ಗ್ರಾಮೀಣ ಪ್ರದೇಶದಲ್ಲಿ ಸಕ್ಕರೆ ಕಾಯಿಲೆ, ಕ್ಯಾನ್ಸರ್, ಮೂತ್ರ ಪಿಂಡದ ಸಮಸ್ಯೆಗಳ ಬಗ್ಗೆ ಸರಿಯಾದ ಅರಿವಿಲ್ಲ. ಹೀಗಾಗಿ ಇಂತಹ ಶಿಬಿರಗಳ ಪ್ರಯೋಜನ ಪಡೆಯಬೇಕು. ಯಾವುದೇ ರೋಗಗಳು ಪ್ರಾಥಮಿಕ ಹಂತದಲ್ಲಿ ಗುರುತಿಸಲ್ಪಟ್ಟರೆ ಚಿಕಿತ್ಸೆ ಹಾದಿ ಸುಗಮವಾಗುತ್ತದೆ.
ಹಲಗೂರು:
ಯುವ ಸಮುದಾಯ ಸೇರಿದಂತೆ ಪ್ರತಿಯೊಬ್ಬರು ದುಶ್ಚಟಗಳನ್ನು ತ್ಯಜಿಸಿ ಆರೋಗ್ಯವಂತ ಜೀವನ ನಡೆಸುವಂತೆ ನಡೆಸುವಂತೆ ಮೈಸೂರಿನ ನ್ಯೂ ಪ್ರಿಯದರ್ಶಿನಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕೆ.ಜೆ.ವಿನಯ್ ಕುಮಾರ್ ತಿಳಿಸಿದರು.ರಾಯರ ಬೀದಿಯ ಪ್ರಭು ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್, ಮೂತ್ರಶಾಸ್ತ್ರ ಮತ್ತು ವೈದ್ಯಕೀಯ ಉಚಿತ ತಪಾಸಣೆ ಶಿಬಿರದಲ್ಲಿ , ಸುಮಾರು ಮೂವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿ ಮಾತನಾಡಿ, ಮಾದಕ ಪದಾರ್ಥಗಳಾದ ಗುಟ್ಕಾ, ಪಾನ್ ಪರಾಕ್, ಧೂಮಪಾನ ಮತ್ತು ಮದ್ಯಪಾನ ಸೇವನೆಯಿಂದ ಕ್ಯಾನ್ಸರ್ ಕಾಯಿಲೆಗೆ ನೀವೇ ಆಹ್ವಾನ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಸಕ್ಕರೆ ಕಾಯಿಲೆ, ಕ್ಯಾನ್ಸರ್, ಮೂತ್ರ ಪಿಂಡದ ಸಮಸ್ಯೆಗಳ ಬಗ್ಗೆ ಸರಿಯಾದ ಅರಿವಿಲ್ಲ. ಹೀಗಾಗಿ ಇಂತಹ ಶಿಬಿರಗಳ ಪ್ರಯೋಜನ ಪಡೆಯಬೇಕು. ಯಾವುದೇ ರೋಗಗಳು ಪ್ರಾಥಮಿಕ ಹಂತದಲ್ಲಿ ಗುರುತಿಸಲ್ಪಟ್ಟರೆ ಚಿಕಿತ್ಸೆ ಹಾದಿ ಸುಗಮವಾಗುತ್ತದೆ ಎಂದರು.ಬಾಯಿಯಲ್ಲಿ ಪದೇ ಪದೇ ಹುಣ್ಣು ಆಗುವುದು, ಸ್ತನಗಳಲ್ಲಿ ಗಂಟುಹಾಗೂ ದೇಹದ ಯಾವುದೇ ಭಾಗಗಳಲ್ಲಿ ಗಂಟುಗಳಿದ್ದರೆ, ದೇಹದ ಯಾವುದೇ ಭಾಗಗಳಲ್ಲಿ ಗಾಯವಿಲ್ಲದಿದ್ದರೂ ರಕ್ತಸ್ರಾವ, ಪದೇ ಪದೇ ವಾಂತಿ, ಬೇಧಿ, ಕಾರಣವಿಲ್ಲದೆ ತೂಕ ಇಳಿಕೆ ಇದ್ದರೆ, ಉದಾ ಸೀನ ಮಾಡದೆ ವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಳ್ಳಬೇಕು. ರಾಸಾಯನಿಕ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಆಗಾಗ ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಭು ಆಸ್ಪತ್ರೆ ವೈದ್ಯಾಧಿಕಾರಿ ಉಮೇಶ್ ಮಠಪತಿ ಮಾತನಾಡಿ, ಪಟ್ಟಣ ಪ್ರದೇಶಗಳಿಗೆ ಹೋಗಿ ಹೆಚ್ಚು ಹಣ ವೆಚ್ಚ ಮಾಡುವುದಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳುವ ಉಚಿತ ಶಿಬಿರಗಳಲ್ಲಿ ನಿಮ್ಮ ಆರೋಗ್ಯವ ತಪಾಸಣೆ ಮಾಡಿಸಿಕೊಂಡರೆ ಮಾರಕ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಮೈಸೂರು ನ್ಯೂ ಪ್ರಿಯದರ್ಶಿನಿ ಆಸ್ಪತ್ರೆಯ ಡಾ.ಎಂ.ಎಸ್.ಗಿರೀಶ್, ಡಾ.ಕಿರಣ್ ಕುಮಾರ್, ಮೆಡಿಕಲ್ ಸ್ಟೋರ್ ಪ್ರಶಾಂತ್ ಸೇರಿದಂತೆ ಇತರರು ಇದ್ದರು.ದೊಡ್ಡ ಕೆರೆ ಒತ್ತುವರಿ ತೆರವು: ಗಡಿ ಗುರುತು, ಕಲ್ಲು ಅಳವಡಿಕೆ
ಹಲಗೂರು: ದೊಡ್ಡ ಕೆರೆಯ ಅಳತೆ ಕಾರ್ಯ ನಡೆಸಿದ ಅಧಿಕಾರಿಗಳು 1 ಎಕರೆ 20 ಗುಂಟೆ ಒತ್ತುವರಿಯಾಗಿದ್ದ ಕೆರೆ ಜಮೀನು ಖಾಸಗಿ ವ್ಯಕ್ತಿಗಳಿಂದ ತೆರವುಗೊಳಿಸಿದ್ದಾರೆ. ಹಲಗೂರು ವೃತ್ತದ ಉಪ ತಹಸೀಲ್ದಾರ್ ನಟರಾಜು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದೊಡ್ಡಕೆರೆಯ ಸರ್ವೇ ನಂ.294ರ ಒಟ್ಟು 39.39 ಎಕರೆ ಜಮೀನಿನ ಪೈಕಿ ಮಹದೇವಮ್ಮ ಅವರ 1 ಎಕರೆ 10 ಗುಂಟೆ ಹಾಗೂ ತಿಮ್ಮೇಗೌಡ ಅವರ 10 ಗುಂಟೆ ಒತ್ತುವರಿ ಜಮೀನನ್ನು ತೆರವುಗೊಳಿಸಲಾಯಿತು. ಇದೇ ವೇಳೆ ಕೆರೆ ಗಡಿರೇಖೆಯನ್ನು ಗುರುತಿಸಿ ಕಲ್ಲುಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.ಕಾರ್ಯಾಚರಣೆಯಲ್ಲಿ ಉಪ ತಹಸೀಲ್ದಾರ್ ನಟರಾಜು, ಸರ್ಕಾರಿ ಸರ್ವೇಯರ್ ಬೀರೇಶ್, ರಾಜಸ್ವ ನಿರೀಕ್ಷಕ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿ ಸೋಮಣ್ಣ ಹಾಗೂ ಹಲಗೂರು ಗ್ರಾಮ ಪಂಚಾಯಿತಿ ಅಧಿಕಾರಿ ಚೆಂದಿಲ್ ಉಪಸ್ಥಿತರಿದ್ದರು.