ವಿಶೇಷಚೇತನರಿಗೆ ಅನುಕಂಪದ ಬದಲು ಅವಕಾಶ ನೀಡಿ

| Published : Oct 05 2024, 01:32 AM IST / Updated: Oct 05 2024, 01:33 AM IST

ವಿಶೇಷಚೇತನರಿಗೆ ಅನುಕಂಪದ ಬದಲು ಅವಕಾಶ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ವಿಶೇಷಚೇತನರು ಕೀಳರಿಮೆ ತೊರೆದು ತಮ್ಮಿಂದಾಗುವ ಕೆಲಸವನ್ನು ಆಯ್ಕೆ ಮಾಡಿಕೊಂಡು ಸ್ವಾವಲಂಬನೆ ಬದುಕು ನಡೆಸಬೇಕು ಎಂದು ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಜನರಲ್‌ ಮ್ಯಾನೇಜರ್ ನಾಗರಾಜ್ ಹೇಳಿದರು.

ರಾಮನಗರ: ವಿಶೇಷಚೇತನರು ಕೀಳರಿಮೆ ತೊರೆದು ತಮ್ಮಿಂದಾಗುವ ಕೆಲಸವನ್ನು ಆಯ್ಕೆ ಮಾಡಿಕೊಂಡು ಸ್ವಾವಲಂಬನೆ ಬದುಕು ನಡೆಸಬೇಕು ಎಂದು ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಜನರಲ್‌ ಮ್ಯಾನೇಜರ್ ನಾಗರಾಜ್ ಹೇಳಿದರು.ನಗರದ ಗುರುಭವನದಲ್ಲಿ ನವಚೇತನ ಚಾರಿಟೆಬಲ್ ಟ್ರಸ್ಟ್ ಹಾಗೂ ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಪ್ರೈ. ಲಿ. ಸಹಯೋಗದಲ್ಲಿ ವಿಶೇಷಚೇತನರಿಗೆ ಉಚಿತ ಹೊಲಿಗೆಯಂತ್ರ ವಿತರಿಸಿ ಮಾತನಾಡಿದರು.ವಿಶೇಷಚೇತನರಿಗೆ ಅನುಕಂಪದ ಬದಲಾಗಿ ಹೆಚ್ಚು ಅವಕಾಶಗಳನ್ನು ಒದಗಿಸಿದರೆ ಅವರೂ ಸಾಮಾನ್ಯರಂತೆ ಬೆಳೆಯುತ್ತಾರೆ. ಸಮಾಜದ ಮುಖ್ಯವಾಹಿನಿಗೆ ಬಂದು ದೇಶದ ಪ್ರಗತಿಗೆ ಪೂರಕವಾಗುತ್ತಾರೆ. ನೀವುಗಳು ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಬೇಕು ಎಂದು ತಿಳಿಸಿದರು.ಸಿಎಸ್‌ಆರ್‌ನಿಂದ ಬೇರೆ ಬೇರೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುತ್ತೇವೆ. ಮಂಜುನಾಥ್ ವಿಶೇಷಚೇತನರಿಗಾಗಿ ಏನಾದರೂ ಸಹಾಯ ಮಾಡಬಹುದಾ ಎಂದು ಕೇಳಿಕೊಂಡರು. ಈ ಮೊದಲು ವ್ಹೀಲ್‌ಚೇರ್ ನೀಡಿದ್ದೇವು. ಈ ಬಾರಿ ಹೊಲಿಗೆಯಂತ್ರ ವಿತರಣೆ ಮಾಡಿದ್ದೇವೆ ಎಂದರು.ನವ ಚೇತನ ಚಾರಿಟೆಬಲ್ ಟ್ರಸ್ಟ್ ಫಾರ್ ಡಿಸೆಬಲ್ಡ್ ಅಧ್ಯಕ್ಷ ಕೆ.ಎಸ್ .