ಸಾರಾಂಶ
ಪ್ರಸ್ತುತ ದಿನಗಳಲ್ಲಿ ಮೊಬೈಲ್ ಅನಿರ್ವಾಯ, ಆದರೆ ಅತಿಯಾದ ಮೊಬೈಲ್ ಬಳಕೆ ಒಳ್ಳೆಯದಲ್ಲ, ಪೋಷಕರು ಸಹ ಮಕ್ಕಳ ಅತಿಯಾದ ಮೊಬೈಲ್ ಬಳಕೆಯಿಂದ ಬೇಸತ್ತು ಹೋಗಿದ್ದಾರೆ, ಹೇಗಾದರೂ ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಲೆಂದು ಅವರ ಅಭಿಪ್ರಾಯವಾಗಿದ್ದು, ಯುವಕರು ದೈಹಿಕವಾಗಿ ಸದೃಢರಾಗುವ ನಿಟ್ಟಿನಲ್ಲಿ ಮೊಬೈಲ್ ಬಳಕೆ ಸೀಮಿತಗೊಳಿಸಬೇಕು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಯುವಕರು ದುಶ್ಚಟಗಳಿಗೆ ದಾಸನರಾಗದೆ ತಮ್ಮ ಅಮೂಲ್ಯ ಸಮಯವನ್ನು ಒಳ್ಳೆಯ ಕೆಲಸಗಳಿಗೆ ಮೀಸಲಿಟ್ಟು ಉತ್ತಮ ಪ್ರಜೆಗಳಾಗಿ ಹೊರಹುಮ್ಮಿರಿ ಎಂದು ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ.ರೆಡ್ಡಿ ಕಿವಿಮಾತು ಹೇಳಿದರು.ತಾಲೂಕಿನ ಅಂಗರೇಖನಹಳ್ಳಿ ಗ್ರಾಮದಲ್ಲಿ ಎ ಎಸ್ ಸ್ಪೋರ್ಟ್ಸ್ ಕ್ಲಬ್,ಶ್ರೀ ಸಾಯಿ ಕ್ರೀಡಾ ಸಂಘ,ಅಭಿ ಸ್ಪೋರ್ಟ್ಸ್ ಮತ್ತು ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಡೆದ ಮೂರು ದಿನಗಳ ಎ ಎಸ್ ಕಪ್ 2025 ಕ್ರಿಕೆಟ್ ಟೂರ್ನಿ ಹಮ್ಮಿಕೊಳ್ಳಲಾಗಿದ್ದ ಸಮಾರೋಪದಲ್ಲಿ ಮಾತನಾಡಿದರು.
ಮೊಬೈಲ್‌ಗೆ ದಾಸರಾಗದಿರಿಪ್ರಸ್ತುತ ದಿನಗಳಲ್ಲಿ ಮೊಬೈಲ್ ಅನಿರ್ವಾಯ, ಆದರೆ ಅತಿಯಾದ ಮೊಬೈಲ್ ಬಳಕೆ ಒಳ್ಳೆಯದಲ್ಲ, ಪೋಷಕರು ಸಹ ಮಕ್ಕಳ ಅತಿಯಾದ ಮೊಬೈಲ್ ಬಳಕೆಯಿಂದ ಬೇಸತ್ತು ಹೋಗಿದ್ದಾರೆ, ಹೇಗಾದರೂ ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಲೆಂದು ಅವರ ಅಭಿಪ್ರಾಯವಾಗಿದ್ದು, ಯುವಕರು ದೈಹಿಕವಾಗಿ ಸದೃಢರಾಗುವ ನಿಟ್ಟಿನಲ್ಲಿ ಮೊಬೈಲ್ ಬಳಕೆ ಸೀಮಿತಗೊಳಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುಬಹುದು, ಇನ್ನು ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು. ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ಚ್ಯಾಲೆಂಜ್ ಆಗಿ ಸ್ವೀಕರಿಸಬೇಕು. ಸೋತರೆ ದ್ವೇಷ ಕಟ್ಟಿಕೊಳ್ಳಬಾರದು, ಕ್ರಿಕೆಟ್ ಬೆಟ್ಟಿಂಗ್ ಆಸೆಗೆ ಒಳಗಾಗದೆ ಕೇವಲ ಮನೋರಂಜನೆಗಾಗಿ ಕ್ರೀಡೆಗಳನ್ನು ವೀಕ್ಷಿಸಿ ಎಂದು ಯುವಕರಿಗೆ ಕಿವಿ ಮಾತು ಹೇಳಿದರು.ವಿಜೇತರಿಗೆ ಬಹುಮಾನ ವಿತರಣೆ
ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆರ್ ಹೆಚ್ ಎಲ್ ತಂಡ,ಎಂ ಸಿ ಸಿ ಗೌರಿಬಿದನೂರು ತಂಡದ ವಿರುದ್ಧ ಜಯ ಸಾಧಿಸಿ ಟ್ರೋಫಿ ಜೊತೆಗೆ 66.666 ರೂ ಮೊತ್ತವನ್ನು ಪಡೆದುಕೊಂಡರೆ ರನ್ನರ್ ಅಪ್ ಸ್ಥಾನ ಪಡೆದ ಎಂ ಸಿ ಸಿ ತಂಡಕ್ಕೆ ಟ್ರೋಫಿ ಜೊತೆಗೆ 33.333 ರೂ ನಗದು ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡ ಅಂಗರೇಖನಹಳ್ಳಿ ರವಿ, ಕೃಷಿಕ ಜಿ.ಎನ್. ನಾರಾಯಣಸ್ವಾಮಿ, ಅಂಗರೇಖನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಘು,ಭಗತ್‌ಸಿಂಗ್ ಚಾರಿಟಬಲ್ ಸದಸ್ಯರು, ಕ್ರೀಡಾ ಪಟುಗಳು, ಗ್ರಾಮಸ್ಥರು,ಇದ್ದರು.