ಸಾರಾಂಶ
ಶಾಲೆಗಳಲ್ಲಿ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಮೌಲ್ಯಯುತ ಶಿಕ್ಷಣ ಕೊಡಬೇಕು ಎಂದು ಕುಂಚಿಡಿಗ ಮಠದ ಪೀಠಾಧ್ಯಕ್ಷ ಡಾ॥ ಹನುಮಂತನಾಥ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಶಾಲೆಗಳಲ್ಲಿ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಮೌಲ್ಯಯುತ ಶಿಕ್ಷಣ ಕೊಡಬೇಕು ಎಂದು ಕುಂಚಿಡಿಗ ಮಠದ ಪೀಠಾಧ್ಯಕ್ಷ ಡಾ॥ ಹನುಮಂತನಾಥ ಸ್ವಾಮೀಜಿ ಹೇಳಿದರು.ದಾಸರಹಳ್ಳಿಯ ತೆಂಗಿನ ತೋಟ ರಸ್ತೆಯಲ್ಲಿರುವ ನ್ಯೂ ಶಾರದ ವಿದ್ಯಾಮಂದಿರದಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭದಲ್ಲಿ ಮಾತನಾಡಿ, 10ನೇ ತರಗತಿ ವಿದ್ಯಾರ್ಥಿಗಳ ಜೀವನದ ಮೊದಲನೇ ಸೋಪಾನವಾಗಿದೆ ಎಂದರು.
ಶಾಲೆಯ ಸಂಸ್ಥಾಪಕ ಡಾ.ವೇಣುಗೋಪಾಲ್ ಮಾತನಾಡಿದರು. ಈ ವೇಳೆ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯರಿಗೆ ಪಾದಪೂಜೆ ನೆರವೇರಿಸಿ ಆರ್ಶೀವಾದ ಪಡೆದರು. ಶಾಲೆಯ ಪ್ರಾಶುಂಪಾಲ ಶೇಷಾದ್ರಿ, ಆದರ್ಶ್, ಮಲ್ಲಿಕಾರ್ಜುನ್ ಸ್ವಾಮಿ, ಶಾಲಾ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))