ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ

| Published : Feb 22 2024, 01:45 AM IST

ಸಾರಾಂಶ

ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು. ಅಂದಾಗ ಮಾತ್ರ ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಿಲ್ಲಾ ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಶೇಲ್ಲಿಕೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು. ಅಂದಾಗ ಮಾತ್ರ ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಿಲ್ಲಾ ಘಟಕದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶಿವಾನಂದ ಶೇಲ್ಲಿಕೇರಿ ಹೇಳಿದರು.

ಪಟ್ಟಣದ ಉದಪುಡಿ ಫೌಂಡೇಶನ್‌ ಅಕ್ಷರ ಅಡಾಡೆಮಿ ಶಾಲೆಯಲ್ಲಿ ಅಕ್ಷರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಹಿಂದುಳಿವಿಕೆಯಲ್ಲಿ ಶಿಕ್ಷಣದ ಕೊರತೆ ಪ್ರಮುಖ ಕಾರಣ. ಹೀಗಾಗಿ ಪಾಲಕರು ಮಕ್ಕಳನ್ನು ತಮ್ಮ ಸಂಕಷ್ಟ ನಿವಾರಣೆಗೆ ಬಳಸಿಕೊಳ್ಳದೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ರಾಷ್ಟ್ರದ ಸಂಪತ್‌ನ್ನಾಗಿ ಪರಿವರ್ತಿಸಬೇಕು ಎಂದರು.

ಆರ್‌ಬಿಜಿ ಶಾಲೆಯ ನಿವೃತ್ತ ಪ್ರಾಚಾರ್ಯ ವಿ.ಬಿ. ಮಾಳಿ ಮಾತನಾಡಿ, ಆಧುನಿಕ ಸಮಾಜದಲ್ಲಿ ಸಮುದಾಯಗಳು ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅವಶ್ಯಕ. ಹೀಗಾಗಿ ಪಾಲಕರು ತಮ್ಮ ಸಂಕಷ್ಟಗಳನ್ನು ಮಕ್ಕಳ ಕೊರಳಿಗೆ ಹಾಕದೆ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು. ಅಂದಾಗ ಮಾತ್ರ ಸದೃಢ ಸಮಾಜ ನಿರ್ಮಾಣದ ಕನಸು ಸಾಕಾರಗೊಳ್ಳಲು ಸಾಧ್ಯ ಎಂದರು.

ಅಡುಗೆ ಮಾಡುವವರು ಹಾಗೂ ಶಾಲಾ ವಾಹನ ಚಾಲಕರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಂಸ್ಥೆಯ ಸದಸ್ಯ ಸದಾಶಿವ ಉದಪುಡಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಉದಪುಡಿ, ಗಣಿ ಉದ್ಯಮಿ ಎಸ್.ಎನ್. ಹಿರೇಮಠ, ಮುಖ್ಯಗುರು ಪ್ರಭಾಕರ ದರ್ಜೆ, ಸಂಸ್ಥೆಯ ನಿರ್ದೇಶಕ ಸದಾಶಿವ ಉದಪುಡಿ, ಷಣ್ಮೂಖಪ್ಪ ಕೋಲ್ಹಾರ, ಪ್ರಕಾಶ ಚುಳಕಿ, ಬಸವರಾಜ ಕಾರತಕಿ, ಅರುಣ ನರಗುಂದ, ಸಹ ಶಿಕ್ಷಕಿಯರಾದ ಸವಿತಾ ಕಟಗೇರಿ, ಸುನಂದಾ ಉಪ್ಪಾರ, ಶಿವಾನಂದ ಉಪ್ಪಾರ, ಪ್ರವೀಣ ತಳವಾರ, ರೇಖಾ ಗಸ್ತಿ, ಪ್ರಮೀಳಾ ಜಲವಾದಿ, ಹಯತಮಾ ರಾಮದುರ್ಗ, ಜಿನತ್ ಅಟೋನಿ, ಕೃತಿಕಾ ಪಾಟೀಲ, ಸಹನಾ ಹಲಗತ್ತಿ, ವೆಂಕುಬಾಯಿ ಮುಳ್ಳೂರ, ಸುಧಾ ಪಾಟೀಲ ಹಾಗೂ ಪಾಲಕರು, ಮಕ್ಕಳು ಶಾಲಾ ಸಿಬ್ಬಂದಿ ವರ್ಗ ಇದ್ದರು.