ಮಂಜುನಾಥ್ ಮಾತನಾಡಿ, ವಿಶೇಷಚೇತನರಿಗೆ ಉದ್ಯೋಗ ಸಿಗುವುದು ತುಂಬಾ ಕಷ್ಟ. ಇನ್ನು ಸ್ವಾವಲಂಬಿ ಜೀವನ ನಡೆಸುವುದು ಸವಾಲಿನ ಕೆಲಸ. ಇಂತಹ ಸನ್ನಿವೇಶದಲ್ಲಿ ಟೊಯೋಟಾ ಕಂಪನಿ ವಿಶೇಷಚೇತನರ ನೆರವಿಗೆ ಬಂದಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಪ್ರೈ. ಲಿ. ಮೊದಲು ವಿಶೇಷಚೇತನರಿಗೆ 9 ಹೊಲಿಗೆಯಂತ್ರ ನೀಡಿದ್ದರು. ಆನಂತರ 18,600 ಪುಸ್ತಕ ವಿತರಿಸಿದ್ದರು. ಈಗ ಶ್ರವಣದೋಷಉಳ್ಳ ಸಾಧಕರಿಗೆ 20 ಹೊಲಿಗೆಯಂತ್ರ ನೀಡಿದ್ದಾರೆ ಎಂದು ಹೇಳಿದರು.ಹೃದಯ ತಜ್ಞ ಡಾ.ಸಾತ್ವಿಕ್ ಸಿ.ಮಂಜುನಾಥ್ ಮಾತನಾಡಿ, ವಿಶೇಷಚೇತನರೂ ಸಾಮಾನ್ಯರಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಭಾಗಿಯಾಗಿ ಸಾಧಿಸಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ ಎಂದು ಹೇಳಿದರು.ವಿಶೇಷಚೇತನ ಮಕ್ಕಳು ತಮಗೆ ಸಿಕ್ಕ ಶಿಕ್ಷಣ, ಪ್ರೋತ್ಸಾಹ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ತಮ್ಮ ಕಾಲ ಮೇಲೆ ನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಬಹಮಂದಿ ಒಂದಿಲ್ಲೊಂದು ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡುತ್ತಿರುವುದು ನಾವೆಲ್ಲರು ಹೆಮ್ಮೆ ಪಡುವಂತಾಗಿದೆ ಎಂದರು.ರೋಟರಿ ಅಧ್ಯಕ್ಷ ಶಿವಣ್ಣ ಮಾತನಾಡಿ, ವಿಶೇಷಚೇತನರಿಗೆ ದೇವರು ಸಹಕಾರ ನೀಡುತ್ತಾನೊ ಇಲ್ಲವೊ ಗೊತ್ತಿಲ್ಲ. ಆದರೆ, ಟೊಯೋಟಾ ಸಂಸ್ಥೆ ಸಹಕಾರದಲ್ಲಿ ನವ ಚೇತನ ಸಂಸ್ಥೆ ವಿಶೇಷಚೇತನರು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಪರಿಕರ ನೀಡುತ್ತಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.20 ಮಂದಿ ಫಲಾನುಭವಿಗಳಿಗೆ ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಜನರಲ್ ಮ್ಯಾನೇಜರ್ ನಾಗರಾಜ್ ಹೊಲಿಗೆಯಂತ್ರ ವಿತರಿಸಿದರು. ಸಮಾಜ ಸೇವಕ ಸುಜ್ಞಾನ ಮೂರ್ತಿ , ಸಿ.ಎಸ್.ಆರ್ ಮ್ಯಾನೇಜರ್ ರೋಹಿತ್ ಸ್ವಾಮಿ, ಸುಶ್ಮಿತಾ , ಪಾಯಲ್ , ಪರಿಸರ ಪ್ರೇಮಿ ರಾಜೇಂದ್ರ , ಅನಿಲ್, ಜೆಡಿಎಸ್ ಮುಖಂಡ ಯೋಗೇಶ್, ರಘು, ರೈತ ಮುಖಂಡರಾದ ತಿಮ್ಮಯ್ಯ, ಪುಟ್ಟಸ್ವಾಮಿ , ಎಲ್.ವಿ.ಟ್ರಾವೆಲರ್ಸ್‌‌ ಮಾಲೀಕರಾದ ಪರಮಶಿವಯ್ಯ, ಹರ್ಷ ಉಪಸ್ಥಿತರಿದ್ದರು.