ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸರ್ಕಾರಿ ಶಿಕ್ಷಕರಷ್ಟೇ ಸ್ಥಾನಮಾನ ನೀಡಿ

| Published : Mar 29 2024, 12:48 AM IST

ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸರ್ಕಾರಿ ಶಿಕ್ಷಕರಷ್ಟೇ ಸ್ಥಾನಮಾನ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರುಗಳಿಗೆ ಸರ್ಕಾರಿ ಶಿಕ್ಷಕರಂತೆ ಸಮಾನ ಅವಕಾಶಗಳನ್ನು ನೀಡುವ ಮೂಲಕ ಗೌರವದಿಂದ ಕಾಣುವಂತಾಗಬೇಕು ಎಂದು ಆಗ್ರಹಿಸಿ ಖಾಸಗಿ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಮುಖ್ಯಸ್ಥರು ಗುರುವಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗೆ ಬಿ.ಎಸ್.ಸಾವಳಗಿ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರುಗಳಿಗೆ ಸರ್ಕಾರಿ ಶಿಕ್ಷಕರಂತೆ ಸಮಾನ ಅವಕಾಶಗಳನ್ನು ನೀಡುವ ಮೂಲಕ ಗೌರವದಿಂದ ಕಾಣುವಂತಾಗಬೇಕು ಎಂದು ಆಗ್ರಹಿಸಿ ಖಾಸಗಿ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಮುಖ್ಯಸ್ಥರು ಗುರುವಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗೆ ಬಿ.ಎಸ್‌.ಸಾವಳಗಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಶಾರದಾ ವಿದ್ಯಾಪ್ರಸಾರಕ ಸಂಸ್ಥೆಯ ಮುಖ್ಯಸ್ಥ ಶಿವುಕುಮಾರ ಬಿರಾದಾರ ಅವರು ಮಾತನಾಡಿ, ಸದ್ಯ ಐದನೇ ತರಗತಿಯ ಪರೀಕ್ಷೆಗಳು ಮುಕ್ತಾಯಗೊಂಡಿವೆ. ಆದರೆ, ಮೌಲ್ಯಮಾಪನ ಕಾರ್ಯಕ್ಕೆ ಅನುದಾನ ರಹಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ನಿರ್ದಿಷ್ಟ ವಿದ್ಯಾರ್ಹತೆ ಪಡೆದ ಶಿಕ್ಷಕರುಗಳು ಆಯ್ಕೆ ಮಾಡಿದ್ದು ಇರುತ್ತದೆ. ಆದರೆ, ಕೇವಲ ನಮಗೆ ಮೌಲ್ಯಮಾಪನದಂತಹ ಕೆಲಸಕ್ಕೆ ಸೀಮಿತಗೊಳಿಸಿ ಇನ್ನುಳಿದ ಸ್ಥಾನಗಳಲ್ಲಿ ನಮ್ಮನ್ನು ತಿರಸ್ಕಾರ ಮಾಡುತ್ತಿದ್ದಾರೆ. ಇದರಿಂದ ಬೇಸತ್ತು ನಿಯೋಜನೆ ಮಾಡಿರುವ ಅನುದಾನ ರಹಿತ ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಅವರು ತಾರತಮ್ಯ ನೀತಿ ಖಂಡಿಸಿ ಮೌಲ್ಯಮಾಪನ ಕರ್ತವ್ಯದಿಂದ ಹಿಂದೆ ಸರಿದು ನಮ್ಮ ಹಕ್ಕೋತ್ತಾಯದ ಧ್ವನಿ ಎತ್ತಿದ್ದೇವೆ ವಿನಃ ನಮಗೆ ಯಾವುದೇ ದುರುದ್ದೇಶದಿಂದಲ್ಲ. ಆದರೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲಿಸಿ ಮೇಲಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತಂದು ತಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಮ್ಮ ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಿ ಸೇವೆ ಸಲ್ಲಿತ್ತೇವೆ ಎಂದರು.

ಈ ವೇಳೆ ರಾಮಚಂದ್ರ ಹೆಗಡೆ ಅವರು ಮಾತನಾಡಿ, ಎಸ್.ಎಸ್.ಎಲ್.ಸಿ ಆಂತರಿಕ ಅಂಕಗಳ ಪರಿಶೀಲನಾ ತ್ರಿಸದಸ್ಯ ಕಮಿಟಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರುಗಳಿಗೆ ಮಾತ್ರ ಅವಕಾಶಗಳನ್ನು ನೀಡಲಾಗಿರುತ್ತದೆ. ಇದನ್ನು ನೋಡಿದಾಗ ಅನುದಾನ ರಹಿತ ಶಾಲಾ ಶಿಕ್ಷಕರನ್ನು ಮರೆತಂತಿದೆ. ಆಂತರಿಕ ಪರಿಶೀಲನಾ ಸಮಿತಿಯಲ್ಲಿ ಸಾಮಾನ್ಯ ಸದಸ್ಯನಾಗಿ ಕೆಲಸ ಮಾಡಲು ಅರ್ಹತೆ ಇಲ್ಲದಿದ್ದರೆ ಮುಂದಿನ ವಾರ್ಷಿಕ ಪರೀಕ್ಷೆಯ ತಾತ್ವಿಕ ಉತ್ತರ ಪತ್ರಿಕೆಗಳನ್ನು ಮಾಡಲು ಅರ್ಹರಾಗಬಹುದೇ? ಎನ್ನುವುದನ್ನು ನಮ್ಮನ್ನು ಕಾಡುವ ಪ್ರಶ್ನೆಯಾಗಿದೆ ಎಂದರು.

ಈ ವೇಳೆ ಅಹಲ್ಯಾದೇವಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಮೇಲ್ವಿಚಾರಕ ಭೀರಪ್ಪ ಜಗಲಿ. ರವಿ ಬೆನಕಟಗಿ,ಆನಂದ ಓಗಿ, ವಿನೋದ ಪಟೇಗಾರ, ಬಸವರಾಜ ಪಣೇದಕಟ್ಟಿ, ಯಾಶೀನ ಮುಲ್ಲಾ, ನವೀದ ಡೊಂಗರಗಾಂವ, ವಿಶ್ವನಾಥ ಭನ್ನೇಟ್ಟಿ ಸೇರಿದಂತೆ ಇತರರು ಇದ್ದರು.