ಮಕ್ಕಳಿಗೆ ಸಂಸ್ಕಾರ ನೀಡಿ

| Published : Feb 02 2024, 01:04 AM IST

ಸಾರಾಂಶ

ಬನಹಟ್ಟಿ ಕಾಡಸಿದ್ಧೇಶ್ವರ ದೇವಸ್ಥಾನ ಮೈದಾನದಲ್ಲಿ ಹಮ್ಮಿಕೊಂಡ ಸಾಯಿ ಎಜುಕೇಶನ್ ಆ್ಯಂಡ್ ಸೊಸಿಯಲ್ ಡೆವಲಪ್ಮೆಂಟ್ ಸೊಸೈಟಿ ಅವರ ಭಕ್ತಿ ಪೂರ್ವ ಪ್ರಾಥಮಿಕ ಚಿಕ್ಕಮಕ್ಕಳ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭ

ರಬಕವಿ-ಬನಹಟ್ಟಿ:ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ಅವರಿಗೆ ಸಂಸ್ಕಾರ ನೀಡಿ ಭಾರತೀಯ ಸಂಸ್ಕೃತಿ ಬೆಳೆಸಿ ಎಂದು ಬನಹಟ್ಟಿ ಹಿರೇಮಠದ ಶರಣಬಸವೇಶ್ವರ ಶಿವಾಚಾರ್ಯ ಶ್ರೀಗಳು ನುಡಿದರು.ಬನಹಟ್ಟಿ ಕಾಡಸಿದ್ಧೇಶ್ವರ ದೇವಸ್ಥಾನ ಮೈದಾನದಲ್ಲಿ ಹಮ್ಮಿಕೊಂಡ ಸಾಯಿ ಎಜುಕೇಶನ್ ಆ್ಯಂಡ್ ಸೊಸಿಯಲ್ ಡೆವಲಪ್‌ಮೆಂಟ್ ಸೊಸೈಟಿ ಅವರ ಭಕ್ತಿ ಪೂರ್ವ ಪ್ರಾಥಮಿಕ ಚಿಕ್ಕಮಕ್ಕಳ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭಕ್ಕೆ ಚಾಲನೆ ನೀಡಿ ಆಶೀರ್ವಾದ ನೀಡಿದ ಅವರು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಶಿಕ್ಷಕರಷ್ಟೇ ಪಾಲಕರ ಪಾತ್ರ ಕೂಡಾ ಬಹು ಮುಖ್ಯವಾಗಿದೆ ಎಂದರು.ಸಮಾರಂಭದಲ್ಲಿ ಸಂಸ್ಥೆಯ ಸದಸ್ಯ, ಮಾಜಿ ಸೈನಿಕ ಬಸವರಾಜ ಕೊಣ್ಣೂರ, ಡಾ.ಎ.ಆರ್.ಬೆಳಗಲಿ, ಬಸಯ್ಯ ವಸ್ತ್ರದ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಉದ್ಯಮಿ ಪ್ರಕಾಶ ದೇಸಾಯಿ, ವೈದ್ಯ ವೃತ್ತಿಯಲ್ಲಿ ಡಾ.ಎ.ಆರ್.ಬೆಳಗಲಿ, ಗೋ ಸೇವಕ ಸಂತೋಷ ಆಲಗೂರ, ನೇಕಾರ ಹೋರಾಟಗಾರ ಶಿವಲಿಂಗ ಟಿರ್ಕಿ, ಸಂಗೀತ ಸೇವೆಗೆ ಶ್ರೀಕಾಂತ ಕೆಂಧೂಳಿ, ಶಿಕ್ಷಕ ಮಹಾಂತೇಶ ಬಡಿಗೇರ, ಮಾಧ್ಯಮದಲ್ಲಿ ಬಸಯ್ಯ ವಸ್ತ್ರದ, ನಾಟಕ ಕಲಾವಿದ ಯಮನಪ್ಪ ಕುಂಬಾರ, ಕರಡಿ ಮಜಲು ವಾದನದಲ್ಲಿ ಜೀವಪ್ಪ ಬಡಿಗೇರ ಸೇರಿದಂತೆ ಸಾಧಕರಿಗೆ ಸನ್ಮಾನಿಸಿ, ಗೌರವಿಸಿದರು.

ಸಂಸ್ಥೆಯ ಆಡಳಿ ಮಂಡಳಿ, ಶಿಕ್ಷಕರು, ಅನೇಕ ಪಾಲಕರು ಭಾಗವಹಿಸಿದ್ದರು.