ದ್ಯಾಂಪೂರು ಗ್ರಾಮಕ್ಕೆ ಪ್ರತ್ಯೇಕ ಗ್ರಾಪಂ ನೀಡಿ

| Published : Jul 15 2025, 11:45 PM IST

ಸಾರಾಂಶ

ದ್ಯಾಂಪೂರ ಗ್ರಾಮವು ಮೊದಲು ಮಂಡಲ ಪಂಚಾಯಿತಿ (ಗ್ರೂಪ್‌ ಪಂಚಾಯಿತಿ) ಇತ್ತು. ಈ ಗ್ರಾಮಕ್ಕೆ ಚನ್ನಪನಹಳ್ಳಿ, ಹರಿಶಂಕರಬಂಡಿ, ಕೊನಾಪೂರ ಗ್ರಾಮಗಳು ಸೇರಿದ್ದವು. ನಂತರದಲ್ಲಿ ರಾಜೂರ ಪಂಚಾಯಿತಿ ವ್ಯಾಪ್ತಿಗೆ ಸೇರಿತು. ಪಂಚಾಯಿತಿಗೆ ಬೇಕಾದ ಎಲ್ಲ ಅರ್ಹತೆ ದ್ಯಾಂಪೂರು ಗ್ರಾಮ ಹೊಂದಿದೆ.

ಕುಕನೂರು:

ತಾಲೂಕಿನ ದ್ಯಾಂಪೂರು ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯಿತಿ ರಚಿಸಬೇಕೆಂದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿರುವ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ಕುಕನೂರು ಪಟ್ಟಣ ಪಂಚಾಯಿತಿಗೆ ಸೇರಿಸಬಾರದೆಂದು ಒತ್ತಾಯಿಸಿದ್ದಾರೆ.

ದ್ಯಾಂಪೂರ ಗ್ರಾಮವು ಮೊದಲು ಮಂಡಲ ಪಂಚಾಯಿತಿ (ಗ್ರೂಪ್‌ ಪಂಚಾಯಿತಿ) ಇತ್ತು. ಈ ಗ್ರಾಮಕ್ಕೆ ಚನ್ನಪನಹಳ್ಳಿ, ಹರಿಶಂಕರಬಂಡಿ, ಕೊನಾಪೂರ ಗ್ರಾಮಗಳು ಸೇರಿದ್ದವು. ನಂತರದಲ್ಲಿ ರಾಜೂರ ಪಂಚಾಯಿತಿ ವ್ಯಾಪ್ತಿಗೆ ಸೇರಿತು. ಪಂಚಾಯಿತಿಗೆ ಬೇಕಾದ ಎಲ್ಲ ಅರ್ಹತೆ ದ್ಯಾಂಪೂರು ಗ್ರಾಮ ಹೊಂದಿದೆ. ದಿನದಿಂದ ದಿನಕ್ಕೆ ಗ್ರಾಮದ ಸುತ್ತಲೂ ಎನ್‌ಎ ಪ್ಲಾಟ್‌ಗಳು ಆಗಿ ಗ್ರಾಮ ವಿಸ್ತಾರವಾಗಿದೆ. ಚನ್ನಪ್ಪನಹಳ್ಳಿ, ಹರಿಶಂಕರ ಬಂಡಿ ಗ್ರಾಮಸ್ಥರು ದ್ಯಾಂಪೂರ ಗ್ರಾಮಕ್ಕೆ ಸೇರಲು ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ದ್ಯಾಂಪೂರ ಗ್ರಾಪಂ ವ್ಯಾಪ್ತಿಗೆ ಹಳೇ ದ್ಯಾಂಪೂರು ಗ್ರಾಮ, ಮಂಜುನಾಥ ನಗರ, ಶಾಂತಿ ನಗರ, ಮಾರುತಿ ನಗರ, ಕನಕ ನಗರ, ಎಂಎಸ್‌ಎಂ ನಗರ, ಭಗೀರಥ ನಗರ, ಅಂದಪ್ಪ ಸೋಂಪೂರ ಏರಿಯಾ, ಹನಮಂತರಾಯ ನಗರ, ಆರರಕ್ಷಕ ಬಡಾವಣೆ, ಛತ್ರಪತಿ ನಗರ ಮತ್ತು ಅಂಬಿಗರ ಚೌಡಯ್ಯ ಸರ್ಕಲ್‌ ಹತ್ತಿರದ ಏರಿಯಾ, ಚನ್ನಪನಹಳ್ಳಿ, ಹರಿಶಂಕರ ಬಂಡಿ ಗ್ರಾಮ ಸೇರಿಸಿಕೊಂಡು ದ್ಯಾಂಪೂರು ಗ್ರಾಮಕ್ಕೆ ಪ್ರತ್ಯೇಕ ಗ್ರಾಪಂ ನೀಡಬೇಕು ಎಂದು ಆಗ್ರಹಿಸಿದರು.

ಈ ಎಲ್ಲ ಏರಿಯಾ ಸೇರಿದರೆ ೪೨೫೦ಕ್ಕಿಂತ ಹೆಚ್ಚು ಜನಸಂಖ್ಯೆ ಆಗುತ್ತದೆ ಮತ್ತು ಕಲಿಯುವ ಮಕ್ಕಳಿಗೆ ಗ್ರಾಮೀಣ ಸೌಲಭ್ಯ ಸಿಗುವಂತಾಗುತ್ತದೆ ಎಂದು ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಮನವಿಯಲ್ಲಿ ಕುಕನೂರು ಪಟ್ಟಣ ಪಂಚಾಯಿತಿಗೆ ದ್ಯಾಂಪೂರು ಗ್ರಾಮ ಸೇರ್ಪಡೆಗೆ ವಿರೋಧವಿದೆ ಎಂದು ತಿಳಿಸಿದ್ದಾರೆ.

ಈ ವೇಳೆ ಗ್ರಾಪಂ ಸದಸ್ಯರಾದ ಬಸವರಾಜ ಬಿಡಿನಾಳ, ದೇವಪ್ಪ ಮರಡಿ, ತಾಪಂ ಮಾಜಿ ಸದಸ್ಯ ಬಸವರಾಜ ಮಾಸೂರು, ಶಿವಯ್ಯ ಶಶಿಮಠ, ಮುರಾರಿರಾವ ಜಗತಾಪ, ಸುರೇಶ ಸದರಿ, ಚಂದಾಲಿಂಗಪ್ಪ ಮಾಲಗಿತ್ತಿ, ಈಶ್ವಯ್ಯ ಶಿರೂರಮಠ, ಪ್ರೇಮರಾಜ ಮಾಲಗಿತ್ತಿ, ಶಿವಬಸಪ್ಪ ನೋಟಗಾರ, ಸುರೇಶ ಆರೇರ, ಶಿವಕುಮಾರ, ಹನುಮಂತ ಭಾವಿಮನಿ ಇದ್ದರು.