ನೇಹಾ ಹಿರೇಮಠ ಹಂತಕನಿಗೆ ಕಠಿಣ ಶಿಕ್ಷೆ ವಿಧಿಸಿ

| Published : Apr 24 2024, 02:20 AM IST

ಸಾರಾಂಶ

ಶಾಲಾ ಕಾಲೇಜುಗಳು ಜ್ಞಾನ ದೇಗುಲಗಳಾಗಿದ್ದು, ಇತಂಹ ದೇಗುಲಗಳಲ್ಲಿ ಹಾಡಹಗಲೇ ವಿದ್ಯಾರ್ಥಿಯ ಭೀಕರ ಹತ್ಯೆ ಮಾಡಿರುವುದು ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ

ನರಗುಂದ: ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿಯನ್ನು ಫಯಾಜ್‌ ಎಂಬಾತ ಭೀಕರವಾಗಿ ಹತ್ಯೆ ಮಾಡಿದ್ದು, ಸರ್ಕಾರ ಕಾಲಹರಣ ಮಾಡದೇ ಹಂತಕನಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಎಬಿವಿಪಿ ಕಾರ್ಯದರ್ಶಿ ವಿಠ್ಠಲ ಸಾಠೆ ಆಗ್ರಹಿಸಿದ್ದಾರೆ.

ಅವರು ಎಬಿವಿಪಿಯಿಂದ ಪಟ್ಟಣದ ಪುರಸಭೆ ಆವರಣದಿಂದ ಇತ್ತೀಚೆಗೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿ ನೇಹಾ ಹಿರೇಮಠ ಅವರನ್ನು ಲವ್‌ ಜಿಹಾದ್‌ ಕಾರಣಕ್ಕಾಗಿ ಫಯಾಜ್‌ ಎಂಬಾತ ಮಾಡಿರುವ ಹತ್ಯೆ ಖಂಡಿಸಿ ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿನ ಶಿವಾಜಿ ಮಹಾರಾಜ ವೃತ್ತಕ್ಕೆ ಆಗಮಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಜೊತೆಗೂಡಿ ಹಂತಕನ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಉಗ್ರ ಶಿಕ್ಷೆಗೆ ಒಳಪಡಿಸುವಂತೆ ತಹಸೀಲ್ದಾರ್‌ ಶ್ರೀಶೈಲ್‌ ಮೂಲ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಶಾಲಾ ಕಾಲೇಜುಗಳು ಜ್ಞಾನ ದೇಗುಲಗಳಾಗಿದ್ದು, ಇತಂಹ ದೇಗುಲಗಳಲ್ಲಿ ಹಾಡಹಗಲೇ ವಿದ್ಯಾರ್ಥಿಯ ಭೀಕರ ಹತ್ಯೆ ಮಾಡಿರುವುದು ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ. ವಿದ್ಯಾರ್ಥಿನಿ ನೇಹಾ ಹಿರೇಮಠರನ್ನು ಕ್ರೂರ ಮನಸ್ಥಿತಿಯ ಫಯಾಜ್ ಎಂಬಾತ ಲವ್ ಜಿಹಾದಿಗಾಗಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದರು. ಪ್ರೀತಿ ನಿರಾಕರಿಸಿದಕ್ಕಾಗಿ ಆಕೆಯ ಕಾಲೇಜಿಗೆ ಆಕ್ರಮವಾಗಿ ಪ್ರವೇಶಿಸಿ ಚಾಕುವಿನಿಂದ 9 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಂತಹ ಕ್ರೂರಿಗಳನ್ನು ತಡಮಾಡದೇ ಗಲ್ಲು ಶಿಕ್ಷೆಗೊಳಪಡಿಬೇಕೆಂದು ಆಗ್ರಹಿಸಿದರು.

ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಮಾತನಾಡಿ, ಕಾಲೇಜಿನೊಳಗೆ ಬಂದು ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲು ಸಾಧ್ಯವಾಗಿರಬೇಕಾದರೆ ಕೊಲೆಗಾರನಿಗೆ ಕಾನೂನಿನ ಯಾವುದೇ ಭಯವೂ ಇಲ್ಲವಾಗಿದೆ. ರಾಜಾರೋಷವಾಗಿ ಕೊಲೆ ಮಾಡುವುದನ್ನು ನೋಡಿದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ.ಈ ಘಟನೆಯಿಂದ ರಾಜ್ಯದ ವಿದ್ಯಾರ್ಥಿ ಸಮುದಾಯ ಭಯಭೀತರಾಗಿದ್ದಾರೆ. ಅಪರಾಧಿಗೆ ಉಗ್ರ ಶಿಕ್ಷೆ ನೀಡಿದರೆ ಮಾತ್ರ, ವಿದ್ಯಾರ್ಥಿನಿಯ ಕುಂಟುಂಬಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ. ರಾಜ್ಯ ಹಾಗೂ ದೇಶದೆಲ್ಲೆಡೆ ಜಿಹಾದಿ ಮನಸ್ಥಿತಿವುಳ್ಳವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ವಿದ್ಯಾರ್ಥಿನಿಯರು ಸದಾ ಎಚ್ಚರದಿಂದ ಇರಬೇಕೆಂದು ಕಿವಿ ಮಾತು ಹೇಳಿದರು.

ತಹಸೀಲ್ದಾರ ಶ್ರೀಶೈಲ ತಳವಾರ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ರಾಜ್ಯಪಾಲರಿಗೆ ರವಾನೆ ಮಾಡಲಾಗುವುದೆಂದು ಹೇಳಿದರು.

ನಂದೀಶ ಮಠದ, ಆನಂದ ಹೂಗಾರ, ಅಜ್ಜನಗೌಡ ಪಾಟೀಲ, ಎಸ್.ಎಸ್. ಪಾಟೀಲ, ಸುನೀಲ ಕುಷ್ಟಗಿ, ರಾಜುಗೌಡ ಪಾಟೀಲ, ವಿಠ್ಠಲ ಹವಾಲ್ದಾರ, ಅಭಿಷೇಕ ನವಲಗುಂದ, ಯಲ್ಲಪ್ಪಗೌಡ್ರ, ಮಹೇಶ ಹಾರೋಗೇರಿಮಠ, ಆದಿತ್ಯ ಉಳ್ಳಾಗಡ್ಡಿ, ಶಿವು ಹಿರೇಗೌಡ್ರ, ಪೃಥ್ವಿರಾಜ ಮಳೇಕರ, ಸಂಗಮೇಶ ಬಾದಾಮಿ, ವಿಠ್ಠಲ ಕಲಹಾಳ, ದಿವ್ಯಾ ಹೂಗಾರ, ಅನ್ನಪೂರ್ಣ ರಾಯನಗೌಡ್ರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.