಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಸಹಕಾರಿ ಸಂಘದವರು ವೈಯಕ್ತಿಕ ಸಾಲ ನೀಡುವಾಗ ಸರಿಯಾಗಿ ಯೋಚಿಸಿ ಸಾಲ ನೀಡಬೇಕು, ಸಹಕಾರಿ ಸಂಘಗಳಲ್ಲಿ ಸಾಲ ಪಡೆದು ಸರಿಯಾಗಿ ಉಪಯೋಗ ಮಾಡಿಕೊಳ್ಳುವವರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು.ಬಾಗಲಕೋಟೆ ಒಕ್ಕೂಟದ ನಿರ್ದೇಶಕ ನಿಂಗಪ್ಪ ಕಡಪಟ್ಟಿ ಮಾತನಾಡಿ, ಆಸಕ್ತಿಯಿಂದ ಕಟ್ಟಿದ ಸಂಸ್ಥೆಗಳು ಪ್ರಗತಿ ಸಾಧಿಸಬೇಕು. ಇಂದು ಸಹಕಾರಿ ಸಂಸ್ಥೆಗಳು ನಡೆಸುವುದು ಬಹಳ ಕಷ್ಟವಾಗಿದೆ. ಮೂಡಲಗಿ ಪಟ್ಟಣದಲ್ಲಿಯೇ ಸುಮಾರು 70 ಸಹಕಾರಿ ಸಂಸ್ಥೆಗಳಿದ್ದು, ಪ್ರಗತಿ ಪತಥದತ್ತ ಸಾಗುತ್ತಿರುವುದು ಶ್ಲಾಘನಿಯ. ಸಾಲ ನೀಡಿಕೆಯಲ್ಲಿ ಸಂಸ್ಥೆಗಳ ಪ್ರಧಾನ ವ್ಯವಸ್ಥಾಪಕ ಕಾರ್ಯ ಬಹಳ ಮುಖ್ಯವಾದರೆ, ಆಡಳಿ ಮಂಡಳಿಯ ಸಹಕಾರವೂ ಪ್ರಮುಖವಾಗಿರುತ್ತದೆ. ಒಳ್ಳೆಯ ವ್ಯಕ್ತಿಗಳಿಗೆ ಸಾಲ ನೀಡಿದರೇ ಮುಂದೆ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಕಿವಿಮಾತು ಹೇಳಿದರು.ಗೋಕಾಕದ ಲೆಕ್ಕಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿ, ಸಹಕಾರಿ ಸಂಸ್ಥೆಗಳನ್ನು ಪ್ರಗತಿ ಪತದತ್ತ ಕೊಂಡಯ್ಯಬೇಕಾದರೇ ಎಲ್ಲ ಸಹಕಾರಿಗಳು ಒಗಟ್ಟಿನಿಂದ ಭಯ ಮುಕ್ತವಾಗಿ ಸಂಸ್ಥೆಗಳನ್ನು ನಡೆಸಬೇಕು ಎಂದು ತಿಳಿಸಿದರು.ಕುರುಹಿನಶೆಟ್ಟಿ ಸೊಸೈಟಿ ಅಧ್ಯಕ್ಷ ಬಸವಣ್ಣಿ ಮುಗಳಖೋಡ ಮಾತನಾಡಿ, ಸಹಕಾರಿ ಸಂಸ್ಥೆಗಳು ಪೈಪೋಟಿ ಮಾಡದೆ ಸಾಲ ನೀಡುವಲ್ಲಿ ಹಿರಿಯರ ಸಲಹೆ ಸಹಕಾರ ಪಡೆದುಕೊಳುವುದು ಅಗತ್ಯ ಎಂದರು.ಕ.ರಾಸ.ಪ.ಸಂ ಮಹಾಮಮಂಡಳ ನಿರ್ದೇಶಕ ತಮ್ಮಣ್ಣ ಕೆಂಚರಡ್ಡಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ವರ್ಧಮಾನ ಬೋಳಿ, ಬಾಗಲಕೋಟೆ ಒಕ್ಕೂಟದ ಉಪಾಧ್ಯಕ್ಷ ಸಿದ್ದಪ್ಪ ಹಲಕಾಟಿ, ನಿರ್ದೇಶಕರಾದ ಭೀಮಶಿ ಕದಂ, ನಿಂಗಪ್ಪ ಗೋಡಿ, ಭರತೇಶ ಮೂಕನ್ನವರ, ಶಿವಪ್ಪ ಅವಟಿ ಇದ್ದರು.ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ವಸೂಲಾಧಿಕಾರಿ ಎಸ್.ಆರ್.ಬಟಕುರ್ಕಿ ಅವರು ಸಹಕಾರಿ ಸಂಘಗಳಲ್ಲಿ ಗುಣಾತ್ಮಕ ಸಾಲ ನೀಡಿಕೆ ಹಾಗೂ ಸಾಲ ವಸೂಲಾತಿ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ಚೈತನ್ಯ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಬಿಚಗುಪ್ಪಿ ನಿರೂಪಿಸಿದರು, ಕುರುಹಿನಶೆಟ್ಟಿ ಸೊಸೈಟಿ ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೂಡಿ ಸ್ವಾಗತಿಸಿದರು. ಮಹಾಲಕ್ಷ್ಮೀ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಸಿ.ಬಿ.ಬಗನಾಳ ವಂದಿಸಿದರು. ಕಾರ್ಯಗಾರದಲ್ಲಿ ಮೂಡಲಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಸಹಕಾರಿ ಸಂಸ್ಥೆಗಳ ವ್ಯವಸ್ಥಾಪಕರು, ಮಾರಾಟಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಭಾಗವಹಿಸಿದ್ದರು.