ಸಾರಾಂಶ
-ನಾಯಕ ಸಮಾಜದ ಮುಖಂಡ ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನಪ್ಪ ಸುದ್ದಿಗೋಷ್ಟಿ
-----ಕನ್ನಡಪ್ರಭ ವಾರ್ತೆ, ದಾವಣಗೆರೆ
ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷರಾಗಿ ಸಮಾಜದ ಮುಖಂಡ ಬಿ.ವೀರಣ್ಣ ನೇಮಕವಾಗಿದ್ದರೆ ಅದಕ್ಕೆ ದಾಖಲೆ ನೀಡಬೇಕು ಎಂದು ಸಮಾಜದ ಹಿರಿಯ ಮುಖಂಡ, ವಕೀಲ ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನಪ್ಪ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾವು ದಾವಣಗೆರೆ ತಾಲೂಕು ನಾಯಕ ಸಮಾಜದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ. ವಕೀಲನಾಗಿದ್ದು, ಸಾರ್ವಜನಿಕ ಸೇವೆ, ಸಮಾಜ ಸೇವೆಯಲ್ಲಿದ್ದೇವೆ. ಬಿ.ವೀರಣ್ಣ ನಾಯಕ ಸಮಾಜದ ಜಿಲ್ಲಾಧ್ಯಕ್ಷರೆಂದು ಸುಮಾರು ವರ್ಷದಿಂದ ಹೇಳಿಕೊಂಡು ಬಂದಿದ್ದು, ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದಕ್ಕೆ ಬಿ.ವೀರಣ್ಣ ದಾಖಲೆ ನೀಡಲಿ ಎಂದರು.
ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ, ಜಯಂತಿ ಸಮಾರಂಭದಲ್ಲಿ ಈಚೆಗೆ ಜಿಲ್ಲಾಡಳಿತದಿಂದ ನಡೆಯಿತು. ಅಂದಿನ ಸಮಾರಂಭದಲ್ಲಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಅಂತಲೇ ಬಿ.ವೀರಣ್ಣನವರನ್ನು ಅಧಿಕಾರಿಗಳು ಹೇಳಿದ್ದು, ವೀರಣ್ಣ ನಮ್ಮ ಸಮಾಜದ ಹಿರಿಯ ಮುಖಂಡರು. ಆದರೆ, ಜಿಲ್ಲಾಧ್ಯಕ್ಷರಲ್ಲ. ಒಂದು ವೇಳೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ಸಾರ್ವಜನಿಕವಾಗಿ ಹಾಜರುಪಡಿಸಬೇಕು ಎಂದು ಅವರು ಆಗ್ರಹಿಸಿದರು.ವೀರಣ್ಣನವರನ್ನು ಸಮಾಜದ ಮುಖಂಡರು ಅಂತಾ ಕರೆದರೆ ಆಕ್ಷೇಪಣೆ ಇಲ್ಲ. ಆದರೆ, ಜಿಲ್ಲಾಧ್ಯಕ್ಷರು ಅಂದಿದ್ದಕ್ಕೆ ನಮ್ಮ ವಿರೋಧವಿದೆ. ಹತ್ತು ವರ್ಷದಿಂದ ಕೆಲವರು ಸ್ವಯಂ ಘೋಷಿತ ಅಧ್ಯಕ್ಷರೆಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ. ದಾವಣಗೆರೆ ತಾಲೂಕು ನಾಯಕ ಸಮಾಜದ ರಿಜಿಸ್ಟರ್ ನೋಂದಣಿಯಾದ ಸಮಾಜದ ನಿರ್ದೇಶಕರ ಮೂಲಕ ತಾವು ಹಿಂದೆ ತಾಲೂಕು ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ, ಈಗ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ. ಆದರೆ, ಜಿಲ್ಲಾಧ್ಯಕ್ಷರು ಅಧಿಕೃತವಲ್ಲವೆಂದ ಮೇಲೆ ಸೂಕ್ತ ಕ್ರಮ ಆಗಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 2.5 ಲಕ್ಷ ನಾಯಕ ಸಮಾಜದವರಿದ್ದಾರೆ. ಆರೂ ತಾಲೂಕಿನಿಂದ ನಿರ್ದೇಶಕರ ಆಯ್ಕೆಯಾದ ನಂತರ ಜಿಲ್ಲಾಧ್ಯಕ್ಷರ ಆಯ್ಕೆ ಆಗಬೇಕು. ಅದು ನೋಂದಣಿ ಕಚೇರಿಯಲ್ಲಿ ನೋಂದಣಿ ಆಗಬೇಕು. ಆಗ ಮಾತ್ರ ಅಧಿಕೃತವಾಗುತ್ತದೆ. ಬಿ.ವೀರಣ್ಣನವರ ವಿರುದ್ಧ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೂ ದೂರು ನೀಡಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಈ ಬಗ್ಗೆ ಉದಾಸೀನ ಮಾಡಿದರೆ, ಖಾಸಗಿ ದೂರು ದಾಖಲಿಸುವೆ ಎಂದು ಗುಮ್ಮನೂರು ಮಲ್ಲಿಕಾರ್ಜುನಪ್ಪ ಎಚ್ಚರಿಸಿದರು.................
ಫೋಟೊ: ದಾವಣಗೆರೆಯಲ್ಲಿ ಹಿರಿಯ ವಕೀಲ, ನಾಯಕ ಸಮಾಜದ ಮುಖಂಡ ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.9ಕೆಡಿವಿಜಿ1