ಪಿಎಸ್ಐ ಪರಶುರಾಮ ಸಾವಿಗೆ ಸೂಕ್ತ ನ್ಯಾಯ ಕಲ್ಪಿಸಿ

| Published : Aug 08 2024, 01:39 AM IST

ಸಾರಾಂಶ

ಹುಣಸಗಿಯಲ್ಲಿ ಸೋಮವಾರ ದಲಿತ ಪರ ಸಾಮೂಹಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹುಣಸಗಿ

ಯಾದಗಿರಿ ನಗರ ಪಿಎಸ್‌ಐ ಪರಶುರಾಮ ಅವರ ಅನುಮಾನಾಸ್ಪದ ಸಾವಿಗೆ ಯಾದಗಿರಿ ಶಾಸಕ ಚೆನ್ನಾರಡ್ಡಿ ತುನ್ನೂರು ಹಾಗೂ ಪುತ್ರ ಪಂಪನಗೌಡ ಪ್ರಮುಖ ಕಾರಣರಾಗಿದ್ದು, ಕೂಡಲೇ ಚೆನ್ನಾರೆಡ್ಡಿ ಅವರಿಂದ ರಾಜೀನಾಮೆ ಪಡೆದುಕೊಂಡು, ಪುತ್ರನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪಿಎಸ್‌ಐ ಪರಶುರಾಮ ಅವರ ಪತ್ನಿಗೆ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಒತ್ತಾಯಿಸಿ ಸೋಮವಾರ ಹುಣಸಗಿಯಲ್ಲಿ ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ರಸ್ತೆತಡೆ ಪ್ರತಿಭಟನೆ ನಡೆಸಲಾಯಿತು.

ಹಿರಿಯ ಮುಖಂಡ ಶಿವಪ್ಪ ಸದಬ, ವೀರೇಶ ಗುಳಬಾಳ, ನಾಗರಾಜ್ ಕೊಡೇಕಲ್, ಭೀಮಣ್ಣ ಹೆಬ್ಬಾಳ, ಮೆಹಬೂಬ್‌ ಸಾಬ್ ಮಾತನಾಡಿ, ಇತ್ತೀಚೆಗೆ ಯಾದಗಿರಿ ಜಿಲ್ಲೆಯಲ್ಲಿ ಲಂಚದ ಹಾವಳಿ ಅತಿಯಾಗಿದ್ದು ಪ್ರಾಮಾಣಿಕರು ಬದುಕು ನಡೆಸದಂಥ ದುಸ್ಥಿತಿ ನಿರ್ಮಾವಾಗುತ್ತಿದೆ. ಪಿಎಸ್‌ಐ ಅವರಿಗೆ ವರ್ಗಾವಣೆಗಾಗಿ ಭಾರಿ ಮೊತ್ತದ ಲಂಚದ ಹಣ ಬೇಡಿಕೆ ಇಟ್ಟು ಮಾನಸಿಕವಾಗಿ ತೀವ್ರ ಹಿಂಸೆ ನೀಡಿರುವುದೇ ಅವರ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ ರಕ್ಷಣೆ ನೀಡುವ ಪೊಲೀಸ್ ಇಲಾಖೆಯವರಿಗೆನೆ ರಕ್ಷಣೆ ಇಲ್ಲದಿರುವುದು ನಿಜಕ್ಕೂ ಖಂಡನೀಯ. ರಾಜ್ಯದಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ಎಚ್ಚರ ವಹಿಸಿ ಅಗತ್ಯ ವಾತಾವರಣ ನಿರ್ಮಿಸಬೇಕು ಎಂದು ಕಂದಾಯ ಇಲಾಖೆಯ ವೆಂಕಟೇಶ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ನಾನಾ ದಲಿತ ಪರ ಸಂಘಟನೆಗಳ ಮುಖಂಡರಾದ ಬಸವರಾಜ್ ಹಗರಟಗಿ, ಶರಣಪ್ಪ ಗುಳಬಾಳ, ವೀರೇಶ ಗುಳಬಾಳ, ಜುಮ್ಮಣ್ಣ ಬಲಶೆಟ್ಟಿಹಾಳ, ಮೆಹಬೂಬ್‌ ಹಂದ್ರಾಳ, ನಂದಪ್ಪ ಪೀರಾಪುರ, ಪೀರಪ್ಪ ಕಟ್ಟಿಮನಿ, ಮಂಜುನಾಥ ಹುಣಸಗಿ, ಯಮನಪ್ಪ ಚನ್ನೂರ, ಬಸವರಾಜ ಚನ್ನೂರ, ಸಿದ್ದು ಬಾವಿಮನಿ, ಸಿದ್ಧು ಕಟ್ಟಿಮನಿ, ಭೀಮಣ್ಣ ಕಚನಕನೂರ, ರವಿ ಗ್ಯಾಂಗಮನ್, ಮಾನಪ್ಪ ಹಾದಿಮನಿ, ಪ್ರಕಾಶ ಆನೇಕ್ಕಿ, ತಾಯಪ್ಪ ಕಟ್ಟಿಮನಿ, ಜೆಟ್ಟೆಪ್ಪ ಕಚಕನೂರ, ವಿಶ್ವನಾಥ ಬಡಿಗೇರ, ಸಿದ್ಧು ಮಾಳನೂರ, ಆಶೀಮ್ ಪಟೇಲ್, ಬಂದು ಯಾತನೂರ, ಸೇರಿದಂತೆ ಇದ್ದರು.