ಜಿಪಂ, ತಾಪಂ ಚುನಾವಣೆಗಳಲ್ಲಿ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಿ

| Published : Jan 13 2025, 12:45 AM IST

ಸಾರಾಂಶ

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮುದಾಯದ ಜಿಲ್ಲಾ ಮಟ್ಟದ ಮುಖಂಡರ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮುದಾಯದ ಜಿಲ್ಲಾ ಮಟ್ಟದ ಮುಖಂಡರ ಸಭೆ ನಡೆಯಿತು.

ಮುಂಬರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳಲ್ಲಿ ಮಾದಿಗ ಸಮುದಾಯದಿಂದ ಸ್ಪರ್ಧೆ ಮಾಡಲು ಎಲ್ಲಾ ಪಕ್ಷಗಳು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ಮಟ್ಟದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲೆಯ ಮಾದಿಗ ಸಮುದಾಯದ ಮುಖಂಡರು ಮಾತನಾಡಿ, ಚಾಮರಾಜನಗರ ಜಿಲ್ಲೆಯ ಪರಿಶಿಷ್ಟ ಹಾಗೂ ಹಿಂದುಳಿದ ವರ್ಗದವರು ಹೆಚ್ಚಾಗಿದ್ದಾರೆ. ಅದರಲ್ಲಿಯೂ ಬಹುತೇಕ ಚುನಾವಣೆಯಲ್ಲಿ ಮಾದಿಗರ ಮತಗಳು ಗೆಲುವಿಗೆ ನಿರ್ಣಯವಾಗಿವೆ. ಇಷ್ಟಾಗಿಯು ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಯಲ್ಲಿ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳಲು ರಾಜಕೀಯ ಪಕ್ಷಗಳು ವಿಫಲವಾಗಿದೆ. ಅಲ್ಲದೇ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಮಾದಿಗ ಸಮುದಾಯಕ್ಕೆ ಅವಕಾಶ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ. ಮುಂಬರುವ ಚುನಾವಣೆಯಲ್ಲಿ ಈ ಪರಿಪಾಠ ಬಿಟ್ಟು ಎಲ್ಲಾ ರಾಜಕೀಯ ಪಕ್ಷಗಳು ಮಾದಿಗ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ಪರಿಶಿಷ್ಟ ಜಾತಿ ಮೀಸಲಾತಿ ಇರುವ ಕ್ಷೇತ್ರಗಳಲ್ಲಿ ಮಾದಿಗ ಸಮುದಾಯಕ್ಕೂ ಮುನ್ನಣೆ ನೀಡಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿ ಮಾದಿಗರ ಸಮುದಾಯವು ಜಿ.ಪಂ. ತಾ.ಪಂ. ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ.ಮಾದಿಗ ಸಮುದಾಯ ಜಿಲ್ಲಾ ಡಾ.ಬಾಬುಜಗಜೀವನರಾಂ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ಬಹಳ ವರ್ಷಗಳಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಾದಿಗರಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ. ಇದರಿಂದಾಗಿ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಸಾಮಾಜಿಕವಾಗಿ ಜನಾಂಗ ಮುಂದುವರಿಯಲು ಕಷ್ಟವಾಗುತ್ತದೆ. ರಾಜಕೀಯ ಪ್ರಾತಿನಿಧ್ಯದಿಂದ ಮಾತ್ರ ಜನಾಂಗವನ್ನು ಅಭಿವೃದ್ದಿಪಡಿಸಲು ಸಾಧ್ಯವಿದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಮಾದಿಗ ಸಮುದಾಯಕ್ಕೆ ಹೆಚ್ಚಿನ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಮುಖಂಡರಾದ ಬಸವನಪುರ ರಾಜಶೇಖರ, ಮೂಡಹಳ್ಳಿ ಮೂರ್ತಿ, ಬೂದುಬಾಳು ಮಹದೇವು, ಎಚ್.ಎಚ್.ನಾಗರಾಜು, ಸೋಮಶೇಖರ್ ಗುಂಡ್ಲುಪೇಟೆ, ಹಂಗಳ ನಾಗಮಲ್ಲು, ರಾಜಶೇಖರ, ರೇವಣ್ಣ, ಆರ್.ಕೆ.ಜಗದೀಶ್, ನಿವೃತ್ತ ಅಧಿಕಾರಿ ಅರಕಲವಾಡಿ ಜವರಯ್ಯ, ಕೆಸ್ತೂರು ಮರಪ್ಪ, ಅಂಕಹಳ್ಳಿ ಸಿದ್ದಯ್ಯ, ವಕೀಲರಾದ ರಾಜೇಶ್, ಹರವೆ ಮಹದೇವಯ್ಯ, ನಾಗಯ್ಯ ಹೊನ್ನೆಗೌಡನಹಳ್ಳಿ. ಗು.ನರಸಿಂಹ, ಶಂಕರ್, ಸುದೇಶ್ , ಶಾಂತರಾಜು, ಯಳಂದೂರು ನಾಗರಾಜು ಭಾಗವಹಿಸಿದ್ದರು.